ಬೀದರ್

ರಾಷ್ಟ್ರೀಯ ಮಾಧ್ಯಮ‌ ಸಮ್ಮೇಳನ ಬೀದರ್ ಜಿಲ್ಲೆಯ 15 ಜನ ಪತ್ರಕರ್ತರನ್ನು ವೇದಿಕೆಗೆ ಕರೆಸಿ ಗೌರವ

ರಾಜಸ್ಥಾನ ರಾಜ್ಯದ ಶಿರೊಯಿ ಜಿಲ್ಲೆಯಲ್ಲಿರುವ ಹಿಮಾಲಯ ಪರ್ವತದ ಬಳಿಕ ಭಾರತದ ಅತ್ಯಂತ ಎತ್ತರದ ಪರ್ವತವಾದ ಅರಾವಳಿ ಪರ್ವತದ ತಪ್ಪಲಿನಲ್ಲಿರುವ ಆನಂದ ಸರೋವರದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರಿಸ್ ಈಶ್ವರಿಯ ವಿಶ್ವವಿದ್ಯಾಲಯದ ಪ್ರಧಾನ ಕೇಂದ್ರವಾದ ಮೌಂಟ್ ಅಬುದಲ್ಲಿ ಗುರುವಾರ ರಾಷ್ಟ್ರೀಯ ಮಾಧ್ಯಮ‌ ಸಮ್ಮೇಳನದ ಮೊದಲ ದಿನದಂದು ದೇಶದ ಹಾಗೂ ನೇಪಾಳದ ಪತ್ರಕರ್ತರನ್ನು ವೇದಿಕೆ ಕರೆದ ಹಾಗೆ ಕರ್ನಾಟಕದ ಕೀರಿಟಪ್ರಾಯ ಗಡಿ ಜಿಲ್ಲೆ ಬೀದರ್ ಜಿಲ್ಲೆಯಿಂದ ಸಮ್ಮೇಲನಕ್ಕೆ ಆಗಮಿಸಿದ 15 ಜನ ಪತ್ರಕರ್ತರನ್ನು ವೇದಿಕೆಗೆ ಕರೆಸಿ ಕಾಣಿಕೆ ರೂಪದಲ್ಲಿ ಬ್ರಹ್ಮಾಕುಮಾರಿಸ್ ಬ್ಯಾಗ್, ವಿಷ್ಣು-ಲಕ್ಷ್ಮೀ ಫೋಟೊ ಅಥವಾ ಓಂ ಶಾಂತಿ ಡೈರಿ ಹಾಗೂ ಪೆನ್ ಜೊತೆಗೆ ಕೊಬ್ಬರಿ ಮಿಶ್ರಿತ ಮಿಠಾಯಿ ಮಿಶ್ರಿತ ಪ್ರಸಾದ ನೀಡಿ ಗೌರವಿಸಿದರು. ಕರ್ನಾಟಕ‌ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಫ್ರಧಾನ‌ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಸಂಘದ ಕಮಲನಗರ ತಾಲೂಕಾಧ್ಯಕ್ಷ ಗಣಪತಿ ಕರ್ನುಳೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಶರದ ಘಂಟೆ, ಸಂತೋಷ ಚಟ್ಡಿ, ಭಾರತೀಯ ಕರ್ಯನಿರತ ಪತ್ರಕರ್ತರ ಒಕ್ಕೂದದ ಸದಸ್ಯ ದೀಪಕ ಮನ್ನಳ್ಳಿ, ಕಕಾಪಸಂ ಇತರೆ ಸದಸ್ಯರಾದ ಅಮರೇಶ ಚಿದ್ರೆ, ಚಂದ್ರಕಾಂತ ಗಳಗೆ, ಭವರಾವ ಹೇಡೆ, ವಿಜಯಕುಮಾರ ಅಷ್ಟುರೆ, ಮಾಧು ಬರ್ಗೆ, ನಅಮರ ಸ್ವಾಮಿ ಸ್ತಾವರಮಠ, ರಾಜಸೇಖರ ಅಜ್ಜಾ, ಬಾಲಾಜಿ ಫಿರಂಗೆ, ಪರಮೇಶ ರಾಂಪುರೆ,ಸವಿತಾ ಅಜ್ಜಾ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಕಾಣಿಕೆ ಹಾಗೂ ಪ್ರಸಾದ ಸ್ವೀಕರಿಸಿದರು.

Ghantepatrike kannada daily news Paper

Leave a Reply

error: Content is protected !!