“ರಾಷ್ಟ್ರೀಯ ತೋಟಗಾರಿಕೆ ದಿನ ಆಚರಣೆ”
ಬೀದರ ಜಿಲ್ಲೆಯ ಜನವಾಡ ಹತ್ತಿರದ ಐಸಿಎಆರ್ – ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 08-08-2023 ರಂದು ಮಂಗಳವಾರ ಮುಂಜಾನೆ 10.30 ಗಂಟೆಗೆ “ರಾಷ್ಟ್ರೀಯ ತೋಟಗಾರಿಕೆ ದಿನಾಚರಣೆ” ಆಚರಿಸಲಾಯಿತು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತೋಟಗಾರಿಕೆ ಅಭಿವೃದ್ಧಿಗಾಗಿ ಶ್ರಮಿಸಿ ತೋಟಗಾರಿಕೆ ಬೆಳೆಯನ್ನು ಜನಸಾಮನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅನೇಕ ಸಂಸÉ್ಥಗಳನ್ನು ಹುಟ್ಟುಹಾಕಲು ಕಾರಣಿಕರ್ತರಾದ , ತೋಟಗಾರಿಕೆಯ ಪಿತಾಮಹಾ ರೆನಿಸಿದ ತೋಟಗಾರಿಕೆ ರತ್ನ ಡಾ. ಮರಿಗೌಡ ರವರ ಜನ್ಮ ದಿನವನ್ನು ಆಚರಿಸಲಾಗಿದೆ. ಈ ನಿಮಿತ್ಯ ಪಪಾಯಾ ಬೆಳೆಯ ಬೇಸಾಯ ಕ್ರಮಗಳು ಕುರಿತು ತರಬೇತಿ ಆಯೋಜಿಸಲಾಗಿತ್ತು. ತರಬೇತಿ ಉದ್ಘಾಟನೆಯನ್ನು ಸಸಿಗೆ ನೀರೆರೆಯುವ ಮೂಲಕ ಪ್ರಗತಿಪರ ರೈತರಾದ ಶ್ರೀ. ನಾಗೆಂದ್ರ ಬಿರಾದಾರ ರವರು ನೆರವೇರಿಸಿ ಮಾತನಾಡುತ್ತ ತಾವು ಮಾಡಿದ ತೋಟಗಾರಿಕೆ ಬೆಳೆಗಳಲ್ಲಿ ಸಾಧನೆಗೆ ವೈಜ್ಞಾನಿಕ ಅಳವಡಿಕೆ ಮತ್ತು ಸುಧಾರಿತ ತಂತ್ರಜ್ಞಾನಗಳ ಬಳಕೆ ಹೇಗೆ ಪೂರಕವಾದವೆಂಬ ಸಂಗತಿ ಹಂಚಿಕೊಂಡರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕೆವಿಕೆಯ ಮುಖ್ಯಸ್ಥರಾದ ಡಾ. ಸುನೀಲಕುಮಾರ ಎನ್.ಎಮ್ ರವರು ಜಿಲ್ಲೆಯ ರೈತರಿಗೆ ಕೃಷಿಯಲ್ಲಿ ಅಭಿವೃದ್ಧಿ ಹೊಂದುವ ನೀಟಿನಲ್ಲಿ ಪೂರಕವಾದ ತಾಂತ್ರಿಕ ಮಾಹಿತಿ ಹಾಗೂ ಸೂಕ್ತ ವಿಸ್ತರಣಾ ಕಾರ್ಯಕ್ರಮಗಳನ್ನು ರೂಪಿಸುತ್ತ ಬಂದಿದೆ. ಅದರ ಅಂಗವಾಗಿ ಈ ದಿನ ಸದರಿ ಕಾರ್ಯಕ್ರಮವನ್ನು ನೆರವೆರಿಸಲಾಗಿದೆ ಹಾಗೂ ತೋಟಗಾರಿಕೆ ರತ್ನ ಡಾ. ಮರಿಗೌಡ ರವರನ್ನು ಸ್ಮರಿಸಿ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕಾಗಿ ಕರೆನೀಡಿದರು. ತರಬೇತಿಯ ಆರಂಭದಲ್ಲಿ ಡಾ. ಮರಿಗೌಡ ರವರ ಸಾಕ್ಷಚಿತ್ರವನ್ನು ಪ್ರದರ್ಶೀಸಲಾಯಿತು. ನಂತರದಲ್ಲಿ ಕೆವಿಕೆಯ ತೋಟಗಾರಿಕೆ ವಿಜ್ಞಾನಿಗಳಾದ ಡಾ. ನಿಂಗದಳ್ಳಿ ಮಲ್ಲಿಕಾರ್ಜುನ ರವರು ಪಪಾಯಾ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ತರಬೇತಿ ನೀಡಿದರು. ಹೆಚ್ಚಿನ ಲಾಭಕ್ಕಾಗಿ ಪಪಾಯ ಬೆಳೆಯಲ್ಲಿ ಬೀಜೋತ್ಪಾದನಾ ತಂತ್ರಜ್ಞಾನಗಳ ಕುರಿತು ಕೆವಿಕೆಯ ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ವಿಜ್ಞಾನಿ ಡಾ. ಜ್ಞಾನದೇವ.ಬಿ ರವರು ತಿಳಿಸಿದ್ದರು. ಕೊನೆಯಲ್ಲಿ ತರಬೇತಿಯಲ್ಲಿ ಪಪಾಯ ಬೆಳೆಯುವ ರೈತರೊಂದಿಗೆ ಚರ್ಚೆ ಮಾಡಲಾಯಿತು.