ರಾಷ್ಟ್ರದ ಹೀತಗೋಸ್ಕರ ಭೂತಾಯಿಯ ರಕ್ಷಣೆಗೋಸ್ಕರ ಯಾವ ತ್ಯಾಗಕ್ಕೂ ಯುವಕರು ಸಿದ್ಧರಾಗಬೇಕಾಗಿದೆ : ಪರಮ ಪೂಜ್ಯ ಶ್ರೀ ಹಾವಗಿಲಿಂಗಶಿವಾಚಾರ್ಯರು
ಬೀದರ : ಸೆ.30:ಅಪ್ಪಟ ದೇಶ ಭಕ್ತ ಕ್ರಾಂತಿಕಾರಿ ಭಗತಸಿಂಗರಂತೆ ಮಾತೃಭೂಮಿಗಾಗಿ ದೇಶಭಕ್ತಿ ಹೊಂದಿ ರಾಷ್ಟ್ರ ಪ್ರೇಮದಿಂದ ರಾಷ್ಟ್ರಿಯ ಮನೋಭಾವನೆ ತಾಳಿ, ಭಾರತೀಯರಾಗಿ ರಾಷ್ಟ್ರದ ಹೀತಗೋಸ್ಕರ ಭೂತಾಯಿಯ ರಕ್ಷಣೆಗೋಸ್ಕರ ಯಾವ ತ್ಯಾಗಕ್ಕೂ ಯುವಕರು ಸಿದ್ಧರಾಗಬೇಕಾಗಿದೆ ಎಂದು ಹಲಬರ್ಗಾ ರಾಚೋಟೇಶ್ವರ ವಿರಕ್ತ ಮಠದ ಪರಮ ಪೂಜ್ಯ ಶ್ರೀ ಹಾವಗಿಲಿಂಗ ಶಿವಾಚಾರ್ಯರರು ಕರೆ ನೀಡಿದರು.
ಬೀದರ ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಏರ್ಪಡಿಸಿದ ಕ್ರಾಂತಿಕಾರಿ ಭಗತಸಿಂಗ್ ಅವರ 117ನೇ ಜಯಂತಿ ಅಂಗವಾಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಜಾನಪದ ಅಕಾಡೇಮಿ ಸದಸ್ಯರಾದ ವಿಜಯಕುಮಾರ ಸೋನಾರೆ ಅವರು ಮಾತನಾಡಿ, ಲಾಡಗೇರಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯರು ಮಾತೃಹೃದಯಿಯಾಗಿದ್ದಾರೆ. ಸರ್ವರನ್ನು ಸಮನಾಗಿ ಕಾಣುವ ಜಾತಿ ಭೇದವೆನ್ನದೇ ಎಲ್ಲರನ್ನು ತಮ್ಮವರೆನ್ನುವ ಭಾವ ಹೊಂದಿರುವ ಇವರು ಶ್ರೀ ಮಠದಲ್ಲಿ ನಾಟಕ ಕಲಾವಿರಿಗೆ ಕರೆಸಿ ಅವರಿಂದ ತಾಯಿಗೆ ತಕ್ಕ ಮಗ ಎಂಬ ಸುಂದರ ಸಮಾಜೀಕ ನಾಟಕ ಪ್ರದರ್ಶನ ಮಾಡಿಸಿ ನಾಟಕ ಕಂಪನಿ ಮಾಲಿಕ ಬಸವರಾಜ ಅವರಿಗೆ ಶ್ರೀ ಮಠದಿಂದ 50 ಸಾವಿರ ರೂಪಾಯಿ ಆಶಿರ್ವಾದ ರೂಪದಲ್ಲಿ ನೀಡಿ ಕಲಾ ಪೆÇಷಕರಾಗಿ ಮಾನವೀಯತೆ ಮೆರೆದಿದ್ದಾರೆ ಎಂದು ಕೊಂಡಾಡಿದರು.
ಬಿಜೆಪಿ ಮುಖಂಡ ನಾಗರಾಜ ಕರ್ಪೂರ ಅವರು ಮಾತನಾಡಿ ದೇಶಭಕ್ತ ಭಗತಸಿಂಗ್ ಅವರು ಬಾಲ್ಯದಿಂದಲೇ ದೇಶಭಕ್ತಿ, ದೇಶಪ್ರೇಮ ಮೈಗೂಡಿಸಿಕೊಂಡಿದ್ದ ಅವರು ಬ್ರಿಟಿಷರ ಕಪಿ ಮುಷ್ಠಿಯಿಂದ ಮಾತೃಭೂಮಿ ಭಾರತ ಮಾತೆಯ ವಿಮೋಚನೆಗಾಗಿ ಕಠಿಣ ಸಂಘರ್ಷ ಮಾಡಿದ್ದರು. ಬ್ರಿಟೀಷ ಅಧಿಕಾರಿ ಮತ್ತು ಸೈನಿಕರ ವಿರುದ್ಧ ತಮ್ಮ ಬೆಂಬಲಿಗರಾದ ಸುಖದೇವ ರಾಜಗುರು ಅವರೊಡಗೂಡಿ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರು. ಅವರ ಆದರ್ಶ ಜೀವನ ಇಂದಿನ ಯುವ ಪಿಳಿಗೆಗೆ ಮಾರ್ಗದರ್ಶನವಾಗಿದೆ ಎಂದರು.
ಜೈ ಭಾರತ ಸೇವಾ ಸಮಿತಿ ನವ ದೆಹಲಿ (ರಿ) ರಾಷ್ಟ್ರಿಯ ಸಂಸ್ಥಾಪಕ ಅಧ್ಯಕ್ಷರು ನಿರಂತರ ಅನ್ನದಾಸೋಹಿಗೆ ಪ್ರಸಿದ್ದಿ ಪಡೆದಿರುವ ಪರಮ ಪೂಜ್ಯ ಶ್ರೀ ನಿರಗುಡಿ ಹವಾ ಮಲ್ಲಿನಾಥ ಮಹಾರಾಜ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲಾಡಗೇರಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ವೈಷ್ಣೋದೇವಿ ಆರಾಧಕರಾದ ಪೂಜ್ಯ ಶ್ರಿ ಅಮೃತರಾವ್, ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸುನೀಲ ಭಾವಿಕಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಕಾಂತ ಅಷ್ಟೂರ್, ಮಲ್ಲಪ್ಪ ಹುಲೇಪ್ಪನೋರ್, ಶಿವರಾಜ ಅಷ್ಟೂರ್, ಕಂಟೇಪ್ಪಾ ಪಾಟೀಲ್ ಹಳ್ಳದಕೇರಿ, ಸೋಮಶೇಖರ್ ನಿಲಪ್ಪನೋರ್, ಮಹಾರುದ್ರಪ್ಪಾ ಚಿಕ್ಲೆ, ಅಶೋಕ ಹಳ್ಳದಕೇರಿ, ಪಪ್ಪು ಪಾಟೀಲ್ ಖಾನಾಪೂರ್, ಮಾಣಿಕ ಮೇತ್ರೆ, ಶ್ರೀಮಂತ ಸಪಾಟೆ, ಮಾರುತಿ ಮೇತ್ರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿರುಪಾಕ್ಷಯ್ಯಾ ಸ್ವಾಮಿ ಸ್ವಾಗತಿಸಿದರು, ಸಿದ್ರಾಮಯ್ಯಾ ಸ್ವಾಮಿ ನೀರೂಪಿಸಿದರೇ, ದೀಪಕ್ ಥಮಕೆ ವಂದಿಸಿದರು.