ರಾಷ್ಟಿçÃಯ ಸೇವಾ ಯೋಜನೆ ವಾರ್ಷಿಕ ವಿಶೆಷ ಶಿಬಿರ
ಕರ್ನಾಟಕ ಸರ್ಕಾರ, ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೀದರ.ರಾಷ್ಟಿçÃಯ ಸೇವಾ ಯೋಜನೆ ಘಟಕ-1 ಮತ್ತು 2 ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ; 07-08-2023 ರಿಂದ13-08-2023ವರೆಗೆ ವಾರ್ಷಿಕ ವಿಶೆಷ ಶಿಬಿರ ಹಮ್ಮಿಕೊಳ್ಳಲಾಯಿತು. ಶಿಬಿರದ ಉದ್ಘಾಟನೆ ದತ್ತುಗ್ರಾಮದ ನವಲಸಪೂರನಲ್ಲಿ ನಡೆಯಿತು. ಶ್ರೀಮಂಡಲ ಗ್ರಾಮ ಪಂಚಾಯಿತ ಉಪಾಧ್ಯಕ್ಷರಾದ ಶ್ರೀಮತಿ ರೇಖಾ ಪಂಡರಿವರು ಧ್ವಜಾರೋಹಣ ಮತ್ತು ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನವಲಸಪೂರ ಗ್ರಾಮ ಪಂಚಾಯತ ಸದಸ್ಯರು \ ಸೂರ್ಯಕಾಂತ ಉಪ್ಪೆಯವರು, ಕಾಲೇಜಿನ ಸಿ.ಡಿ.ಸಿ ಸದಸ್ಯರಾದ ಪ್ರೋ.ಅಂಬ್ರೆಪ್ಪಾ ಅವರು, ಬೀದರ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿಗಳು ಆದಡಾ.ಕಿರಣಎಮ್ ಪಾಟಿಲ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಜಯಶ್ರೀ ಪ್ರಭಾರವರು ನಡೆಸಿಕೊಟ್ಟರು.ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಉಪ್ಪೆಯವರು ವಿದ್ಯಾರ್ಥಿಜೀವನದಲ್ಲಿ ಗುರುಗಳ ಮಹತ್ವವನ್ನು ಕುರಿತು ಮಾತನಾಡಿದ್ದರು .ಪ್ರೊ.ಅಂಬ್ರೆಪ್ಪಾ ಅವರು ರಾಷ್ಟಿçÃಯ ಸೇವಾ ಯೋಜನೆಯಧ್ಯೇಯ ಉದ್ದೇಶಗಳನ್ನು ಕುರಿತು ಮಾತನಾಡಿದರು.ಡಾ. ಕಿರಣ ಪಾಟೀಲರವರು ಮಾನಸಿಕ ಆರೋಗ್ಯದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿಯನ್ನು ಮೂಡಿಸಿದ್ದರು.ಅಧ್ಯಕ್ಷರಾದ ಪ್ರೋ.ಜಯಶ್ರೀ ಪ್ರಭಾರವರು ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಎಸ್ ಮಹತ್ವವನ್ನು ತಿಳಿಸಿದರು.ಒಂದು ವಾರದ ಈ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಶ್ರಮದಾನ ಜೊತೆಗೆ ನುರಿತ ಪ್ರಾಧ್ಯಾಪಕರು ಮತ್ತು ಆರೋಗ್ಯಧಿಕಾರಿಗಳು ಭಾಗವಹಿಸಿ ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸವನ್ನು ನೀಡಿದ್ದರು.ಎನ್.ಎಸ್.ಎಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭಕ್ಕೆ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ.ಬಿ.ಎಸ್. ಬಿರಾದರ ಅವರು ಹಾಗೂ ವಸತಿಯುಕ್ತ ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೋ.ಅಶೋಕ ಪಾಟಿಲರವರು ಮುಖ್ಯತಿಥಿಗಳಾಗಿ ಆಗಮಿಸಿದ್ದರು.ಪ್ರೋ. ಬಿರಾದರರವರು ಎನ್.ಎಸ್.ಎಸ್.ನಲ್ಲಿ ಕಲಿತಿರುವ ಜೀವ ಕೌಶ್ಯಲಗಳನ್ನು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಬಹಳ ಉಪಯುಕ್ತ ಎಂದು ಹೇಳಿದರು. ಮತ್ತು ಕಾಲೇಜಿನ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡಿದ್ದರು .ಪ್ರೊ.ಅಶೋಕ ಪಾಟೀಲರವರು ಎನ್.ಎಸ್.ಎಸ್ ಒಂದು ವಾರದ ಶಿಬಿರದೊಂದಿಗೆ ಮುಕ್ತಾಯ ಆಗದೆ ಸ್ವಯಂ ಸೇವೆಕರ ಜೀವನವನ್ನೇ ಅರ್ಥಪೂರ್ಣವಾದಂತº Àರೀತಿಯಲ್ಲಿ ಬದುಕಲು ಸಹಾಯ ಮಾಡುತ್ತೆಎಂದು ನುಡಿದರು. ರಾಷ್ಟಿçÃಯ ಸೇವಾ ಯೋಜನೆಯ ಎರಡು ಘಟಕಗಳ ಸಂಯೋಜಾಧಿಕಾರಿಗಳಾದ ಬಸವರಾಜ ರಾಜೋಳೆ ಹಾಗೂ ಡಾ.ಶೀಲಾ ಎನ್.ಎಸ್. ಅವರು ಮತ್ತು ಸಲಹಾ ಸಮಿತಿ ಸದಸ್ಯರ ಮಾರ್ಗದರ್ಶನದಲ್ಲಿ ಒಂದು ವಾರದ ಈ ಶಿಬಿರವನ್ನು ಯಶಸ್ವಿಯಾಗಿ ಸಂಪನ್ನವಾಯಿತು. ಎನ್.ಎಸ್.ಎಸ್. 100 ಸ್ವಯಂ ಸೇವಕರು, ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಶಿಬಿರದ ಧ್ವಜಾರೋಹಣ ಹಾಗೂ ಶ್ರಮದಾನದಲ್ಲಿ ಪಾಲ್ಗೊಂಡರು.