ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆಗೆ ಆಗ್ರಹಿಸಿ ಜು.16ರಂದು ಕಲ್ಯಾಣ ಕರ್ನಾಟಕ ಹೋರಾಟ ದಿನಾಚರಣೆ: ಡಾ.ಕಳಸ
ಬೀದರ್: ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾದ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಬೇಕೆಂದು ಆಗ್ರಹಿಸಿ ಜುಲೈ 16ರಂದು ಕಲ್ಯಾಣ ಕರ್ನಾಟಕ ಭಾಗದ ಎಳು ಜಿಲ್ಲೆಗಳಲ್ಲಿ ಹೋರಾಟ ದಿನ ಹಮ್ಮಿಕೊಳ್ಳಲಾಗುವುದೆಂದು ಎಮ್ಸ್ ಆಸ್ಪತ್ರೆ ಹೋರಾಟ ಸಮಿತಿ ಪ್ರಧಾನ ಸಂಚಾಲಕರು ರಾಯಚೂರಿನ ಡಾ.ಬಸವರಾಜ ಕಳಸ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಪ್ರಾದೇಶಿಕ ಅಸಮತೋಲನೆ ನಿವಾರಣೆಗಾಗಿ, ಡಾ. ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ರಾಯಚೂರಿನಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐ.ಐ.ಟಿ) ಸ್ಥಾಪಿಸಬೇಕೆಂಬ ಮಹತ್ವದ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅಂದಿನ ಸರಕಾರ ಅನುμÁ್ಠನದಲ್ಲಿ
ತೋರಿದ ವಿಳಂಬ ನೀತಿಯನ್ನು ಖಂಡಿಸಿ ನಮ್ಮ ಹೋರಾಟ ಸಮಿತಿ ಸುದೀರ್ಘ ಹೋರಾಟ ನಡೆಸಿದಾಗ್ಯೂ, ರಾಜಕೀಯ ಇಚ್ಚಾಶಕ್ತಿಯ ಕೊರತೆಯೇ ಕಾರಣ ಎಂದರು.
ಎಮ್ಸ್ ಆಸ್ಪತ್ರೆ ಧಾರವಾಡದ ಪಾಲಾಗಿರುವುದು ವಿಪರ್ಯಾಸ. ಇದರಿಂದ ರಾಯಚೂರು ಜಿಲ್ಲೆಗೆ ಮತ್ತು ಕಲ್ಯಾಣ ಕರ್ನಾಟಕಕ್ಕೆ ಮಾಡಿದ ಮಹಾದ್ರೋಹವಾಗಿದೆ ಎಂದವರು ಹೇಳಿದರು.
ಐಐಟಿಗೆ ಪರ್ಯಾಯವಾಗಿ ರಾಯಚೂರಿಗೆ ‘ಏಮ್ಸ್’ ಅನ್ನು ಮಂಜೂರು ಮಾಡಬೇಕು,. ಬೀದರ್‍ಗೆ ಐ.ಐ.ಟಿ ಮಂಜೂರು ಮಾಡಬೇಕು, ಕಲಬುರಗಿಗೆ ಈ ಮೊದಲೇ ಮಂಜೂರಿಯಾಗಿದ್ದ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪಿಸಬೇಕು. ಈ ತಿಂಗಳ 23ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ನಲ್ಲಿ ಈ ಮೇಲಿನ ಘೋಷಣೆಗಳನ್ನು ಮಾಡಬೇಕೆಂದು ಡಾ.ಬಸವರಾಜ ತಿಳಿಸಿದರು.
ಈ ತಿಂಗಳ 22ರಂದು ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ನಮ್ಮ ಕಲ್ಯಾಣ ಕರ್ನಟಕ ಭಾಗದ ಐದು ಜನ ಸಂಸದರು ಸಂಸತ್ತಿನೊಳಗೆ ಹೋರಾಟ ನಡೆಸಬೇಕು, ನಾವು ಆಗಸ್ಟ್ 6ರಿಂದ 12ರ ವರೆಗೆ ದೆಹಲಿಯ ಜಂತರ, ಮಂತರನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದೇ ಸಂದರ್ಭದಲ್ಲಿ ಕೇಂದ್ರ ಗ್ರಹ ಸಚಿವ ಅಮಿತ ಶಾ ಅವರಿಗೆ ಭೇಟಿ ನೀಡಿ ನಮ್ಮ ಬೇಡಿಕೆ ಮನವರಿಕೆ ಮಾಡುವುದರ ಜೊತೆಗೆ ಈ ಹಿಂದೆ ಪ್ರಲ್ಹಾದ ಜೋಷಿ ಅವರು ಪದೆ ಪದೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಂದಿರುವ ಎಲ್ಲ ಯೋಜನೆಗಳನ್ನು ಕೇವಲ ಧಾರವಾಡಕ್ಕೆ ಕೊಂಡೊಯ್ಯುತ್ತಿರುವ ಬಗ್ಗೆ ದೂರು ಸಹ ನೀಡಲಾಗುವುದು ಎಂದರು.
ಈ ಹಿಂದೆ ಜಗದಿಶ ಶಟ್ಟರ್ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ರಾಯಚೂರಿಗೆ ಏಮ್ಸ್ ಆಸ್ಪತ್ರೆ ಜರೂರಿ ಇದೆ ಎಂದು ತಿಳಿಸಿದ್ದರು. ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತು ಕೊಟ್ಟು ತಪ್ಪಿ ನಡೆದರು. ಆದರೆ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಇತ್ತಿಚೀಗೆ ಸ್ವತಃ ಪ್ರಧಾನಿಗಳಿಗೆ ಭೇಟಿ ಮಾಡಿ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆಯ ಪ್ರಸ್ತಾವನೆ ಸಲ್ಲಿಸಿದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಬರೀ ಮುಖ ಅಲ್ಲಾಡಿಸಿದರೆ ಹೊರತು ಯಾವ ಪ್ರತಿಕ್ರಿಯ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದಿನ ಬೊಮ್ಮಾಯಿ ಸರ್ಕಾರ ಮಾಡಿರುವ ಅನ್ಯಾಯದ ಪ್ರತಿಫಲವಾಗಿ ಅವರ ಸರ್ಕಾರ ಪತನವಾಯಿತು. ಕೇಂದ್ರವು ಪ್ರಲ್ಹಾದ ಜೋಷಿ ಮಾತು ಕೇಳಿ ಐ.ಐ.ಟಿ ಕೇಂದ್ರ ಧಾರವಾಡಕ್ಕೆ ಶಿಫ್ಟ್ ಮಾಡಿರುವುದರ ಫಲವಾಗಿ ಇಡೀ ಕಲ್ಯಾಣ ಕರ್ನಾಟಕದ ಐದು ಸಂಸದಿಯ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ. ಮುಂದಾದರೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಲ್ಹಾದ್ ಜೋಷಿ ಮಾತು ಕೇಳದೆ ಕಲ್ಯಾಣ ಕರ್ನಾಟಕದ ಎಲ್ಲ ಬೇಡಿಕೆಗಳನ್ನು ಇಡೇರಿಸಬೇಕೆಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸಿಎಂ ಸಿದ್ಧರಾಮಯ್ಯ ಅವರು ಕೇಂದ್ರಕ್ಕೆ ಈ ಪ್ರಸ್ತಾವನೆ ಸಲ್ಲಿಸಿದ್ದು, ಈ ತಿಂಗಳ 23ರಂದು ಮಂಡಿಸಲಿರುವ ಕೇಂದ್ರ ಬಜೆಟ್‍ನಲ್ಲಿ ಮೇಲಿನ ಬೇಡಿಕೆಗಳನ್ನು ಈಡೇರಿಸಬೇಲಕೆಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ನಾವುಗಳು ಮೈಸೂರು ಅರಸರ ಮಾದರಿಯಲ್ಲಿ ಅಭಿವೃದ್ಧಿ ಹೊಂದಬಹುದೆಂಬ ನಂಬಿಕೆಯಿಂದ ಫಜಲ್ ಅಲಿ ಕಮಿಷನ್‍ಗೆ ಒಪ್ಪಿ ಕರ್ನಾಟಕಕ್ಕೆ ಸೇರಿದೆವು. 1956 ನವೆಂಬರ್ 1ರಂದು ಕನ್ನಡ ಭಾಷೆಗೆ ಬೆಲೆ ನೀಡಿ ಕರ್ನಟಕದಲ್ಲಿ ಶಾಶ್ವತವಾಗಿ ಉಳಿದುಕೊಂಡೆವು. ಆದರೆ ಎಲ್ಲ ಸರ್ಕಾರಗಳು ನಮ್ಮ ಮೇಲೆ ಅನ್ಯಾಯ ಮಾಡುತ್ತ ಸಾಗುತ್ತಿವೆ. ನಮ್ಮ ಬೇಡಿಕೆಗಳಿಗೆ ಸದಾ ಎಳ್ಳು ನೀರು ಬಿಡುತ್ತಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಈ ಭಾಗದ ಸಂಸದರು, ಮಂತ್ರಿಗಳು ಹಾಗೂ ಶಾಸಕರು ಸ್ವಾಭಿಮಾನ ಮೆರೆಯಬೇಕೆಂದು ಕರೆ ನೀಡಿದರು.
ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಡಳಿತ ಮಂಡಳಿ ಸದಸ್ಯರಾದ ಡಾ.ರಜನೀಶ ವಾಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಹ ಸಂಚಾಲಕ ವಿನಕುಮಾರ ಮಾಳಗೆ, ರಾಯಚೂರಿನ ಜಾನ್ ವೆಸ್ಲಿ, ವಿನಯ ಚಿತ್ರಗಾರ, ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಪಾಟೀಲ ಹೊಚಕನಳ್ಳಿ, ನ್ಯಾಯವಾದಿ ಅಶೋಕ ಮಣುರ್, ರೋಹನಕುಮಾರ, ಗುಂಡೇರಾವ ಪಾಟೀಲ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.