ರಾಜ್ಯ ಸಾರಿಗೆ ನೌಕರರಿಗೆ ಸಮಾನದ ವೇತನ ನೀಡುವಂತೆ – ಬಿ.ಎಮ್.ಎಸ್ ಆಗ್ರಹ.
ಅಗಷ್ಟ-2024 ರಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರಿ ನೌಕರರಿಗೆ 7 ನೇ ವೇತನ ಆಯೋಗವನ್ನು ಜಾರಿ ಮಾಡಿ ಘನ ಸರಕಾರದಿಂದ ಆದೇಶ ಹೊರಡಿಸಿರುತ್ತದೆ. ಈ ಮಹತ್ವದ ಕಾರ್ಯಕ್ಕೆ ಸಮಸ್ತ ರಾಜ್ಯ ಸರಕಾರ ನೌಕರರು ಹರ್ಷಭರಿತರಾಗಿರುತ್ತಾರೆ. ಇದಕ್ಕೆ ನಮ್ಮ ಸಾರಿಗೆ ನೌಕರರು ಸಹ ರಾಜ್ಯ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತದೆ. ಅದೇ ರೀತಿಯಾಗಿ ನಮ್ಮ ಸಾರಿಗೆ ನೌಕರರು ರಾಜ್ಯ ಸಾರಿಗೆ ನೌಕರರಿಗೆ ಸಮಾನದ ವೇತನವನ್ನು ಮಂಜೂರು ಮಾಡುತ್ತಾರೆ ಎಂದು ಆಶಾಭಾವನೆಯನ್ನು ಹೊಂದಿರುತ್ತಾರೆ. ಅಲ್ಲದೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಸಹ ತಾವು ಅಧಿಕಾರಕ್ಕೆ ಬಂದರೆ ಸಾರಿಗೆ ನೌಕರರಿಗೆ ಸರಿಸಮಾನವಾದ ವೇತನವನ್ನು ನೀಡುವುದಾಗಿ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದು, ಅದನ್ನು ಜಾರಿಗೊಳಿಸಲು ಬಿ.ಎಮ್.ಎಸ್ ಸಂಘವು ರಾಜ್ಯ ಸರ್ಕಾರಕ್ಕೆ ಆಗ್ರಹಿ ದಿನಾಂಕ:18.08.2024 ರಂದು ಬಸವಕಲ್ಯಾಣದಿಂದ ಬೆಂಗಳೂರಿಗೆ “ನಮ್ಮ ದುಡಿಮೇ-ನಮ್ಮ ಹಕ್ಕು ಎನ್ನು ಘೋಷವಾಕ್ಯದಿಂದ ಸಾರಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿ.ಎಮ್.ಎಸ್ ಬಿದರ ಸಂಘಟನೆಯು ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಲು ಬಯಸುತ್ತದೆ.
ಬೇಡಿಕೆಗಳು:
1. ವೇತನ ಪರೀಷ್ಕರಣೆ ಕುರಿತು: 01-01-2024 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ಜಾರಿಗೊಳಿಸುವದು.
2. 01.01.2020ರ ವೇತನ ಪರಿಷ್ಕರಣೆಯ 38 ತಿಂಗಳುಗಳ ಹಿಂಬಾಕಿ ವೇತನವನ್ನು ಬಿಡುಗಡೆ ಮಾಡುವದು.
3. ಸಾರಿಗೆ ನೌಕರರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ನಗದು ರಹಿತ ವೈದ್ಯಕೀಯ ಚಿಕತ್ಸೆ ವ್ಯವಸ್ಥೆಯನ್ನು ಜಾರಿಗೊಳಿಸುವುದು.
4. ಆಡಳಿತ ವರ್ಗದಿಂದ ಕಾರ್ಮಿಕ ವರ್ಗಕ್ಕೆ ಆಗುತ್ತಿರುವ ಶೋಷಣೆ, ಕಿರುಕುಳ ತಡೆಗಟ್ಟಲು ವಿಭಾಗದ ಕಾರ್ಮಿಕ ಮುಖಂಡರು ಹಾಗೂ ಅಧಿಕಾರಿಗಳನೊಳ್ಳಗೊಂಡ ಸಮನ್ವಯ ಸಮಿತಿ ರಚನೆ ಮಾಡುವುದು.
5. ಅವೈಜ್ಞಾನಿಕ ಫಾರಂ-4ನ್ನು ಹಾಗೂ ಓIಓಅ ಪದ್ದತಿಯನ್ನು ರದ್ದುಗೊಳಿಸುವದು.
ಇಂದು 18/8/2024 ರಂದು ಬಸವಕಲ್ಯಾಣಿನ ಪರುಶು ಕಟ್ಟೆಯಿಂದ ಭಾರತೀಯ ಮಜದೂರ್ ಸಂಘ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮಾಜದೂರ್ ಸಂಘ ದಿಂದ ಜಾತಾ ಚಾಲನೆ ಮಾನ್ಯ ಹಿರಿಯ ಸಮಾಜಿಕ ಕಾರ್ಯಕರ್ತರು ಹಾಗೂ ಹೋರಾಟಗಾರರ ಗುರುನಾಥ್ ವಡೇ ಸರ್ವರಿಂದ ಚಾಲನೆ ಕೊಟ್ಟರು ಆಗು ಇದೆ ಹೊಳೆ ಅವರು ಸಾರಿಗೆ ನೌಕರ 38 ತಿಂಗಳು ಹಿಂಬಾಕಿ ಹಾಗೂ ಇದೇ ಜನವರಿಯಿಂದ ವೇತನ ಪರಿಷ್ಕರಣೆ ಕೂಡಲೇ ಜಾರಿಗೆ ಮಾಡಬೇಕು ಎಂದು ಒತ್ತಾಯಿಸಿದರು ಭಾರತೀಯ ಮಧುಸಂಗದ ಹಿರಿಯ ಕಾರ್ಯಕರ್ತರ ರಾ ಪ್ರಧಾನ ಕಾರ್ಯದರ್ಶಿಗಳು ಹಾಗೂ
ಅನುಭವ ಮಂಟಪದ ಸಂಚಾಲಕರಾದ ಶ್ರೀ ಶ್ರೀ ಶಿವಾನಂದ ದೇವರು ಅವರ ಆಶೀರ್ವಾದ ಪಡೆಯಲಾಯಿತು
ಈ ಜಾತವನ್ನು ಇಂದು ಬಸವಕಲ್ಯಾಣ ಪರಿಶುಕಟ್ಟೆಯಿಂದ ಚಾಲನೆ ನೀಡಲಾಯಿತು ಬಸವಕಲ್ಯಾಣ ಘಟಕ ಹಾಗೂ ಬಾಲ್ಕೀ ಘಟಕ ದಿಂದ ಔರಾದ್ ಘಟ್ಟಕ್ಕೆ ಹೋಗಿ ಬೀದರಿನ ಘಟಕ ಎರಡು ಮತ್ತು ಘಟಕ ಒಂದರಲ್ಲಿ ಅವು ಕೊನೆಯದಾಗಿ ಹುಮ್ನಾಬಾದ್ ಘಟಕ ಹೀಗೆ ಜಾತ ಜಿಲ್ಲಾದಂತ ಎಲ್ಲಾ ಘಟಕಗಳಿಗೆ ತೆರಳಿ ಕಾರ್ಮಿಕರನ್ನು ಉದ್ದೇಶಿ ಜಾತವನ್ನು ಏರ್ಪಡಿಸಲಾಗಿತ್ತು.
ಈ ಜಾತಾ ದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಮಜದೂರು ಸಂಘ ಒಕ್ಕೂಟ ಬೀದರ್ ಜಿಲ್ಲಾ ಅಧ್ಯಕ್ಷರಾದ ಜಾನ್ಸನ್ ಜನವಾಡಾಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಗುಂಡಪ್ಪ ವಲ್ಲೂರು ಮತ್ತು ಹಿರಿಯ ಕಾರ್ಯಕರ್ತರಾದ ಕವಿರಾಜ್ ಮೂಳೆ ಧನಶೆಟ್ಟಿ ಮನ್ನಾಳೆ ಮಲ್ಲಿಕಾರ್ಜುನ್ ಪಾಟೀಲ್ ಮಹದೇವ ಇಸ್ಲಾಂಪುರ್ ಸಾಧಕ್ ಸಂಜು ಮತ್ತು ವಿಜಯಕುಮಾರ್ ಭಾರತೀಯ ಮ ಮಜದೂರ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ಸಕ್ರಪ್ಪನೂರ್ ಇದ್ದರು.