ರಾಜ್ಯ ಸರ್ಕಾರದ ವತಿಯಿಂದ 10 ಲಕ್ಷ ರೂ.ಗಳ ಪರಿಹಾರ
ಕಳೆದ ಜುಲೈ ತಿಂಗಳ 31ರಂದು ಚಲಿಸುತ್ತಿದ್ದ ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ RPF ಪೇದೆ ಚೇತನ್ ಸಿಂಗ್ ಕ್ಷುಲ್ಲಕ ಕಾರಣಕ್ಕೆ ನಡೆಸಿದ ಗುಂಡಿನ ದಾಳಿಗೆ ಬಲಿಯಾದ ಬೀದರ್ ಜಿಲ್ಲೆಯ ಬೀದರ್ ಗಾದಗಿ ಬಳಿಯ ಹಮಿಲಾಪುರದ ಮುಗ್ದ ಪ್ರಯಾಣಿಕ ಸೈಯದ್ ಸೈಫುದ್ದೀನ್ ಕುಟುಂಬದವರಿಗೆ ನಮ್ಮ ರಾಜ್ಯ ಸರ್ಕಾರದ ವತಿಯಿಂದ 10 ಲಕ್ಷ ರೂ.ಗಳ ಪರಿಹಾರದ ಚೆಕ್ ಅನ್ನು ಇಂದು ಅವರ ಕುಟುಂಬ ಸದಸ್ಯರಿಗೆ ನೀಡಿ ಸಾಂತ್ವನ ಹೇಳಿದ.ಪೌರಾಡಳಿತ & ಹಜ್ ಸಚಿವರಾದ ಶ್ರೀ ರಹಿಂ ಖಾನ, ಅಪರ್ ಜಿಲ್ಲಾಧಿಕಾರಿ ಜೊತೆಗಿದ್ದರು.