ಬೀದರ್

ರಾಜ್ಯ ಮಟ್ಟದ ಯುವಜನೋತ್ಸವ ಬೀದರನಲ್ಲಿ ಆಯೋಜಿಸುವಂತೆ ಮನವಿ

2023-24ನೇ ಸಾಲಿನಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಬೀದರ್ ಜಿಲ್ಲೆಯಲ್ಲಿ ಆಯೋಜಿಸಬೇಕು ಎಂದು ಕರ್ನಾಟಕ ಯುವ ಸಂಘ-ಸಂಸ್ಥೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಸುನೀಲ ಭಾವಿಕಟ್ಟಿ ಅವರು ಯುವ ಸಬಲಿಕರಣ ಮತ್ತು ಕ್ರೀಡಾ ಸಚಿವರಾದ ಬಿ.ನಾಗೆಂದ್ರ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ನಗರಕ್ಕೆ ಭೇಟಿ ನೀಡಿದ್ದ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಬಿ.ನಾಗೇಂದ್ರ ಅವರಿಗೆ ಕರ್ನಾಟಕ ಯುವ ಸಂಘ-ಸಂಸ್ಥೆಗಳ ಒಕ್ಕೂಟ ಜಿಲ್ಲಾ ಘಟಕದಿಂದ ಶಾಲು ಹೊದಿಸಿ, ಸನ್ಮಾನಿಸಿ ಮನವಿ ಸಲ್ಲಿಸಿ ರಾಜ್ಯದಲ್ಲಿ ನೊಂದಾಯಿತ ಕ್ರೀಯಾಶಿಲ ಯುವಕ/ಯುವತಿ ಸಂಘಗಳಿಗೆ ಆದ್ಯತೆ ಮೆರೆಗೆ ರಾಜ್ಯ ಸರಕಾರ ಹೆಚ್ಚು ಧನ ಸಹಾಯ ನೀಡಿ ಸಹಕರಿಸಬೇಕು ಎಂದು ಆಗ್ರಸಿದ್ದಾರೆ.

ಜಿಲ್ಲಾ ಹಾಗೂ ರಾಜ್ಯ ಯುವ ಪ್ರಶಸ್ತಿ ಪ್ರಧಾನ ಕಾರ್ಯವು ನಿಂತುಹೋಗಿದ್ದು ಈ ಹಿಂದಿನಂತೆ ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಇಲಾಖೆಯಲ್ಲಿ ಇದ್ದ ಗ್ರಾಮೀಣ ಕ್ರೀಡೋತ್ಸವ ಎಂಬ ಅರ್ಥಪೂರ್ಣ ಕಾರ್ಯಕ್ರಮವನ್ನು ಮುಂದುವರಿಸಬೇಕು. ನಮ್ಮೂರ ಶಾಲೆಗೆ ನಮ್ಮೂರ ಯುವ ಜನರು ಎಂಬ ಕಾರ್ಯಕ್ರಮವನ್ನು ಈ ಮೊದಲಿನಂತೆ ಯುವಕ/ಯುವತಿ ಸಂಘಳಿಗೆ ನೀಡಬೇಕು. ರಾಜ್ಯ ಯುವ ಪ್ರಶಸ್ತಿ, ರಾಷ್ಟ್ರ ಯುವ ಪ್ರಶಸ್ತಿ ಹಾಗೂ ಕ್ರೀಡಾ ಪ್ರಶಸ್ತಿ ಪುರಸ್ಕøತರಿಗೆ ವಿಧಾನ ಸೌಧ ಹಾಗೂ ಸರಕಾರಿ ಕಛೇರಿಗಲ್ಲಿ ಅಧಿಕಾರಿಗಳಿಗೆ ಸುಲುಭ ಭೇಟಿಗಾಗಿ ಗುರುತಿನ ಚೀಟಿ ನೀಡಬೇಕು. ಯುವಕರಿಗೆ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಾದ ಯುವ ಚೇತನ, ಯುವ ಪ್ರೇರಣ ಹಾಗೂ ಯುವ ಸಂವಹನ ಕಾರ್ಯಕ್ರಮವನ್ನು ಮುಂದುವರೆಸುವುದು. ಜಿಲ್ಲಾವಾರು ಕ್ರಿಯಾಯೋಜನೆಯನ್ನು ಎಲ್ಲಾ ಜಿಲ್ಲೆಗಳಿಗೆ ಏಕರೂಪವಾಗಿರುವಂತೆ ನಿಯಮ ರೂಪಿಸುವುದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೊಂದಾಯಿತ ಯುವಕ ಸಂಘಗಳಿಗೆ ಈ ಹಿಂದಿನಂತೆ ಕ್ರೀಡಾ ಸಾಮಗ್ರಿಗಳ ಕಿಟ್ ನೀಡಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದು. ಯುವಕರಿಗೆ ಅನುಕೂಲವಾಗುವಂತೆ ಪೂರ್ವ ತಯಾರಿಯಾಗಿ ಜಿಲ್ಲಾ ಮಟ್ಟದ ಜನಪದ ಕಲೆಗಳ ತರಬೇತಿ ಶಿಬಿರವನ್ನು ಆಯೋಜಿಸಬೇಕು. ಬೀದರ್ ಜಿಲ್ಲೆಯ ನೇಹರು ಕ್ರೀಡಾಂಗಣದ ಪ್ರಾಂಗಣದಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ಸ್ಥಾಪಿಸಬೇಕು. ಯುವಕರನ್ನು ಸಾಂಸ್ಕøತಿಕವಾಗಿ ಪ್ರೋತ್ಸಾಹಿಸುವ ಸಲುವಾಗಿ ಯುವಕರಿಗಾಗಿ ಇನ್ನು ಹೆಚ್ಚಿನ ಯೋಜನೆಗಳನ್ನು ರೂಪಿಸಬೇಕು. ರಾಜ್ಯ ಮಟ್ಟದ ಯುವ ಪ್ರಶಸ್ತಿ ಪುರಸ್ಕøತರಿಗೆ ಬೆಂಗಳೂರಿನಲ್ಲಿ ನಿವೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯ ಗೌರವ ಅಧ್ಯಕ್ಷ ವಿಜಯಕುಮಾರ ಸೋನಾರೆ, ಜಿಲ್ಲಾಧ್ಯಕ್ಷ ಸುನೀಲ ಭಾವಿಕಟ್ಟಿ, ಉಪಾಧ್ಯಕ್ಷ ಪ್ರದೀಪ್ ಬಿರಾದಾರ್, ಪ್ರಧಾನ ಕಾರ್ಯದರ್ಶಿ ಶರೀಫ್ ಶೇಕ್, ವಿಜಯಕುಮಾರ ಭಂಡೆ, ಆರೀಫ್, ಮುಬಾರಕ್, ಇಮ್ರಾನ್, ಸಚೀನ್ ಭಾವಿದೊಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!