ರಾಜ್ಯ ಮಟ್ಟದ ಒಂದು ದಿನದ “ಕಾವ್ಯ ಕಮ್ಮಟ”
ಅತಿವಾಳೆ ಸಾಂಸ್ಕøತಿಕ ಪ್ರತಿμÁ್ಠನ, ಬೀದರ ವತಿಯಿಂದ ರಾಜ್ಯ ಮಟ್ಟದ ಒಂದು ದಿನದ “ಕಾವ್ಯ ಕಮ್ಮಟ” ವನ್ನು ದಿನಾಂಕ : 23.07.2023 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಗುರುನಾನಕ್ ಗೇಟ್ ಎದುರುಗಡೆ ಇರುವ ಹೋಟೆಲ್ ಕೃಷ್ಣ ರೀಜೆನ್ಸಿಯಲ್ಲಿ ಏರ್ಪಡಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಮ್ಮಟವನ್ನು ಬೆಂಗಳೂರಿನ ಹೆಸರಾಂತ ಸಾಹಿತಿಗಳಾದ ಡಾ. ಬೇಲೂರು ರಘುನಂದನ್ ಉದ್ಘಾಟಿಸಲಿದ್ದಾರೆ.
ಅಶಯ ನುಡಿಯನ್ನು ಹಿರಿಯ ಸಾಹಿತಿ ಶ್ರೀಮತಿ ಸುನೀತಾ ದಾಡಗೆ ಹೇಳಲಿದ್ದಾರೆ, ಅತಿವಾಳೆ ಸಾಂಸ್ಕøತಿಕ ಪ್ರತಿμÁ್ಠನದ ಸಂಚಾಲಕ ಡಾ. ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆ ವಹಿಸಿಕೊಳ್ಳುವರು, ಮುಖ್ಯ ಅತಿಥಿಗಳಾಗಿ ಬೆಳಗು ಸಾಂಸ್ಕøತಿಕ ಮತ್ತು ಸಾಮಾಜಿಕ ಟ್ರಸ್ಟ್ ಅಧ್ಯಕ್ಷ ಅನಿಲಕುಮಾರ ದೇಶಮುಖ, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ ಆಗಮಿಸಲಿದ್ದಾರೆ.
ಮಧ್ಯಾನ್ಹ 12 ಗಂಟೆಯಿಂದ 1.30 ರವರೆಗೆ ಕನ್ನಡ ಕಾವ್ಯ ಪರಂಪರೆ ಹಾಗೂ ಕಾವ್ಯ ರಚನೆ ಕುರಿತು ಚರ್ಚೆ ಮತ್ತು ಸಂವಾದ, 2 ಗಂಟೆಯಿಂದ ಮಾದರಿ ಕವನ ವಾಚನ ಮತ್ತು ಚರ್ಚೆ, 3 ಗಂಟೆಯಿಂದ 4.30 ರವರೆಗೆ ಶಿಬಿರಾರ್ಥಿಗಳಿಂದ ಸ್ವರಚಿತ ಕವನ ವಾಚನ ಮತ್ತು ಚರ್ಚೆ, ಸಾಯಂಕಾಲ 4.30 ಕ್ಕೆ ಸಮಾರೋಪ ಹಾಗೂ ಪ್ರಮಾಣ ಪತ್ರ ವಿತರಣೆ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿಗಳಾದ ಡಾ. ಎಂ. ಜಿ ದೇಶಪಾಂಡೆ ಸಮಾರೋಪ ನುಡಿ ಆಡಲಿದ್ದಾರೆ. ಅಧ್ಯಕ್ಷತೆಯನ್ನು ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಭಾರತಿ ವಸ್ತ್ರದ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಶ್ರೀ ಉಮಾಕಾಂತ ಮೀಸೆ, ಕರುನಾಡು ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಡಾ. ಶಾಮರಾವ್ ನೆಲವಾಡೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಕವಿಗಳು, ಕಾವ್ಯ ಆಸಕ್ತರು ಭಾಗವಹಿಸಲು ಕೋರಲಾಗಿದೆ.