ರಾಜ್ಯಕ್ಕೆ ಶೂನ್ಯ ಕೊಡುಗೆ : ಮೂಲಗೆ ಟೀಕೆ
ಬೀದರ್ : ರಾಜ್ಯದಿಂದಲೇ ರಾಜ್ಯಸಭಾಗೆ ಆರಿಸಿ ಹೋದ ನಿರ್ಮಲಾ ಸೀತಾರಾಮನ್ ಹಣಕಾಸು ಮಂತ್ರಿಯಾಗಿದ್ದರೂ ಸಹ ರಾಜ್ಯಕ್ಕೆ ಕೇಂದ್ರದ ಬಜೆಟ್ ಶೂನ್ಯ ಕೊಡುಗೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಪ್ರತಿಕ್ರೀಯಿಸಿದ್ದಾರೆ.
ಕೇಂದ್ರದ ಬಜೆಟ್‌ಗೆ ಪತ್ರಿಕಾ ಪ್ರಕಟಣೆ ಮೂಲಕ ಪ್ರತಿಕ್ರೀಯಿಸಿರುವ ಮೂಲಗೆ, ರಾಜ್ಯದಿಂದ ೧೯ ಮಂದಿ ಸಂಸದರು, ನಾಲ್ವರು ಕೇಂದ್ರ ಮಂತ್ರಿಯಿದ್ದರೂ ಸಹ ರಾಜ್ಯಕ್ಕೆ ಏನೇನು ಕೊಡುಗೆ ದೊರಕಿಸಲು ಸಾಧ್ಯವಾಗಿಲ್ಲ. ಚುನಾವಣೆ ಮುಂಚೆ ಜನರಿಗೆ ಭರಪೂರ ಅಶ್ವಾಸನೆ ನೀಡಿದ ಬಿಜೆಪಿ ಅಧಿಕಾರಕ್ಕೆ ಏರಿದ ಬಳಿಕ ಮರೆತಿದೆ ಎಂದು ಟೀಕಿಸಿದ್ದಾರೆ.
ಉದ್ಯೋಗ ವಲಯಕ್ಕೂ ಹೇಳಿಕೊಳ್ಳುವ ಆದ್ಯತೆ ನೀಡದ ಮೋದಿ ಬಜೆಟ್ ಜನವಿರೋಧಿಯಾಗಿದೆ ಎಂದು ಮೂಲಗೆ ತಿಳಿಸಿದ್ದಾರೆ.