ಯುವ ಗಾಯಕ ವಿಷ್ಣು ಜನವಾಡಕರ್ ಇನ್ನಿಲ್ಲ
ಬೀದರ್:ಇಲ್ಲಿನ ವಿದ್ಯಾನಗರ ನಿವಾಸಿ ಯುವ ಗಾಯಕ, ಉದ್ಯಮಿ ವಿಷ್ಣು ಜನವಾಡಕರ್ (ಪುಟ್ಟು)(24) ಶುಕ್ರವಾರ ಜೂನ್ 14ರಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ.
ಮೈಸೂರು ದಸರಾ, ಹಂಪಿ ಉತ್ಸವ, ಕಲ್ಯಾಣ ಉತ್ಸವ, ಬಸವ ಉತ್ಸವ, ಬೀದರ್ ಉತ್ಸವ ಸೇರಿದಂತೆ ಹಲವಾರು ರಾಜ್ಯ, ಅಂತರರಾಜ್ಯ ಹಾಗು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತದ ಮೂಲಕ ಯುವಕರನ್ನು ಸೆಳೆದಿದ್ದ, ಯುವ ಗಾಯಕ ವಿಷ್ಣು ಜನವಾಡಕರ್ ನಿಧನ ಹೊಂದಿ, ಸಹೋದರ ಗಾಯಕ ಅಮಿತ್ ಜನವಾಡಕರ್, ಸಹೋದರಿಯರಾದ ಅನ್ನಪೂರ್ಣ, ಅಶ್ವಿನಿ, ತಂದೆ ದತ್ತಾತ್ರೇಯ ಕುಲ್ಕರ್ಣಿ, ತಾಯಿ ವಿದ್ಯಾವತಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ಅಂತ್ಯಕ್ರಿಯೆಯನ್ನು ನಗರದ ನರಸಿಂಹ ಝರಣಾ ಘಾಟ್ ನಲ್ಲಿ ಶುಕ್ರವಾರ ಜೂನ್ 14ರಂದು ಸಂಜೆ ನೆರವೇರಿಸಲಾಯಿತು.
ಬಿದರಿ ಸಂತಾಪ;
ಯುವ ಗಾಯಕ ವಿಷ್ಣು ಜನವಾಡಕರ್ ನಿಧನಕ್ಕೆ ಬಿದರಿ ಸಾಂಸ್ಕøತಿಕ ವೇದಿಕೆ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಸೇರಿದಂತೆ ಜಿಲ್ಲೆಯ ಹಲವಾರು ಸಂಗೀತಗಾರರು, ಸಂಗೀತಾಸಕ್ತರು, ಸಾಂಸ್ಕೃತಿಕ ಸಂಘ, ಸಂಘಟನೆಗಳು ಶೋಕ ಸಂತಾಪ