ಮ್ಯಾರಥಾನ್ ಓಟದಲ್ಲಿ ಮಮಿತಾಬಾಯಿಗೆ ದ್ವಿತೀಯ ಸ್ಥಾನ
ಬೀದರ್: ಮೈಸೂರಿನಲ್ಲಿ ಈಚೆಗೆ ನಡೆದ ‘ಸೆಲೆಬ್ರೇಟ್ ಲೈಫ್ ಮೈಸೂರು ಹಾಫ್ ಮ್ಯಾರಥಾನ್ ಆ್ಯಂಡ್ 10ಕೆ ರನ್ ಇವೆಂಟ್’ನ 10 ಕಿ.ಮೀ. ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರತಿಭೆ ಮಮಿತಾಬಾಯಿ ಕದ್ರೆ ದ್ವಿತೀಯ ಸ್ಥಾನ ಗಳಿಸಿ ಗಮನ ಸೆಳೆದಿದ್ದಾರೆ.
31 ರಿಂದ 40 ವರ್ಷದ ಒಳಗಿನ ಮಹಿಳೆಯರ ವಿಭಾಗದಲ್ಲಿ ಅವರು ದ್ವಿತೀಯ ಸ್ಥಾನ ಪಡೆದು, ಟ್ರೋಫಿ ಹಾಗೂ ಪದಕಕ್ಕೆ ಪಾತ್ರರಾದರು.
ನಗರದ ಹೊರವಲಯದ ಅಮಲಾಪುರದ ನಿವಾಸಿಯಾದ 37 ವರ್ಷದ ಮಮಿತಾಬಾಯಿ ಕದ್ರೆ ಬೆಂಗಳೂರಿನ ಕೇಂದ್ರ ಕಾರಾಗೃಹದ ವೀಕ್ಷಕಿಯಾಗಿದ್ದಾರೆ. ಉತ್ತಮ ಕ್ರೀಡಾಪಟು ಆಗಿರುವ ಅವರು ಈವರೆಗೆ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
‘ಸೆಲೆಬ್ರೇಟ್ ಲೈಫ್ ಮೈಸೂರು ಹಾಫ್ ಮ್ಯಾರಥಾನ್ ಆ್ಯಂಡ್ 10 ಕೆ ಇವೆಂಟ್’ ಅನ್ನು ರೇಡಿಯಂಟ್ ಸ್ಪೋಟ್ರ್ಸ್ ಸಂಘಟನೆ ವತಿಯಿಂದ ಆಯೋಜಿಸಲಾಗಿತ್ತು.