ಬೀದರ್

ಮೊಹ್ಮದ್ ಫೆರೋಜ್ ಖಾನ್ ಬೀದರ ಜಿಲ್ಲಾ ವಕ್ಫ್ಬೋರ್ಡ್ ಅಧ್ಯಕ್ಷರಾಗಿ ನೇಮಕ.

 ಬೀದರ-15, ಬೀದರಿನ ಪ್ರತೀಷ್ಟಿತ ನೂರ್ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮೊಹ್ಮದ್ ಫೆರೋಜ್ ಖಾನ್ ರವರನ್ನು ಬೀದರ ಜಿಲ್ಲಾ ವಕ್ಫಬೋರ್ಡ್ನ ಜಿಲ್ಲಾ ಅಧ್ಯಕ್ಷರಾಗಿ ನೇಮಕ ಮಾಡಿ ಕರ್ನಾಟಕ ರಾಜ್ಯ ವಕ್ಫಬೋರ್ಡ್ ಬೆಂಗಳೂರು ಸಿ.ಇ.ಓ. ಆಯ್ಕೆಮಾಡಿ ಆದೇಶ ಪತ್ರ ಹೊರಡಿಸಿದ್ದಾರೆ. ತಕ್ಷಣವೇ ಫೆರೋಜ್‌ಖಾನ್ ರವರನ್ನು ಕಾರ್ಯಪ್ರವೃತ್ತರಾಗಿರಲು ಸೂಚಿಸಿದಾರೆ ಇಂದು ದಿನಾಂಕಃ 15-06-2024 ರಂದು 11-00 ಗಂಟೆಗೆ ಬೀದರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಇರುವ ವಕ್ಫಬೋರ್ಡ್ ಕಾರ್ಯಾಲಯಕ್ಕೆ ಹೋಗಿ ಅಧಿಕಾರ ಸ್ವೀಕರಿಸಿದ್ದಾರೆ. ವಕ್ಫಬೋರ್ಡ್ ಜಿಲ್ಲಾ ಅಧಿಕಾರಿಗಳಾದ ಮೊಹ್ಮದ್ ಶೈಜಾನ್ ಅಹ್ಮೆದ್ ಖಾನ ರವರಿಗೆ ಪ್ರಮಾಣ ವಚನ ಬೋಧಿಸಿದರು, ಅಷÀðದ ಪಟೇಲ್, ಮೊಹ್ಮದ್ ಅಲಿಮೋದ್ದಿನ್ ಶೇರಿಕಾರ, ವಕ್ಫಬೋರ್ಡ್ ಜಿಲ್ಲಾ ಉಪಾಧ್ಯಕ್ಷ ಎಂ.ಎA.ಅಖೀಲ್ ಹಾಗೂ ಬೋರ್ಡ್ನ ಎಲ್ಲಾ ಅಧಿಕರಿಗಳು ಖಾನ್ ರವರನ್ನು ಸ್ವಾಗತ ಮಾಡಿದರು. ಜಿಲ್ಲೆಯ ಅನೇಕ ಮುಖಂಡರುಗಳಾದ ನೂರ ಪಾಶಾ, ಮೊಹ್ಮದ್ ಮಕ್ಬೂಲ್ ಅಹ್ಮೆದ್, ಅಬ್ದುಲ್ ಖದೀರ್, ಮೊಹ್ಮದ್ ಇಬ್ರಾಹಿಂ ಖುರೇಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಫೆರೋಜ್ ಖಾನ್ ಅಧಿಕಾರ ಸ್ವೀಕರಿಸಿ ಮಾಧ್ಯಮದವರೋಂದಿಗೆ ಮಾತನಾಡಿ ನಾನು ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಮೂರು ವರ್ಷಗಳ ನನ್ನ ಅಧಿಕಾರ ಅವಧಿಕಯಲ್ಲಿ ಯಾವುದೇ ರೀತಿಯ ತೊಂದರೆಗಳಾಗದAತೆ ನೋಡಿಕೊಳ್ಳುತ್ತೇನೆ. ವಕ್ಫಬೋರ್ಡ್ನ ಅಧೀನದಲ್ಲಿ ಬರುವ ಅಕ್ರಮವಾಗಿ ಹೊಂದಿದ್ದ ಜಮೀನನ್ನು ಹಿಂಪಡೆಯಲು ಪ್ರಯತ್ನಿಸುತ್ತೇನೆ. ಕರ್ನಾಟಕ ಸರ್ಕಾರದ ವಕ್ಫಬೋರ್ಡ್ ಸಚಿವರಾದ ಬಿ.ಝಡ್. ಜಮೀರ ಅಹ್ಮೆದ್ ಖಾನ್ ಹಾಗೂ ರಾಜ್ಯ ಅಧ್ಯಕ್ಷರಾದ ಕೆ. ಅನ್ವರಭಾಷಾ, ಹಾಗೂ ಬೋರ್ಡಿನ ಎಲ್ಲಾ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ನೂರ ಕಾಲೇಜಿನ ಪ್ರಾಂಶುಪಾಲರಾದ ಡಾ|| ಮೊಹ್ಮದ್ ಇಮ್ರಾನ್ ಸೈಯಿದ್, ಡಾ|| ಯೂಸೂಫ್ ಖಾನ್, ಸಮೀರಖಾನ್, ವಿಠಲರಾವ್, ಸುಕೆÃಶಕುಮಾರ, ಮೊಯ್ಮದ್ ಹಾಜೀ, ಮೊಹ್ಮದ ಮೋಸಿನ್, ಶರಣಪ್ಪಾ, ಮತ್ತೀತರರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!