ಮೂವರು ಆರೋಪಿಗಳನ್ನು ಬಂಧಿಸಿದ ಧನ್ನೂರ ಪೊಲೀಸರು.
ಭಾಲ್ಕಿ: ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ದನ್ನೂರ(ಹೆಚ್) ಪೊಲೀಸ್ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇನ್ನು ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳು ನೆರೆಯ ಮಹಾರಾಷ್ಟ್ರ ರಾಜ್ಯದ ಶಾಜಾನಿ ಔರಾದ ಪಟ್ಟಣದಲ್ಲಿ ನಾಲ್ಕು ಮೋಟಾರ್ ವಾಹನಗಳು ಹಾಗು ಜಿಲ್ಲೆಯ ವಿವಿಧ ಕಡೆ 11 ಮೋಟರ್ ಸೈಕಲ್ಗಳನ್ನು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಧನ್ನೂರ(ಹೆಚ್) ಪೊಲೀಸ ಠಾಣೆಯ ಪಿಎಸ್ಐ ವಿಶ್ವಾರಾಧ್ಯ ನೇತೃತ್ವದಲ್ಲಿ ಪ್ರಕರಣ ಭೇದಿಸಲಾಗಿದೆ.
ವಿವರ: ಧನ್ನುರ(ಹೆಚ್) ಪೋಲಿಸ್ ಠಾಣೆಯ ವ್ಯಾಪ್ತಿಯ ಕಟ್ಟಿತುಗಾಂವ ಗ್ರಾಮದಲ್ಲಿ ಕಳೆದ ಎಪ್ರಿಲ್ ತಿಂಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ ಮೋಟಾರ್ ಸೈಕಲ್ ಕಳವು ಮಾಡಿರುವ ಬಗ್ಗೆ ಕಟಿತುಗಾಂವ ಗ್ರಾಮದ ಸಂತೋಷ ಮಹಾಂತಪ್ಪ ನೀಡಿರುವ ದೂರಿನ ಮೇರೆಗೆ ಪರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಯಿತು. ತನಿಖೆಯ ನಂತರ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಳವು ಮಾಡಿದ ಮೋಟಾರ್ ಬೈಕ್ಗಳನ್ನು ಆರೋಪಿಗಳು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಬಂಧಿತ ಅರೋಪಿಗಳು: ಸಂದೀಪ ಬಸವರಾಜ ಮಳಜಾಪೂರೆ, ಬಳತ(ಬಿ), ಲೆಕ್ಚರರ್ ಕಾಲೋನಿ ಭಾಲ್ಕಿ. ನಾಗೇಶ ಕಲ್ಯಾಣರಾವ ಮೈಬತೆ ಸಿದ್ದೇಶ್ವರ, ಸೋಹಲ್ ಫಯಾಜೋದಿನ್ ಮುಲ್ಲಾ ಡೊಣಗಾಪೂರ.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪೊಲೀಸ್ ತಂಡ: ಪಿಎಸ್ಐ ವಿಶ್ವಾರಾಧ್ಯ, ವಿರಶೆಟ್ಟಿ ಪಾಟೀಲ, ಎಎಸ್ಐ ವಿಠಲರಾವ, ಸಿಹೆಚ್ಸಿ ಉಮಾಕಾಂತ ದಾನಾ, ನಾಗಪ್ಪ, ಬಕ್ಕಯ್ಯಾ, ಭಗವಾನ, ಸಂಜೀವ ಸಿರ್ಸೆ, ಸಿಪಿಸಿ ಹರ್ಷವರ್ಧನ, ನಾಗರಾಜ, ಸಿದ್ದಲಿಂಗಪ್ಪ, ಪ್ರಶಾಂತ ರೆಡ್ಡಿ, ರಿವಕುಮಾರ, ನಾಗರಾಜ, ಗುರುರಾಜ, ಬಸಪ್ಪ, ಮಹಾದೇವ. ಎಪಿಸಿ ಜಗದೀಶ ಮಾನಶೆಟ್ಟಿ, ತಾನಾಜಿ.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟೆ, ಡಿವಾಯ್ಎಸ್ಪಿ ಶಿವಾನಂದ ಪವಾಡಶೆಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣನವರ, ಚಂದ್ರಕಾಂತ ಪೂಜಾರಿ ಶ್ಲಾಘಿಸಿದ್ದಾರೆ.
18ಬಿಎಲ್ಕೆ4
ಭಾಲ್ಕಿ: ತಾಲೂಕಿನ ದನ್ನೂರ(ಹೆಚ್) ಪೊಲೀಸ್ ಠಾಣೆಯಲ್ಲಿ ಬೈಕ್ ಕಳ್ಳರನ್ನು ಬಂಧಿಸಿ, ಕಳ್ಳರಿಂದ ವಶಪಡಿಸಿಕೊಂಡ ಬೈಕ್ಗಳೊಂದಿಗೆ ಪೊಲೀಸ್ ಅಧಿಕಾರಿಗಳು.