ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಬೀದರ ಮಗಳು ಶಾವನಿ ಪಾಟೀಲ
ಬೀದರ: ಗೋವಾದಲ್ಲಿ ಜೂನ್ 10 ಮತ್ತು 11 ರಂದು ಎರಡು ದಿವಸಗಳ ಕಾಲ ಜರುಗಿದ ಡಿ.ಎಸ್.ವಿ. ಜೂನಿಯರ್ ಮಿಸ್ ಇಂಡಿಯಾ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೀದರ ಜಿಲ್ಲೆಯ ಔರಾದ ತಾಲೂಕಿನ ಏಕಂಬಾ ಗ್ರಾಮದ ಆತ್ಮಾರಾಮ ಪಾಟೀಲರ ಮಗಳು ಶಾವನಿ ಪಾಟೀಲ ಪ್ರಥಮ ಸ್ಥಾನ ಪಡೆದು ವಿಜಯದ ಕಿರೀಟ ತನ್ನ ಮುಡಿಗೇರಿಸಿಕೊಂಡಿದ್ದಾಳೆ.
ಅಖಿಲ ಭಾರತ ಮಟ್ಟದ ಜೂನಿಯರ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಶಾವನಿ ಪಾಟೀಲ ಪ್ರತಿನಿಧಿಸಿದ್ದರು. ಚಿಕ್ಕ ವಯಸ್ಸಿನಲ್ಲಿ ಅತ್ಯದ್ಭುತ ಸಾಧನೆಗೈದ ಈ ಪುಟ್ಟ ಹುಡುಗಿ ಶಾವನಿ ಪಾಟೀಲ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಔರಾದ ತಾಲೂಕು ಮತ್ತು ಜಿಲ್ಲೆಯ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.