ಮಾನವ ಬಂಧುತ್ವ ವೇದಿಕೆ: ಬಸವ ಪಂಚಮಿ ಆಚರಣೆ
ಬೀದರ್: ಮಾನವ ಬಂಧುತ್ವ ವೇದಿಕೆ ವತಿಯಿಂದ ಬೀದರ್ ತಾಲ್ಲೂಕಿನ ಜನವಾಡದಲ್ಲಿ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಯಿತು.ಗ್ರಾಮದ ಅಲೆಮಾರಿ ಜನಾಂಗದ ಮಕ್ಕಳಿಗೆ ಹಾಲು ವಿತರಿಸಲಾಯಿತು.
ಈಗಿನ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರ ಮಾರ್ಗದರ್ಶನದಲ್ಲಿ ವೇದಿಕೆಯು ಐದು ವರ್ಷಗಳಿಂದ ಮೂಢ ಆಚರಣೆಗಳ ವಿರುದ್ಧ ಜನಜಾಗೃತಿ ಮೂಡಿಸುತ್ತ ಬಂದಿದೆ. ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸುತ್ತಿದ್ದು, ಹುತ್ತಿಗೆ ಎರೆದು ಹಾಲು ವ್ಯರ್ಥ ಮಾಡುವ ಬದಲು ಪೌಷ್ಟಿಕತೆ ಕೊರತೆ ಹೋಗಲಾಡಿಸಲು ಮಕ್ಕಳಿಗೆ ಹಾಲು ವಿತರಿಸಲಾಗಿದೆ ಎಂದು ವೇದಿಕೆಯ ಸಂಚಾಲಕ ಗೌತಮ ಮುತ್ತಂಗಿಕರ್ ತಿಳಿಸಿದರು.ಪ್ರಮುಖರಾದ ಅಶೋಕ ಕಡಮಂಚಿ, ದಿಲೀಪ್ ಮೇತ್ರೆ, ರಾಕೇಶ ಶರ್ಮಾ, ಚೆಟ್ಟೆಪ್ಪ ಮೊದಲಾದವರು ಇದ್ದರು.