ಪಾಂಡೆ ಸ್ವಗೃಹದಲ್ಲಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ :ಈಶ್ವರ್ ಸಿಂಗ್ ಠಾಕೂರ್ ಭೇಟಿ
ಬೀದರ್: ಜಿಲ್ಲಾ ಬಿಜೆಪಿ ಮುಖಂಡ ಮಾಜಿ ಶಾಸಕ ರಮೇಶ್ ಕುಮಾರ್ ಪಾಂಡೆ ಅನಾರೋಗ್ಯದ ಕಾರಣ ಅಸ್ವಸ್ಥರಾಗಿದ್ದಾರೆ.
ಬಿಜೆಪಿ ವಿಭಾಗ ಪ್ರಮುಖ ಈಶ್ವರ ಸಿಂಗ್ ಠಾಕೂರ್ ಮತ್ತು ಹಿರಿಯ ಪತ್ರಕರ್ತ ವೆಂಕಟೇಶ ಮೊರಖಂಡಿಕರ್ ಅವರು ನಗರದ ದೇವಿ ಕಾಲೋನಿಯ ಪಾಂಡೆ ಸ್ವಗೃಹದಲ್ಲಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಮಾತನಾಡಿದ ಈಶ್ವರ ಸಿಂಗ್ ಠಾಕೂರ್ ಚುನಾವಣೆ ಬಂದಾಗ ಪಕ್ಷದ ಅಭ್ಯರ್ಥಿ ಯಾರೇ ಆದರೂ ಅವರು ಬೆನ್ನು ತಟ್ಟಿ ಪ್ರೋತ್ಸಾಹಿಸಿ ಪ್ರಚಾರದಲ್ಲಿ ಪಾಂಡೆ ಅವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ೮೮ರ ಇಳಿಯ ವಯಸ್ಸಿನಲ್ಲಿಯೂ ಅಸ್ವಸ್ಥರಾಗಿದ್ದರೂ ಕೂಡ ಅವರು ಮೋದಿ ಪರ ದೇಶಕ್ಕೆ ಒಳಿತನ್ನು ಮಾಡುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಎಂದು ಮನೆಯಿಂದಲೇ ಫೋನಾಯಿಸಿ ಪ್ರಚಾರದಲ್ಲಿ ತೊಡಗಿರುವ ನಿರ್ಮಲ ರಾಜಕಾರಣಿ ಅವರ ಹುಮ್ಮಸ್ಸಿಗೆ ಸಲಾಂ, ಹಿರಿಯ ಪತ್ರಕರ್ತ ವೆಂಕಟೇಶ ಮೊರಖಂಡಿಕರ್ ಹಾಗೂ ರಮೇಶ ಕುಮಾರ್ ಪಾಂಡೆ ನಡುವೆ ಅಣ್ಣ-ತಮ್ಮರ ಬಾಂಧವ್ಯ, ಜಿಲ್ಲೆಯಲ್ಲಿ ಬಿಜೆಪಿ ಬಲಗೊಳಿಸಲು ದುಡಿದವರು ಸಂಘದಿಂದ ಬಿಜೆಪಿ ಬೆಳೆಸಿದವರು ಇವರಿಬ್ಬರು, ಹಿರಿಯರ ಮಾರ್ಗದರ್ಶನ ಪಕ್ಷಕ್ಕೆ ಸದಾ ಇರಲಿ ಎಂದು ಹೇಳಿದರು.