ಮಳಚಾಪೂರ ಸದ್ರೂಪಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್
ಭಾಲ್ಕಿ: ತಾಲೂಕಿನ ಮಳಚಾಪೂರ ಗ್ರಾಮದ ಶ್ರೀಗುರು ಶಂಭುಲಿಂಗಾಶ್ರಮ ಶ್ರೀ ಸಿದ್ಧಾರೂಢ ಮಂದಿರದ ಪೀಠಾಧಿಪತಿ ಶ್ರೀ ಸದ್ರೂಪಾನಂದ ಭಾರತಿ ಮಹಾಸ್ವಾಮಿಗಳಿಗೆ ಏಸಿಯಾ ಇಂಟರ್ ನ್ಯಾಶನಲ್ ಕಲ್ಚರಲ್ ಅಕಾಡೆಮಿ ವತಿಯಿಂದ ಗೌರವ ಡಾಕ್ಟರೇಟ್ ಲಭಿಸಿದೆ.
ಏಸಿಯಾ ಇಂಟರನ್ಯಾಶನಲ್ ಕಲ್ಚರಲ್ ರಿಸರ್ಚ ಯುನಿವರ್‍ಸಿಟಿಯ ಏಸಿಯಾ ಇಂಟರ್‍ನ್ಯಾಶನಲ್ ಕಲ್ಚರಲ್ ಅಕಾಡೆಮಿ ವತಿಯಿಂದ ಕೊಡಲಾಗುವ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಸದ್ಗುರು ಸದ್ರೂಪಾನಂದ ಭಾರತಿ ಮಹಾಸ್ವಾಮಿಗಳಲ್ಲಿಯ ಅಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಯನ್ನು ಗುರುತಿಸಿ ಪ್ರಧಾನ ಮಾಡಲಾಗಿದೆ.
ಅಭಿನಂದನೆ: ಪೂಜ್ಯರಿಗೆ ದೊರೆತ ಗೌರವ ಡಾಕ್ಟರೆಟ್‍ಗಾಗಿ ಗುರುದೇವಾಶ್ರಮ ಬೀದರಿನ ಮಾತೆ ಸಿದ್ದೇಶ್ವರಿತಾಯಿ, ಬೆಳ್ಳೂರಿನ ಸಚ್ಚಿದಾನಂದ ಆಶ್ರಮದ ಮಾತೆ ಅಮೃತಾನಂದ ಮಯಿ, ಬಬಛಡಿ ಆಶ್ರಮದ ಸದ್ಗುರು ಗಣೇಶಾನಂದ ಮಹಾರಾಜರು, ಚಳಕಾಪೂರ ಶ್ರೀ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಅಭಿನಂದನೆ ತಿಳಿಸಿದ್ದಾರೆ.