ಮಲ್ಕಾಪುರ ಪಂಚಾಯಿತಿಗೆ ಉಮೇಶ ಶಹಾಪುರೆ ಅಧ್ಯಕ್ಷ
ಬೀದರ್: ತಾಲ್ಲೂಕಿನ ಮಲ್ಕಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಉಮೇಶ ಶಹಾಪುರೆ ಹಾಗೂ ಉಪಾಧ್ಯಕ್ಷೆಯಾಗಿ ಶಶಿಕಲಾ ಕುಪೇಂದ್ರ ಆಯ್ಕೆಯಾಗಿದ್ದಾರೆ.ಮಲ್ಕಾಪುರ ಗ್ರಾಮದ ಪಂಚಾಯಿತಿ ಕಚೇರಿಯಲ್ಲಿ ಜರುಗಿದ ಚುನಾವಣೆಯಲ್ಲಿಸಾಮಾನ್ಯ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಉಮೇಶ ಶಹಾಪುರೆ ಹಾಗೂ ಸಚಿನ್ ಮಲ್ಕಾಪುರೆ ಮತ್ತು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾದ ಉಪಾಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಕುಪೇಂದ್ರ ಹಾಗೂ ಸಂಗೀತಾ ರಾಜಕುಮಾರ ನಾಮಪತ್ರ ಸಲ್ಲಿಸಿದ್ದರು.
14 ಸದಸ್ಯರ ಪೈಕಿ ತಲಾ 8 ಸದಸ್ಯರ ಬೆಂಬಲದೊಂದಿಗೆ ಉಮೇಶ ಶಹಾಪುರೆ ಅಧ್ಯಕ್ಷ ಹಾಗೂ ಶಶಿಕಲಾ ಕುಪೇಂದ್ರ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ. ಯೋಗೇಂದ್ರ ಕುಲಕರ್ಣಿ ಚುನಾವಣಾಧಿಕಾರಿಯಾಗಿದ್ದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ದಾರಿ ದೀಪ ಸೇರಿದಂತೆ ಮೂಲಸೌಕರ್ಯಕ್ಕೆ ಮೊದಲ ಆದ್ಯತೆ ಕೊಡುವೆ. ಸದಸ್ಯರು ಹಾಗೂ ಜನರ ಆಶಯಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುವೆ ಎಂದು ನೂತನ ಅಧ್ಯಕ್ಷ ಉಮೇಶ ಶಹಾಪುರೆ ಪ್ರತಿಕ್ರಿಯಿಸಿದರು.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಗ್ರಾಮಸ್ಥರು ಸನ್ಮಾನಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರಾವ್ ಮಲ್ಕಾಪುರೆ, ಪ್ರಮುಖರಾದ ಬಸವರಾಜ ಶಹಾಪುರೆ, ಹಣ್ಮು ಪಾಜಿ, ಹಾಜಿಪಾಶಾ ಮಿರ್ಜಾಪುರ, ದಾವೂದ್ ಮಲ್ಕಾಪುರ, ರೇμÁ್ಮ ಮಲ್ಕಾಪುರ, ರೇಣುಕಾ ಮಲ್ಕಾಪುರ, ಕಮಳಮ್ಮ ಸುಲ್ತಾನಪುರ ಮತ್ತಿತರರು ಇದ್ದ