ಮರಳಿ ಹಕ್ಕಿ ಸಮೂಹ ಗಾಯನ ನಮ್ಮ ಯುಗಾದಿ ಆಗಮನ : ಸುಬ್ಬಣ್ಣ ಕರಕನಳ್ಳಿ
ನಮ್ಮ ಯುಗಾದಿ.
ರವಿಕಾಂತಿ ದಿನಗಳು ಅರಳಿ
ಚಂದ್ರಕಾಂತಿ ಮಾಸಗಳು ಮರಳಿ
ಹಕ್ಕಿ ಸಮೂಹ ಗಾಯನ
ನಮ್ಮ ಯುಗಾದಿ ಆಗಮನ|| ಪಲ್ಲವಿ||
ಕಳೆ ಮರಗಳ ಹೊಸ ಸಿರಿತನ
ಟೊಂಗೆ ಬಿಡಾಡುವ ಚೇತನ
ರೈತ ಜನರ ಬಿಡುವು ದಿನವು
ಕೃಷಿಯಲ್ಲಿ ಖುಷಿಯಾದ ದಿನವು|
ಹೈನಾ ಕೊಡುವ ಹಸುಗಳಿಗೆ
ಬದುಕು ನಡೆಸುವ ಎತ್ತುಗಳಿಗೆ
ಝಳಕಮಾಡಿಸಿ, ಶೃಂಗಾರಗೊಳಿಸಿದ
ನಮ್ಮ ಯುಗಾದಿ ಆಗಮನ|| ಪಲ್ಲವಿ||
ಬದುಕಿಗಾಗಿ ಹೊಟ್ಟೆಗಾಗಿ
ಹಳೆ ಬಟ್ಟೆಗಳ ದಿಂಬೂ ಮಾಡಿ
ಹೆತ್ತ ಕುಡಿ ಹೊಟ್ಟೆಯೊಳಗೆ
ಕಟ್ಟಿಕೊಂಡು ಬಂಡೆಗಲ್ಲು
ಹೊತ್ತೊಯುವ ಶ್ರಮವು
ನನ್ನ ಕುಡಿಗೆ ಹೊಸ ಅಕ್ಷರ
ನಮ್ಮ ಯುಗಾದಿ| ನಮ್ಮ ಯುಗಾದಿ||
ಧರ್ಮದ ಕಥೆಯಲ್ಲಿ
ಮನುಜ ಜನ್ಮದೊಡ್ಡದು|
ಬಾಡಿದ ಮುಖಕ್ಕೆ ನಗು ನೀಡದೆ
ನಿಂದನೆಯಲ್ಲಿ ಖುಷಿಕಾಣುವ ಹಿಂಸೆಗೆ
ಸೃಷ್ಠಿಯ ದೃಷ್ಠಿಯಲ್ಲಿ
ಸಮ ಸಮ ಕಾಣುವ
ಮೊಬೆಲಿನ ಮಾನವನಿಗೆ
ಕಂಪ್ಯೂಟರನ ನಾಗರಿಕನಿಗೆ
ನಮ್ಮ ಯುಗಾದಿ| ನಮ್ಮ ಯುಗಾದಿ|
ದೇಶದೊಳಗೆ ಚುನಾವಣೆ
ಭರವಸೆ ಗಂಧ, ಸುಗಂಧ ಶ್ರೀಗಂಧ
ಧರ್ಮನಿರುಪೇಕ್ಷ ಹೇಳಿಕೊಟ್ಟ
ಪ್ರತಿಜ್ಞೆಯಾದರು ಬಿಡದೆ
ಓಟ್ ಬ್ಯಾಂಕ ರಾಜಕಾರಣಕ್ಕೆ
ನಿಜಭಾರತ ನಿರ್ಮಾಣಕ್ಕೆ
ನಮ್ಮ ಯುಗಾದಿ| ನಮ್ಮ ಯುಗಾದಿ|| ಪಲ್ಲವಿ||
ರಚನೆಃ ಸುಬ್ಬಣ್ಣ ಕರಕನಳ್ಳಿ