ಬೀದರ್

ಮನ್ನಾಏಖೇಳ್ಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ  ದಿಢೀರ್ ಎಂದು ಭೇಟಿ ನೀಡಿದ ಶಾಸಕರಾದ  ಡಾ. ಶೈಲೇಂದ್ರ ಬೆಲ್ದಾಳೆ

ಸಾರ್ವಜನಿಕರ ದೂರಿನ ಅನ್ವಯ ದಿಢೀರ್ ಭೇಟಿ ನೀಡಿದ ಅವರು, ಶುಚಿತ್ವವಿಲ್ಲದ ಇಡೀ ಬಸ್ ನಿಲ್ದಾಣ ಕೆಟ್ಟ ವಾಸನೆಯಿಂದ ಕೂಡಿದೆ. ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದನ್ನು ಹಾಗೂ ನಿಲ್ದಾಣ ಸ್ವಚ್ಛತೆ ಇಲ್ಲದೇ ಇರುವುದನ್ನು ಅವರು ಪರಿಶೀಲಿಸಿದರು ಮಳೆ ಬಿದ್ದರೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಎದುರಾಗಿದೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕ್ಲೀನಿಂಗ್ ಏಜೆನ್ಸಿಯವರು ಸಹ ನಿಲ್ದಾಣದಲ್ಲಿ ಶುಚಿತ್ವ ಕಾಪಾಡದೇ ಇರುವುದರ ಬಗ್ಗೆ ಏಜೆನ್ಸಿಯವರಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಡೀ ಬಸ್ ನಿಲ್ದಾಣದಲ್ಲಿ ಎಲ್ಲೆಡೆ ಅಡ್ಡಾಡಿ ವೀಕ್ಷಿಸಿದ ಅವರು, ಬಸ್ ನಿಲ್ದಾಣದ ಶುಚಿತ್ವಗೊಳಿಸುವ ಜವಾಬ್ದಾರಿ  ಈಗಾಗಲೇ ಟೆಂಡರ್ ಆಗಿದವರು ಸೂಕ್ತ ರೀತಿಯಲ್ಲಿ ಬಸ್ ನಿಲ್ದಾಣವನ್ನು ಸ್ವಚ್ಛತೆ ಮಾಡದೇ ಇದ್ದರೆ ಬೇರೆಯವರಿಗೆ ಅವಕಾಶ ಮಾಡಿಕೊಡಲಿ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ, ಕೆಲಸ ಮಾಡಬೇಕು. ಕ್ರಮ ಕೈಗೊಳ್ಳಿ ಎಂದು ಡಿಪೋ ವ್ಯವಸ್ಥಾಪಕ  ಅವರಿಗೆ ಸೂಚನೆ ನೀಡಿದರು.
ನಿಲ್ದಾಣದೊಳಗಿರುವ ಅಂಗಡಿಗಳು ಮತ್ತು ಹೋಟೆಲ್‌ಗಳು ಪ್ಲಾಸ್ಟಿಕ್ ಎಸೆಯದಂತೆ  ಉಪಯೋಗಿಸಿದ  ವಸ್ತುಗಳನ್ನು ಎಲ್ಲದರಲ್ಲಿ ಎಸೆಯದಂತೆ ನೋಡಿಕೊಳ್ಳಬೇಕು. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗ್ರಾಮಪಂಚಾಯಿತಿ ಅಧಿಕಾರಿಗಳು ಜೊತೆ ಸಹಕರಿಸಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಬಸ್ ನಿಲ್ದಾಣದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಪ್ರತಿದಿನ ಸಾವಿರಾರು ಜನರು ಬಂದು ಹೋಗುವುದರಿಂದ  ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಸರಿನಮಯವಾಗಿ ಪ್ರಯಾಣಿಕರು ನಿಲ್ದಾಣದೊಳಗೆ ಬರಲು ಪ್ರಯಾಸ ಪಡುವ ಸ್ಥಿತಿಯಲ್ಲಿ ಇರುವುದರಿಂದ ನಿಲ್ದಾಣದ ಮುಂಭಾಗದಲ್ಲಿ ಗುಣಮಟ್ಟದ ಕಾಮಗಾರಿ ಮಾಡಿಸಲಾಗುವುದು ಎಂದರು. ಬಳಿಕ ಎಲ್ಲ ಗ್ರಾಮಗಳಿಗೆ ಸರಿಯಾದದ ಸಮಯದಲ್ಲಿ ಬಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮನ್ನಾಏಖೇಳ್ಳಿ ಪಿಎಸ್ ಐ ಸುದರ್ಶನ್ ರೆಡ್ಡಿ ಪಿಡಿಒ ಭಾಗ್ಯಜ್ಯೋತಿ,  ಡಿಟಿಓ ಇಂದ್ರಶೇನ್ ಬಿರಾದರ್, ಮನ್ನಾಏಖೇಳ್ಳಿ  ಡಿಪೋ  ಮ್ಯಾನೆಜರ್ ರಾಜಶೇಖರ್,    ಅಧಿಕಾರಿಗಳು  ಮತ್ತಿತರಿದ್ದರು.

Ghantepatrike kannada daily news Paper

Leave a Reply

error: Content is protected !!