ಬೀದರ್

ಮನೆ ಮನೆ ವನ ಮಹೋತ್ಸವ ಅಭಿಯಾನ ರೋಟರಿ ಕ್ಲಬ್‍ನಿಂದ ಸಸಿ ವಿತರಣೆ

ಬೀದರ್: ಮನೆ ಮನೆ ವನ ಮಹೋತ್ಸವ ಅಭಿಯಾನ ಅಂಗವಾಗಿ ರೋಟರಿ ಕ್ಲಬ್ ಆಫ್ ಬೀದರ್ ಫೋರ್ಟ್‍ನಿಂದ ನಗರದಲ್ಲಿ ಕ್ಲಬ್ ಸದಸ್ಯರಿಗೆ ಸಸಿ ವಿತರಿಸಲಾಯಿತು.
ಕ್ಲಬ್ ಪದಾಧಿಕಾರಿಗಳು ನಗರದ ವಿವಿಧ ಕಾಲೊನಿಗಳ ಸದಸ್ಯರ ಮನೆಗಳಿಗೆ ತೆರಳಿ, ವಿವಿಧ ಬಗೆಯ 35 ಸಸಿಗಳನ್ನು ವಿತರಿಸಿದರು.
ಪರಿಸರ ಸಂರಕ್ಷಣೆಗಾಗಿ ಮನೆ ಮನೆ ವನ ಮಹೋತ್ಸವ ಅಭಿಯಾನ ನಡೆಸಲಾಗುತ್ತಿದೆ. ಇದರ ಮೊದಲ ಹಂತವಾಗಿ ಸದಸ್ಯರಿಗೆ ಸಸಿ ವಿತರಿಸಲಾಗಿದೆ. ಎರಡನೇ ಹಂತದಲ್ಲಿ ಸಾರ್ವಜನಿಕರಿಗೆ ಸಸಿ ವಿತರಿಸಲಾಗುವುದು. ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕ್ಲಬ್ ಅಧ್ಯಕ್ಷ ಸಂಗಮೇಶ ಆಣದೂರೆ ಹೇಳಿದರು.
ಪರಿಸರ ಸಂರಕ್ಷಣೆ ಬಹಳ ಅವಶ್ಯಕವಾಗಿದೆ. ಹೀಗಾಗಿ ಎಲ್ಲರೂ ಸಸಿ ನೆಟ್ಟು ಬೆಳೆಸಬೇಕು ಎಂದರು.
ಕ್ಲಬ್ ಕಾರ್ಯದರ್ಶಿ ಗುಂಡಪ್ಪ ಘೋದೆ, ಸದಸ್ಯರಾದ ಶಿವಕುಮಾರ ಯಲಾಲ್, ಎಸ್.ಬಿ. ಚಿಟ್ಟಾ, ಸತ್ಯಪ್ರಕಾಶ, ಜಹೀರ್ ಅನ್ವರ್, ಡಾ. ಎಸ್.ಎಂ. ಪಾಟೀಲ, ಎಂ.ಎಸ್. ಚಲ್ವಾ, ಸೋಮನಾಥ ಗಂಗಶೆಟ್ಟಿ, ಕಾಶೀನಾಥ ಪಾಟೀಲ, ರಾಜಕುಮಾರ ಜೆ. ಮೊದಲಾದವರು ಇದ್ದರು.

Ghantepatrike kannada daily news Paper

Leave a Reply

error: Content is protected !!