ಮಣಿಪೂರದ ಘಟನೆ ಖಂಡಿಸಿ ಪ್ರೋ. ಬಿ. ಕೃಷ್ಣಪ್ಪನವರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮನವಿ
ಭಾರತ ದೇಶದಲ್ಲಿ ಅತಿಸಣ್ಣರಾಜ್ಯ ಮಣಿಪೂರದಲ್ಲಿ ಕುಕ್ಕಿಸಮುದಾಯ ಆದಿವಾಸಿ ಬುಡಕಟ್ಟು ಜನಾಂಗದ ಮಹಿಳೆಯರ ಬತ್ತಲೆ ಹಾಗೂ ಅತ್ಯಾಚಾರ ಈ ಘಟನೆಯ ದೇಶದ ಜನರಲ್ಲಿ ಅತಿ ಸಂಕಟವನ್ನು ಉಂಟುಮಾಡಿದೆ ಸಮುದಾಯದ ಹೆಸರಿನಲ್ಲಿ ಜನಗಳ ಸಾಮೂಹಿಕ ಹತ್ಯ, ದಾಳಿಗಳು, ಅತ್ಯಚಾರ, ಗುಂಪು, ಅತ್ಯಾಚಾರ ಘಟನೆಗಳು ಮಣಿಪೂರದ ಕಳೆದ 2 ತಿಂಗಳಿನಿAದ ಎಡಬಿಡದೆ ಅಲ್ಲಿನ ಜನರ ಮೇಲೆ ಅನ್ಯಾಯವನ್ನು ನಡಿತಾಯಿದೆ. ಕೇಂದ್ರ ಹಾಗೂ ಮಣಿಪೂರ ರಾಜ್ಯದ ಬಿಜೆಪಿ ಸರ್ಕಾರಗಳು ನೀತಿಗಳು ಸಮುದಾಯದ ಕಡೆಗೆ ವಿಭಜನೆ ಉಂಟುಮಾಡಿದೆ. ಮಣಿಪೂರ ಹತ್ತಿ ಉರಿಯಲು ಕಾರಣವಾಗಿದೆ.
ಭಾರತ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆಯನ್ನು ನೀಡುವಲ್ಲಿ ಕೇಂದ್ರ ಸರ್ಕಾರವೂ ಸಂಪೂರ್ಣ ವಿಭಲವಾಗಿದೆ. ಅದೇ ರೀತಿಯಾಗಿ ಮಣಿಪೂರದ ಕುಕ್ಕಿ ಸಮುದಾಯದ ಹೆಣ್ಣುಮಕ್ಕಳು ಬೆತ್ತಲೆ ಮಾಡಿರುವ ಮುಖ್ಯ ಆರೋಪಿಯನ್ನು ಕೂಡಲೇ ಬಂದಿಸಲೇ ಬೇಕು. ಸಿ.ಬಿ.ಐ. ತನಿಖೆ ನಡೆಸಿ ಮಣಿಪೂರದ ರಾಜ್ಯ ಸರ್ಕಾರ ವಜಾಗೋಳಿಸಿ ಮಣಿಪೂರ ರಾಜ್ಯದ ಮುಖ್ಯ ಮಂತ್ರಿಯನ್ನು ಕೂಡಲೆ ರಾಜಿನಾಮೆ ಪಡೆಯಬೇಕು. ನೊಂದ ಕುಟುಂಬಕ್ಕೆ ಸೂಕ್ತ ರ‍್ಷಣೆ ನೀಡಿ ಕೇಂದ್ರ ಸರ್ಕಾರದಿಂದ ನೊಂದ ಕುಟುಂಬಗಳಿಗೆ ಸರ್ಕಾರದ ಪರಿಹಾರ ನೀಡಿ ಕೂಡಲೇ ರಕ್ಷಣೆ ನೀಡಬೇಕು.
ಒಂದು ವೇಳೆ ಕೇಂದ್ರ ಸರ್ಕಾರವು ಬೇಡಿಕೆಗಳು ಸ್ಪಂದಿಸದಿದಲ್ಲಿ ಮುಂಬರು ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಮಣಿಪೂರದ ರಾಜ್ಯ ಸರ್ಕಾರದ ವಿರುದ್ಧ ಹಂತಹAತವಾಗಿ ತಮ್ಮ ವಿರುದ್ಧ ಹೋರಾಟ ಮಾಡಲಾಗುವುದುದೆಂದು ಪ್ರೊ. ಬಿ.ಕೃಷ್ಣಪ್ಪಾ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಇಂದು ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಷ್ಟçಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲಿ ರಾಜ್ಯ ಸಂಘಟನಾ ಸಂಚಾಲಕರಾದ ರವಿಕುಮಾರ ವಾಘಮಾರೆ, ಜಿಲ್ಲಾ ಸಂಚಾಲಕರಾದ ಜಗನ್ನಾಥ ಸಾಗರ, ಬಾಗತರಾಜ ಸಾಗರ, ಕಲ್ಲಾಪ್ಪಾ ಬಂದೇ, ಜಗನ್ನಾಥ ವಾಲಂಕರ್, ಎಡಿಸನ್ ಸುಧಾಕರ, ರಾಜಕುಮಾರ ಡೊಂಗ್ರೆ, ವಿಶಾಲ, ಶಶಿಧರ ಜ್ಯೋತಿ, ರಾಜಕುಮಾರ ಜಯಂ, ಮಾಣಿಕರಾವ ಎಂ.ಬಿ, ಸುಧಾಕರ ದೊಡ್ಡಿ, ಸಿಯೊ ಕಾಳೆ, ಸಿದ್ಧರ್ಥ ಲಾಂಬಲೆ, ಸಾಗರ, ಹರೀಷ ಕಾಂಬಳೆ, ಶಿವರಾಜ ಸುಲತ್ಯೆ ಇದ್ದರು