ಮಣಿಪರ , ನೂಹ ಗುರುಗ್ರಾಮಗಳಲ್ಲಿ ಕೋಮು ಗಲಭೆ ಖಂಡಿಸಿ ಪ್ರತಿಭಟನೆ
ಮಣಿಪುರ ರಾಜ್ಯದಲ್ಲಿ ದಿನಾಂಕ: 03/05/2023 ರಿಂದ ತೀವೃವಾದ ದಂಗೆಗಳಾಗುತ್ತಿವೆ. ಸರಕಾರದ ಆಯುಧಗಳನ್ನು ಲೂಟಿಮಾಡಲಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗಿರುತ್ತದೆ. ಸರಕಾರ ಬೆಂಬಲಿತ ದೌರ್ಜನ್ಯಗಳು ಇನ್ನು ನಡೆಯುತ್ತಿವೆ. ಭಾರತೀಯರಾದ ನಾವು ನಾಚಿಕೆ ಪಡಬೇಕಾದಂತ; ಮಹಿಳೆಯರನ್ನು ನಗ್ನ ಮಾಡಿ ಮೆರವಣಿಗೆ ಮಾಡಿದ್ದಲ್ಲದೆ ಮಾನಭಂಗ ಮಾಡಿದ್ದು ಬೆಳಕಿಗೆ ಬಂದಿರುತ್ತದೆ. ಕೇಂದ್ರ ಸರಕಾರವಾಗಲಿ ಮಣಿಪುರ ರಾಜ್ಯ ಸರ್ಕಾರವಾಗಲಿ ದಂಗೆಗಳನ್ನು ತಡೆಯಲು ವಿಫಲವಾಗಿರುತ್ತದೆ. ಆದರೆ ಡಬಲ್ ಇಂಜಿನ ಸರಕಾರ ತನ್ನ ಪುಂಗಿ ಊದುವುದನ್ನು ನಿಲ್ಲಿಸುವುದಿಲ್ಲ.
ಹರಿಯಾಣದಲ್ಲಿ ಕೋಮು ಪ್ರಚದನೆ ಮಾಡಿರುತ್ತರೆ ಬಲಪಂತಿಯ ಸಂಘಟನೆಯಾಗಿರುವ ವಿಶ್ವ ಹಿಂದು ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ಮಾಡುತ್ತಿರುವುದು ಬೆಳಕಿಗೆ ಬಂದಿರುತ್ತದೆ. ಕೋಮು ಪ್ರಚೋದನೆಯ ವಿಷಬೀಜವು ರೇಲ್ವೆವರೆಗೆ ತಲುಪಿದ್ದು; ಕೋಮು ವಿಷಬೀಜ ತಲೆಯಲ್ಲಿ ತುಂಬಿಕೊAಡಿರುವ ಪೋಲಿಸನೊಬ್ಬರು ರೇಲ್ವೆಯಾತ್ರಿಗಳ ಕೊಲೆ ಮಾಡಿದ್ದನ್ನು ನೋಡಿದರೆ ಕೇಂದ್ರ ಸರಕಾರದ ಈಚಿsಛಿisಣ ನೀತಿಯು ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದೆ.
ಮಣಿಪುರದಲ್ಲಿ ಮತ್ತು ಹರಿಯಾಣದಲ್ಲಿ ರಾಷ್ಟçಪತಿ ಆಡಳಿತ ಘೋಷಿಸಬೇಕು. ಹರಿಯಾಣದಲ್ಲಿ ಗಲಭೆಗೆ ಕಾರಣವಾದ ಬಲಪಂಥಿಯ ಸಂಘಟನೆಗಳನ್ನು ಬೆಂಬಲಿಸುವ ಅಲ್ಲಿನ ಗೃಹ ಮಂತ್ರಿಯನ್ನು ಸಂಪುಟದಿAದ ತೆಗೆದು ಹಾಕಬೇಕು. ರೇಲ್ವೆ ಯಾತ್ರಿಗಳನ್ನು ಕೊಲೆ ಮಾಡಿದ್ದನ್ನು ನ್ಯಾಯಾಂಗ ವಿಚಾರಣೆ ಮಾಡಬೇಕು ಎಂದು ಭಾರತ ಕಮೂಯನಿಷ್ಟ ಪಕ್ಷ ತಿವ್ರವಾಗಿ ಖಂಡಿಸಿ ಜಿಲ್ಲಾಧುಕಾರಿಗಳ ಮುಖಾಂತರ ರಾಷ್ಟçಪತಿ ಅವರಿಗೆ ಮನವಿ ಸಲ್ಲಿಸಿದ್ದರು.
ಈ ಸಂದರ್ಭದಲ್ಲಿ ಖಾದರ ಶಾ, ಎಂ ಡಿ ಶಫಾಯತ ಅಲಿ, ಅಲಿ ಅಹ್ಮದ ಖಾನ, ಬಾಬುರಾವ ಹೊನ್ನ, ನಜೀರ ಅಹ್ಮದ, ಗುರುಪಾದಯ್ಯಾ ಸ್ವಾಮಿ, ಮೌಲಾ, ಪ್ರಭು ಹೂಚಕನಳ್ಳಿ, ಸುನೀಲ ವರ್ಮಾ, ಪ್ರಭು ತಗಣಿಕರ್, ಶಿವರಾಜ ಕಮಠಾಣಾ, ರಾಮಣ್ಣಾ ಅಲ್ಮಾಸಪೂರ, ಎಂ ಡಿ ಖಮರ ಪಟೇಲ್, ಸ್ವಾಮಿದಾಸ ನಾಗೂರಾ, ರಾಜಕುಮಾರ ನಗೂರಾ, ಯಶವಂತ, ನಿಜಾಮುದ್ದಿನ, ಇಮಾನವ್ಲೆಲ್ ಗಾದಗಿ, ಭಿಮಣ್ಣಾ ಭಂಡೆ, ಮುನಿರೊದ್ದಿನ, ಉಮಕಾಂತ ಭಾಲ್ಕಿ ಇದ್ದರು.