ಬೀದರ್

ಮಜಗೆ ನಿಷ್ಠಾವಂತ ಅಧಿಕಾರಿ.. ವ್ಹಿ.ವ್ಹಿ.ಪೂಜಾರ

ಅಧಿಕಾರ ಎನ್ನುವುದು ಸಾರ್ವಜನಿಕರ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಮಾಡಲು ಸಿಕ್ಕ ಸದಾವಕಾಶ ಎಂದರಿತು ನಾಲ್ವತ್ತು ವರ್ಷಗಳ ಕಾಲ ವಿವಿಧ ಹುದ್ದೆ ಅಲಂಕರಿಸಿ ಉಪನಿರ್ದೇಶಕರಾಗಿ ಕಪ್ಪು ಚುಕ್ಕೆ ರಹಿತವಾಗಿ ಕೆಲಸ ನಿರ್ವಹಿಸಿರುವುದು ಲಾಖೆಗೊಂದು ಹೆಮ್ಮೆಯ ವಿಷಯ ಎಂದು ನಿವೃತ್ತ ಕೃ.ಉ.ಮಾ.ಸ.ಬೆಂಗಳೂರಿನ ಅಡಿಶನಲ್ ಡೈರೆಕ್ಟರ್ ವ್ಹಿ.ವ್ಹಿ. ಪೂಜಾರ ನುಡಿದರು.

ನಗರದ ಪೋಲಾ ಕನ್ ವೆನ್ಷನ್ ಹಾಲ್ ನಲ್ಲಿ ಶಿವಶರಣಪ್ಪ ಮಜಗೆ ವಚನ ವೈಭವ ಸಮಿತಿ ಹಾಗೂ ಬಂಧು ಮಿತ್ರರು ಏರ್ಪಡಿಸಿದ್ದ ವಯೋನಿವೃತ್ತಿ ಸಮಾರಂಭದಲ್ಲಿ ವ್ಹಿ ವ್ಹಿ ಪೂಜಾರ ಮಾತನಾಡುತ್ತ, ಶಿವಶರಣಪ್ಪ ಮಜಗೆ ನ್ಯಾಯ ನಿಷ್ಟುರಿ, ನೇರ, ನುಡಿ ಸ್ಪಷ್ಟವಾದ ಮಾತುಗಾರಿಕೆ ಮೈಗೂಡಿಸಿ ಕೊಂಡವರಾಗಿದ್ದರು, ಯಾರ ಮುಲಾಜಿಗೂ ಒಳಗಾಗದೇ ನಿಯಮದಡಿಯಲ್ಲಿ ಕೆಲಸ ಮಾಡಿದಾಗ ಅನೇಕ ಸಂಕಷ್ಟಗಳು ಎದುರಾಗಿದ್ದು ನಾನು ಸ್ವತಃ ಬಲ್ಲವನಾಗಿದ್ದೇನೆ. ಅವರೊಬ್ಬ ದಕ್ಷತೆಯ ಅಧಿಕಾರಿ ಎಂಬುದು ಇಲಾಖೆಯಲ್ಲಿ ಮನೆ ಮಾತಾಗಿತ್ತು. ಬೀದರ, ಭಾಲ್ಕಿ, ರಾಯಚೂರ, ಯಾದಗಿರ, ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ಕರ್ತವ್ಯ ನಿರ್ವಹಿಸಿ, ಪ್ರತಿ ರೈತರ ಜೀವನಾಡಿ ಅರಿತವರು. ಕೆಳವರ್ಗದವರ ಬಾಳಿಗೆ ಬೆಳಕಾದವರು,ಬೀದರನ ಗಾಂಧಿ ಗಂಜನಲ್ಲಿ ರೈತರ ದವಸ ಧಾನ್ಯಗಳಿಗಾಗಿ ಟಿನ್ ಶೆಡ್ ನ ಯೋಜನೆ ಮಾಡಿ ಸರಕಾರದಿಂದ ಅನುಮೋದನೆ ಪಡೆದು ದಾಖಲೆ ಮಾಡಿದ್ದಾರೆ. ಇಂದು ಬೀದರ ಮಾರುಕಟ್ಟೆ ಮಾದರಿಯಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತನ್ನ ಸಂಸಾರದ ಕಡೆಗೆ ಗಮನ ಹರಿಸದೇ ಇಲಾಖೆಯ ಉನ್ನತಿಗಾಗಿ ದುಡಿದ ಅಪರೂಪದ ಉಪನಿರ್ದೇಶಕರು
ಎಂದು ಅವರ ಸೇವಾ ಅನುಭವ ಹಂಚಿಕೊಂಡರು.

ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀ ಎನ್.ಡಿ. ಬಯಾಸ್ ಮುಖ್ಯ ಅತಿಥಿಗಳಾಗಿ ಶಿವಶರಣಪ್ಪ ಮಜಗೆ ಒಬ್ಬ ಕಡಕ ಅಧಿಕಾರಿ, ನಿಯಮದಡಿಯಲ್ಲಿದ್ದರೆ ಯಾರಿಗೂ ಹೇಳದೆ ಕೇಳದೆ ಕೆಲಸ ಮಾಡುವ ದೂರದೃಷ್ಟಿ ಉಳ್ಳವರು. ಅನೇಕ ಸಲ ಚುನಾಯಿತ ಸದಸ್ಯರ ಕೆಂಗುಣ್ಣಿಗೆ ಬಲಿಯಾಗಿದ್ದು ನಾನು ಅರಿತಿರುವೆನು. ಇಂಥವರು ಇಂದು ನಿವೃತ್ತಿ ಯಾಗಿದ್ದು ಇಲಾಖೆ ಒಳ್ಳೆಯ ಅಧಿಕಾರಿಗಳನ್ನು ಕಳೆದು ಕೊಂಡಿದೆ ಎಂಬುದು ನನ್ನ ಅಭಿಪ್ರಾಯ. ಅವರ ಎರಡನೇ ಅವಧಿಯ ಸೇವೆ ಸುಮುಧುರವಾಗಲೆಂದು ದೇವರಲ್ಲಿ ಪ್ರಾರ್ಥನೆ.

ಕಾರ್ಯಕ್ರಮದ ಅಧ್ಯಕ್ಷರಾಗಿ ಕಸಾಪ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಮಾತನಾಡಿ ಇವರೊಬ್ಬ ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಪಟು, ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಆಟವಾಡಿದ್ದಾರೆ. ಸಂಘದ ಕ್ರಿಡಾಕಾರ್ಯದರ್ಶಿಗಳಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಇವರು ಕೇವಲ ಅಧಿಕಾರಿಗಳಾಗಿರದೆ, ಕ್ರೀಡಾಪಟುಗಳಾಗಿ, ಸಮಾಜ ಬಂಧುಗಳಾಗಿ, ಸೇವಾ ದುರಂಧರರಾಗಿ ತನ್ನ ಇಡೀ ಜೀವನ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗೆ ಸವೆಸಿ ತತ್ತ್ವ ಸಿದ್ದಾಂತ ಅಳವಡಿಸಿ ಕೊಂಡು ಇಂಥ ಸಂಕಷ್ಟಮಯ ವಾತಾವರಣದಲ್ಲಿ ಕಲ್ಮಷ ರಹಿತವಾದ ಸೇವೆ ಮಾಡಿ ಬೀದರ ಜಿಲ್ಲೆಯ ಕೀರ್ತಿ ಪಾತಾಕೆ ಬಾನೆತ್ತರಕ್ಕೆ ಹಾರಿಸಿರುವುದು ನೆಮ್ಮದಿ ತಂದಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಮೊದಲಿಗೆ ಕೃಷಿ ವಿಜ್ಞಾನಿ ಡಾ ಮಲ್ಲಿಕಾರ್ಜುನ ನಿಂಗದಳ್ಳಿ ಸ್ವಾಗತಿಸಿದರೆ, ವಚನ ವೈಭವ ಸಮಿತಿ ಅಧ್ಯಕ್ಷ ರಾದ ರೇವಣಪ್ಪ ಮೂಲಗೆ ನಿರೂಪಿಸಿದರೆ ನಿವೃತ್ತ ಅಧಿಕಾರಿ ರಾಜೇಂದ್ರಕುಮಾರ ಎಕಲಾರೆ ವಂದಿಸಿದರು.

Ghantepatrike kannada daily news Paper

Leave a Reply

error: Content is protected !!