ಮಕ್ಕಳ ಹಕ್ಕುಗಳ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ
ಬೀದರ, ಜುಲೈ 19 -ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ “ಮಕ್ಕಳ ಹಕ್ಕುಗಳು” ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಮೆಟ್ರಿಕ ನಂತರ ಬಾಲಕಿಯರ ವಸತಿ ನಿಲಯ ಪ್ರತಾಪನಗರ ಬೀದರದಲ್ಲಿ ನಡೆಸಲಾಯಿತು.
“ಮಕ್ಕಳ ಹಕ್ಕುಗಳು” ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಎಸ್.ಕೆ. ಕನಕಟ್ಟೆ ಅವರು ಸಸಿಗೆ ನೀರು ಎರೆಯುವುದರ ಮೂಲಕ ಉದ್ಛಾಟಿಸಿ ಮಾತನಾಡಿದ ಅವರು ನಮ್ಮ ಭಾರತ ಸಂವಿಧಾನದ ಬಗ್ಗೆ ತಿಳಿಸಿದರು, ಪೋಸ್ಕೊ (PಔಅSಔ) ಂಛಿಣ ಬಗ್ಗೆ ಹಾಗೂ ಮೂಲಭೂತ ಹಕ್ಕುಗಳ ಬಗ್ಗೆ ತಿಳಿಸಿದರು.
ಉಪನ್ಯಾಸಕರಾಗಿ ಬೀದರ ವಕೀಲರಾದ ಮಂಗಲಾ ಇವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸವಲತ್ತುಗಳ ಬಗ್ಗೆ ತಿಳಿಸಿದರು. ಹಾಗೂ ಇನ್ನೋರ್ವ ವಕೀಲರಾದ ಜಯಶ್ರಿ ಪಾಟೀಲ್ ಅವರು ಮಕ್ಕಳ ಹಕ್ಕುಗಳು ಬಗ್ಗೆ ಮಾತನಾಡಿದ್ದರು.
ಕಾರ್ಯಕ್ರಮದಲ್ಲಿ ಸುಭಾಷ ನಾಗೂರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಗಮ ಅವರು ಎಲ್ಲರನ್ನು ಸ್ವಾಗತಿಸಿದ್ದರು ಹಾಗೂ ಶೀಲಾ ಅವರು ನಿರೂಪಣೆ ಮಾಡಿದ್ದರು. ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಯಾದ ಆಕಾಶ ಸಜ್ಜನ ಹಾಗೂ ಇತರರು ಉಪಸ್ಥಿತರಿದ್ದರು.