ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿ ಕಿಟ್ ವಿತರಣೆ
ಬೀದರ್: ಇಲ್ಲಿಯ ಕೃಷಿ ಕಾಲೊನಿಯ ಮೌನೇಶ್ವರ ದೇವಸ್ಥಾನ ರಸ್ತೆಯಲ್ಲಿ ಇರುವ ಚಾಲುಕ್ಯ ಪ್ರಿ ಸ್ಕೂಲ್ನಲ್ಲಿ ಯೋಗ ಶಿಕ್ಷಕ ಶಿವಕುಮಾರ ರೆಡ್ಡಿ 15 ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳ ಕಿಟ್ ಉಚಿತವಾಗಿ ವಿತರಿಸಿದರು.
ನರ್ಸರಿ, ಎಲ್ಕೆಜಿ, ಯುಕೆಜಿ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ನೋಟ್ಬುಕ್, ಸಮವಸ್ತ್ರ, ಬ್ಯಾಗ್, ಟಿಫಿನ್ ಬಾಕ್ಸ್ ಹಾಗೂ ಬಾಟಲಿ ಒಳಗೊಂಡ ಕಿಟ್ ವಿತರಿಸಲಾಗಿದೆ ಎಂದು ರೆಡ್ಡಿ ಅವರು ತಿಳಿಸಿದರು.
ಶಾಲೆಯ ಅಧ್ಯಕ್ಷ ಶಿವಕುಮಾರ ನಾಗೂರೆ, ಉಪಾಧ್ಯಕ್ಷೆ ಛಾಯಾ, ಚಿಂತಕ ವಿನಾಯಕ ಜಿ, ರವಿ ಮೇತ್ರೆ, ಶಿಕ್ಷಕರಾದ ಹಂಸ ಮೈಸೂರು, ಆಶಾರಾಣಿ ಮೇತ್ರೆ ಇದ್ದರು.