ಬೀದರ್

ಮಕ್ಕಳಿಗೆ ಪರಿಸರದ ಜಾಗೃತಿ ಮೂಡಿಸುವುದು ಪಾಲಕರ ಜವಾಬ್ದಾರಿಯಾಗಿದೆ  …. ವೀರಭದ್ರಪ್ಪ ಉಪ್ಪಿನ್

 ಅಖಿಲ ಭಾರತ ವಿಶ್ವವಿದ್ಯಾ ಲಯಗಳ ನೌಕರರ ಒಕ್ಕೂಟದ ವತಿಯಿಂದ ಇಂದು, ಪರಿಸರ ಜಾಗ್ರತಿ ಅಭಿಯಾನದ ಅಂಗ ವಾಗಿ, ಮಕ್ಕಳಿಗೆ  ಉಡುಗೊರೆ ಯಾಗಿ ಸಸಿಯನ್ನು ನೀಡ ಲಾಯಿತು.  ಸೀಮಿ ನಾಗಣ್ಣ ದೇವಸ್ಥಾನದಲ್ಲಿ ಮಜಗೆ ಪರಿ ವಾರದ ಕಿರು ಗುಣಿ ಕಾರ್ಯ ಕ್ರಮದಲ್ಲಿ ಮಕ್ಕಳಿಗೆ ಉಡು ಗೊರೆ ರೂಪದಲ್ಲಿ  ಕರಿಬೇವು ಸಸಿಗಳನ್ನು ನೀಡಲಾಯಿತು. ಒಕ್ಕೂಟದ  ಕಾರ್ಯಕಾರಿ ಸಮಿತಿ ಸದಸ್ಯರಾದ  ವೀರ ಭದ್ರಪ್ಪ ಉಪ್ಪಿನರವರು ಮಾತನಾಡಿ, ಜಿಲ್ಲೆಯ ವಿವಿಧ ಸ್ಥಳಗಳಲ್ಲಿ, ಬಗೆ ಬಗೆಯ ಕಾರ್ಯಕ್ರಮಗಳಲ್ಲಿ ಸಾಧ್ಯ ವಿರುವೆಡೆಯಲ್ಲೂ ಉಚಿತವಾಗಿ  ಸಸಿಗಳನ್ನು ವಿತರಿಸುವ  ಹಾಗೂ ಪರಿಸರದ ಜಾಗ್ರತಿ ಮೂಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ತಿಳಿಸಿದರು. ಮಕ್ಕಳಾದ  ಸಾಯಿನಿಧಿ, ಸಾಯಿಶ್ರಾವ್ಯ ಇವರಿಗೆ ಸಸಿಯನ್ನು ನೀಡ ಲಾಯಿತು. ಶಶಿಕಲಾ ದಿವಂಗತ ಸಿದ್ರಾಮಪ್ಪ ಮಜಗೆ, ಶಿವ ಕುಮಾರ್, ಸಂಜೀವಕುಮಾರ್, ಸಂಗೀತಾ,  ಸವಿತಾ ಹಾಗೂ ಅನೇಕ ಬಂಧು-ಬಳಗದವರು ಹಾಜರಿದ್ದರು.

Ghantepatrike kannada daily news Paper

Leave a Reply

error: Content is protected !!