ಮಂದಿರದ ಅಭಿವೃದ್ದಿಗೆ ಶ್ರಮಿಸಲಾಗುವುದು ಈಶ್ವರಸಿಂಗ್ ಠಾಕೂರ್
ಬೀದರ: ಬಿಜೆಪಿ ಸರ್ಕಾರವಿದ್ದಾಗ ಶ್ರೀ ತುಳಜಾಭವಾನಿ ಮಂದಿರಕ್ಕೆ ರೂ. 50 ಲಕ್ಷ ಅನುದಾನ ಘೋಷಣೆ ಮಾಡಲಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಮೇಲೆ ಅನುದಾನ ತಡೆಹಿಡಿಯಲಾಗಿದೆ. ಹೀಗಾಗಿ ಭವಾನಿ ಮಾತಾ ಮಂದಿರಕೆÀ ಅನುದಾನ ಬಿಡುಗಡೆ ಮಾಡಿಸಲಾಗುವುದು. ಮಂದಿರದ ಅಭಿವೃದ್ದಿಯ ಜೊತೆಗೆ ಹರಳಯ್ಯ ಸಮಾಜದ ಏಳ್ಗೆಗೆ ಶ್ರಮಿಸಲಾಗುವುದು ಎಂದು ಭಾಜಪಾ ವಿಭಾಗೀಯ ಪ್ರಭಾರಿ ಹಾಗೂ ಬೀದರ ವಿಧಾನಸಭಾ ಕ್ಷೇತ್ರದ ನಾಯಕ ಈಶ್ವರಸಿಂಗ್ ಠಾಕೂರ್ ತಿಳಿಸಿದರು.
ನಗರದ ಮೈಲೂರ ರಸ್ತೆಯಲ್ಲಿರುವ ಲಿಡ್ಕರ್ ಕಾಲೋನಿಯ ಶ್ರೀ ತುಳಜಾ ಭವಾನಿ ಮಾತಾ ಮಂದಿರದಲ್ಲಿ ಮಾತೆಯ ವರ್ಧಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಠಾಕೂರ್ ಅವರು ಸುಮಾರು 17 ವರ್ಷಗಳಿಂದ ಇಲ್ಲಿ ಮಹಾತಾಯಿಯ ವರ್ಧಂತಿ ಹಾಗೂ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತಿದ್ದು, ಮಂದಿರಕ್ಕೆ ಅನುದಾನ ಅವಶ್ಯಕತೆ ಇರುವ ಕಾರಣ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಕೊಡಿಸಲಾಗುವುದ ಎಂದು ಭರವಸೆ ನೀಡಿದರು.
ಇದೇ ವೇಳೆ ಠಾಕೂರ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ಭವಾನಿ ಮಾತಾ ವರ್ಧಂತಿ ಕಾರ್ಯಕ್ರಮದಲ್ಲಿ ಹರಳಯ್ಯ ಸಮಾಜ ಸಂಘದ ಅಧ್ಯಕ್ಷರಾದ ಸುಭಾಷ ಟಿಳ್ಳೇಕರ್, ಸಮಾಜದ ಪ್ರಮುಖರಾದ ಈಶ್ವರ ಕನೇರಿ, ಶಾಮ ಸಿ., ಭಾನುದಾಸ್ ಕೆ, ಸುಭಾಷ ಎಚ್, ಸಂಜು ಕೆ, ಯುವರಾಜ ಸಿ, ಸಂದೀಪ್ ಡಿ, ರವಿ ಹೆಚ್, ಗೋಪಾಲ ಡಿ, ಮಾರುತಿ ಜಿ, ರಾಜಕುಮಾರ ಎಸ್, ಶಿವಕುಮಾರ ಸೇರಿದಂತೆ ಸಮಾಜದ ಸಾವಿರಾರು ಬಾಂಧವರು ಉಪಸ್ಥಿತರಿದ್ದು, ಶ್ರೀ ಭವಾನಿ ಮಾತಾ ದರ್ಶನ ಪಡೆದು, ಮಹಾಪ್ರಸಾದ ಸವಿದು ಧನ್ಯರಾದರು.