ಬೀದರ್

ಭಾಷಣ, ಪ್ರಬಂಧ, ವಚನ ಕಂಠಪಾಠ ವಚನಗಾಯನ, ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ

ಬೀದರ: ನಗರದ ಪ್ರಸಾದ ನಿಲಯದಲ್ಲಿ ಶ್ರಾವಣ ಮಾಸ ಪ್ರವಚನ ನಿಮಿತ್ತ, ಹಮ್ಮಿಕೊಂಡಿರುವ ವಿವಿಧ ಸ್ಪರ್ಧೆಗಳ ಉದ್ಘಾಟನೆಯನ್ನು ದಿನಾಂಕ 22-08-2024 ರಂದು ಗುರುವಾರ ಮಧ್ಯಾಹ್ನ 12-00 ಗಂಟೆಗೆ ಜರುಗಿತು.
ಶ್ರಾವಣ ಮಾಸದ ಪ್ರವಚನಕಾರರಾದ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದರು. ವಚನಾಮೃತ ಕನ್ನಡ ಸಂಘದ ಅಧ್ಯಕ್ಷರಾದ ಪ್ರೊ. ಸಿದ್ರಾಮಪ್ಪಾ ಮಾಸಿಮಾಡೆಯವರು ಉದ್ಘಾಟಕರಾಗಿ ಆಗಮಿಸಿ ಬಸವ ಗುರುವಿಗೆ ಪೂಜೆ ಸಲ್ಲಿಸಿ, ಸಸಿಗೆ ನೀರೆರುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ಥಾ ವಿದ್ಯಾರ್ಥಿಗಳ ಅಂತರAಗದಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕುವಲ್ಲಿ, ಸ್ಪರ್ಧೆಗಳು ಅವಶ್ಯಕವಾಗಿವೆ. ವಚನ ಸಾಹಿತ್ಯದಲ್ಲಿರುವ, ವೈಚಾರಿಕ, ಸಂಸ್ಕಾರ, ಸಂಸ್ಕೃತಿ ಪ್ರಗತಿಪರ ವಿಚಾರಗಳು ಜನಮಾನಸಕ್ಕೆ ಮುಟ್ಟಿಸುವ ಕಾರ್ಯಕ್ರಮ ಇಂತಹ ಚರ್ಚಾಗೋಷ್ಠಿಯಿಂದ ಸಾಧ್ಯವಿದೆ. ಭಾರತ ದೇಶವು ವಿವಿಧ ಕ್ರೀಡೆಯಲ್ಲಿ ತನ್ನದೆ ಆದ ಪ್ರತಿಭೆಯನ್ನು ಅರಳುಸುವಂತ ಕಾರ್ಯಕ್ರಮದಲ್ಲಿ ಯುವಪಡೆ ಸಿದ್ಧವಿದೆ. ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಮಾಡುವಲ್ಲಿ ಸ್ಪರ್ಧೆಗಳಲ್ಲಿ ಪ್ರಗತಿಪರ ಚಿಂತನೆಗಳು ಇರಬೇಕು. ಸದ್ಯ ದೇಶವು ಒಲಂಪಿಕ ಕ್ರೀಡೆಯಲ್ಲಿ ಮುಂಚಣಿಯಲ್ಲಿರಬೇಕಾದರೆ ಯುವಕರು ಸಕರಾತ್ಮಕವಾಗಿ, ಸವಾಲುಗಳನ್ನು ಎದುರಿಸಿ, ಪ್ರಯತ್ನಶೀಲರಾಗಿ, ಯಶಸ್ವಿ ಪಥದಲ್ಲಿ ಸಾಗಬೇಕಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿರುವುದರಿಂದ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ, ಜೀವನದಲಿ ಉತ್ಸ್ಸುಕರಾಗಿ ಯಶಸ್ವಿಯಾಗಿ ಗುರಿ ಮುಟ್ಟಬಹುದು ಎಂದು ನುಡಿದರು.
ಪ್ರವಚನ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರೊ. ಉಮಾಕಾಂತ ಮಿಸೆಯವರು ಅಧ್ಯಕ್ಷತೆ ವಹಿಸಿ, ಮಾತನಾಡುತ್ತಾ ಭಾಷಣ, ಪ್ರಬಂಧ, ವಚನಕಂಠಪಾಠ, ವಚನ ಗಾಯನ, ಚಿತ್ರಕಲಾ, ರಂಗೋಲಿ ಸ್ಪರ್ಧೆಗಳನ್ನು ಪ್ರಾಥಮಿಕ ಶಾಲಾ ಹಂತದಿAದ ಪದವಿ-ಮಹಾವಿದ್ಯಾಲಯದವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಸುಮಾರು 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿಜೇತರಾದವರಿಗೆ ಪ್ರವಚನದ ಸಮಾರೋಪ ಸಮಾರಂಭ ದಿನಾಂಕ 03-09-2024 ರಂದು ಸಂಜೆ 6.30 ಗಂಟೆಗೆ ಪ್ರಶಸ್ತಿ ನೀಡಿ, ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾದ ರೇಣುಕಾ ಕಾಲೇಜಿನ ಪ್ರಾಚಾರ್ಯರಾದ ಅಶೋಕ ಬೂದಿಹಾಳ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ರಾಮನ ಗೌಡ ಬಿರಾದಾರ, ರಾವಬಹಾದ್ದೂರ ಮಹಾಬಳೇಶ್ವರ ಶಾಲೆ ಮುಖ್ಯಗುರುಗಳಾದ ಸುಧಾ ನಾಯಕ, ತೀರ್ಪುಗಾರರಾದ ಬಸವರಾಜ ಬಿರಾದಾರ, ಆಶಾ, ಶಿವಾನಂದ ಮಠಪತಿ, ಸಂತೋಷ, ಪ್ರೊ. ಸಂಗ್ರಾಮ ಎಂಗಳೆ, ಶಿವಲೀಲಾ, ಸುನೀತಾ, ಸಂಗ್ರಾಮಪ್ಪಾ ಬಿರಾದಾರ, ತೀರ್ಥಮ್ಮಾ, ನೀಲಾಂಬಿಕಾ, ಸಾರಿಖಾ, ಮತ್ತು ಪಾಲಕರು ಸ್ಪರ್ಧಾಳುಗಳು ಭಾಗವಹಿಸಿದರು. ಶ್ರೀಕಾಂತ ಬಿರಾದಾರ ಸ್ವಾಗತ ಕೋರಿ, ಕಾರ್ಯಕ್ರಮ ನಿರೂಪಿಸಿದರು. ಮತ್ತು ವಿಶ್ವನಾಥ ವಂದಿಸಿದರು. ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳಿಂದ ವಚನ ಗಾಯನ ನೇರವೇರಿತು.

Ghantepatrike kannada daily news Paper

Leave a Reply

error: Content is protected !!