ಬೀದರ್

ಭಾರತಕ್ಕೆ ಸ್ವಾತಂತ್ರö್ಯ ಸಿಗಲು ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನಗಳಿವೆ-ಸಚಿವ ಈಶ್ವರ ಬಿ.ಖಂಡ್ರೆ

ಬೀದರ, ಆಗಸ್ಟ್ 15 – ಭಾರತ ಅತ್ಯಂತ ಶ್ರೀಮಂತ ರಾಷ್ಟ್ರ. ಸುಮಾರು 200 ವರ್ಷಗಳ ಕಾಲ ಬ್ರಿಟಿಷರ ದಾಸ್ಯಕ್ಕೆ ಸಿಲುಕಿದ್ದ ಭಾರತವನ್ನು 1857ರ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ಎಂದೇ ಖ್ಯಾತವಾದ ಸಿಪಾಯಿ ದಂಗೆಯಿAದ ಹಿಡಿದು 1947ರ ಆಗಸ್ಟ್ 14ರ ಮಧ್ಯ ರಾತ್ರಿಯವರೆಗೆ ನಡೆದ ಸ್ವಾತಂತ್ರ‍್ಯ ಹೋರಾಟದಿಂದ ಮುಕ್ತಗೊಳಿಸಲಾಗಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟದಲ್ಲಿ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನಗಳಿವೆ. ಆ ಎಲ್ಲಾ ಮಹಾತ್ಮರ ಕೊಡುಗೆಗಳನ್ನು ಸ್ಮರಿಸುತ್ತಾ ನಾವಿಂದು ಸ್ವಾತಂತ್ರ‍್ಯ ದಿನವನ್ನು ಆಚರಿಸುತ್ತಿದ್ದೇವೆ ಎಂದು ಅರಣ್ಯ, ಜೈವಿಕ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಅವರು ಮಂಗಳವಾರ ಬೀದರ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ನಡೆದ 77ನೇ ಸ್ವಾತಂತ್ರೊö್ಯÃತ್ಸವ ದಿನಾಚರಣೆ ಅಂಗವಾಗಿ ರಾಷ್ಟç ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಭಾರತದ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸ ಅತ್ಯಂತ ರೋಚಕವಾಗಿದೆ. ಸತ್ಯ, ಶಾಂತಿ, ಅಹಿಂಸೆಯ ಸಾತ್ವಿಕ ಹೋರಾಟದಿಂದ ಗಳಿಸಿದ ಸ್ವಾತಂತ್ರ‍್ಯ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಭಾರತದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಪಂಡಿತ್ ಜವಾಹರಲಾಲ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ನೇತಾಜಿ ಸುಭಾಷಚಂದ್ರ ಬೋಸ್, ಬಾಲಗಂಗಾಧರ ತಿಲಕ್ ಮೊದಲಾದವರ ನೇತೃತ್ವದಲ್ಲಿ ಲಕ್ಷಾಂತರ ಸ್ವಾತಂತ್ರ‍್ಯ ಯೋಧರು ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಡಲು ತಮ್ಮ ಯೌವ್ವನವನ್ನು ಜೈಲುಗಳಲ್ಲಿ ಕಳೆದಿದ್ದರು, ಕಠಿಣ ಶಿಕ್ಷೆ ಅನುಭವಿಸಿದ್ದರು. ಹಲವರು ನೇಣು ಗಂಬವನ್ನೂ ಏರಿದ್ದರು. ಇವರೆಲ್ಲರ ತ್ಯಾಗವನ್ನು ಬಲಿದಾನದ ಫಲವಾಗಿ ನಾವಿಂದು ಸ್ವತಂತ್ರ ಭಾರತದಲ್ಲಿ ಇದ್ದೇವೆ. ಆ ಎಲ್ಲ ವೀರ ಸ್ವಾತಂತ್ರ‍್ಯ ಸೇನಾನಿಗಳನ್ನು ಗೌರವ ಪೂರ್ವಕವಾಗಿ ಸ್ಮರಿಸುವ ದಿನ ಇದಾಗಿದೆ. ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಕರ್ನಾಟಕದ ಕೊಡುಗೆಯೂ ಅಪಾರವಾಗಿದೆ. ಸಿಪಾಯಿ ದಂಗೆ ಅಥವಾ ಪ್ರಥಮ ಸ್ವಾತಂತ್ರ‍್ಯ ಹೋರಾಟಕ್ಕೆ 40 ವರ್ಷ ಮೊದಲೇ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ತನ್ನ ಖಡ್ಗ ಜಳಪಿಸಿದ್ದಳು, ರಾಣಿ ಚನ್ನಮ್ಮಾಜಿಯ ನೆಚ್ಚಿನ ಬಂಟ ಸಂಗೊಳ್ಳಿ ರಾಯಣ್ಣ ಅವರು ಹುಟ್ಟಿದ್ದು ಆಗಸ್ಟ್ 15 ಇಂದು ಸಂಗೊಳ್ಳಿ ರಾಯಣ್ಣರ ಜನ್ಮ ದಿನವೂ ಹೌದು. ಅವರಿಗೂ ನಾನು ಭಕ್ತಿ ಭಾವದಿಂದ ನಮಿಸುತ್ತೇನೆ.


ಬೀದರ್ ಜಿಲ್ಲೆಯಲ್ಲಿ ಕೂಡ ಹಲವಾರು ಸ್ವಾತಂತ್ರ‍್ಯ ಹೋರಾಟಗಾರರು ದೇಶದ ಸ್ವರಾಜ್ಯಕ್ಕಾಗಿ ಹೋರಾಡಿದ್ದಾರೆ. ಪ್ರಭುರಾವ ಕಂಬಳಿವಾಲೆ, ಆರ್.ವಿ.ಬಿಡಪ್ಪ, ಭೀಮಣ್ಣಪ್ಪ ಮಜಗೆ, ರಂಗನಾಥರಾವ್ ಸಾಯಗಾಂವಕರ್, ಮಹಾದೇವಪ್ಪ ಲೋಖಂಡೆ, ಕಾಶಪ್ಪ ಖಂಡ್ರೆ, ಮಾಧವರಾವ್ ಕಾಳೆ, ಬಸವರಾಜ ಹುಡಗಿ, ರಾಮಚಂದ್ರ ವೀರಪ್ಪ, ಭಾಯಿ ಬನ್ಸಿಲಾಲ್, ಮಲ್ಲಿಕಾರ್ಜುನ ಆರ್ಯ, ಗೋಪಾಲರಾವ್ ಮುಡಬಿ, ಧರ್ಮ ಪ್ರಕಾಶ ಶೇರಿಕಾರ, ಮಾಧವರಾವ್ ಬನಸಾಳೆ, ಅಣ್ಣಾರಾವ್ ಮುಚಳಂಬ, ಜಾನೋಬರಾವ್ ಜಾಧವ್, ಸಂಗಪ್ಪ ಮಾಹಾಜನ್ ಹಾಗೂ ನನ್ನ ತಂದೆಯವರಾದ ಶತಾಯುಷಿ ಭೀಮಣ್ಣ ಖಂಡ್ರೆ ಮೊದಲಾದವರು ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಭಕ್ತಿ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಭಾರತ ಯಶಸ್ವಿ ಪ್ರಜಾಪ್ರಭುತ್ವ ರಾಷ್ಟç, ಹಲವು ಭಾಷೆ, ಜಾತಿ, ಧರ್ಮಗಳಿದ್ದರೂ ಒಂದು ತಾಯಿಯ ಮಕ್ಕಳಂತೆ ನಾವೆಲ್ಲ ಇಂದು ಬದುಕುತ್ತಿದ್ದರೆ ಅದಕ್ಕೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾಗುವಂತಹ ಲಿಖಿತ ಸಂವಿಧಾನ ನೀಡಿರುವುದೇ ಕಾರಣ. ಈ ಸಂದರ್ಭದಲ್ಲಿ ನಾನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆಯನ್ನು ಸ್ಮರಿಸುತ್ತೇನೆ.
ಬಂಧುಗಳೇ ದೇಶ 77ನೇ ಸ್ವಾತಂತ್ರö್ಯ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ವಿವಿಧ ಇಲಾಖೆಯಗಳ ಸಾಧನೆಯ ಸಿಂಹಾವಲೋಕನ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಪಕ್ಷಿನೋಟ ಬೀರಲು ನಾನು ಇಚ್ಛಿಸುತ್ತೇನೆ.
ಸರ್ಕಾರದ ಮಹತ್ವಕಾಂಕ್ಷಿ 5 ಗ್ಯಾರಂಟಿ ಯೋಜನೆಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಯೋಜನೆಗಳು ಈಗಾಗಲೇ ಜಾರಿ ಮಾಡಲಾಗಿದ್ದು, ಈ ಯೋಜನೆಗಳ ಲಾಭ ಸಾರ್ವಜನಿಕರು ಪಡೆಯುತ್ತಿದ್ದಾರೆ. ಹಾಗೂ ಮುಂದಿನ ದಿನಗಳಲ್ಲಿ ಗೃಹಲಕ್ಷಿö್ಮÃ ಯೋಜನೆ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ.
ಉತ್ತಮ ಸಮಾಜ, ಬಲಿಷ್ಠ ದೇಶದ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕು. ಈ ನಿಟ್ಟಿನಲ್ಲಿ ಬೀದರ್ ಜಿಲ್ಲೆಯ ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ಸಂಕಲ್ಪ ಕೈಗೊಳ್ಳಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಕೇಂದ್ರಗಳ ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಲು, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮೂಲಸೌಕರ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ. ಗುಣಮಟ್ಟದ ಚಿಕಿತ್ಸೆಗಾಗಿ ನಮ್ಮ ಜಿಲ್ಲೆಯ ಜನ ಹೈದ್ರಾಬಾದ್‌ಗೆ ಹೋಗುತ್ತಿದ್ದು, ಬೀದರ್ ಜಿಲ್ಲಾ ಕೇಂದ್ರದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಕ್ಯಾಥಲ್ಯಾಬ್ ಆರಂಭಿಸಲಾಗುವುದು. ಅಪಘಾತದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡಿ ಅಮೂಲ್ಯವಾದ ಜೀವ ರಕ್ಷಿಸಲು ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಟ್ರಾಮಾ ಕೇಂದ್ರ ತೆರೆಯಲಾಗುವುದು.


ಜಿಲ್ಲೆಯ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲು ಮತ್ತು ಖಾಲಿ ಇರುವ ಶಿಕ್ಷಕರ ಹುದ್ದೆಗೆ 371 ಜೆ ವಿಶೇಷ ಸ್ಥಾನಮಾನದ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಹಂತ ಹಂತವಾಗಿ ಆರಂಭಿಸಲಾಗುವುದು. ಅಲ್ಲಿಯವರೆಗೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬೀಳದಂತೆ, ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಕೂಡಲೇ ಗೌರವ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಜೊತೆಗೆ ತಂತ್ರಜ್ಞಾನದ ನೆರವಿನಿಂದ ಗುಣಮಟ್ಟದ ಶಿಕ್ಷಣ ಒದಗಿಸಲು, ಜಿಲ್ಲೆಯ 200 ಪ್ರೌಢ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗುವುದು. ಬೀದರ್‌ನಲ್ಲಿ ಆರಂಭವಾಗಿರುವ ಎಂಜಿನಿಯರಿAಗ್ ಕಾಲೇಜ ಮತ್ತು ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯ ಒದಗಿಸಲಾಗುವುದು. ಬೀದರ್ ವಿಶ್ವವಿದ್ಯಾಲಯ ಆರಂಭವಾಗಿದ್ದರೂ ಅಲ್ಲಿ ಬೋಧಕರಿಲ್ಲ, ಮೂಲಸೌಕರ್ಯ ಇಲ್ಲ, ಈ ನಿಟ್ಟಿನಲ್ಲಿ ಬೀದರ್ ವಿವಿಯ ಸೌಲಭ್ಯ ವರ್ಧನೆಗೆ ಒತ್ತು ನೀಡಲಾಗುವುದು.
ಇದು ಸ್ಪರ್ಧಾಯುಗ, ಇಂದು ವಿದ್ಯಾರ್ಥಿಗಳು ವಿದ್ಯಾವಂತರಾದರೆ ಸಾಲದು ಅಥವಾ ಪದವಿ ಪಡೆದರೆ ಸಾಲದು ಅವರಲ್ಲಿ ಕೈಗಾರಿಕೆಗಳಿಗೆ, ಉದ್ದಿಮೆಗಳಿಗೆ, ಸಾಂಸ್ಥಿಕ ಸಂಸ್ಥೆಗಳಿಗೆ ಅಗತ್ಯವಾದ ಕೌಶಲ್ಯ ಬೇಕು. ಹೀಗಾಗಿ ಬೀದರ್ ಜಿಲ್ಲೆಯ ಯುವ ಜನರನ್ನು ಕೌಶಲ್ಯವಂತರನ್ನಾಗಿ ಮಾಡಲು 3000 ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಜೊತೆಗೆ ಎಂಜಿನಿಯರಿAಗ್, ಡಿಪ್ಲೊಮಾ ಪಡೆದ ಯುವಕರ ಕೌಶಲ್ಯ ವರ್ಧನೆಗೂ ಒತ್ತು ನೀಡಲಾಗುವುದು. ಈ ಮೂಲಕ ಜಿಲ್ಲೆಯ ಯುವಕರಿಗೆ ಉದ್ಯೋಗಾವಕಾಶ ಹೆಚ್ಚುವಂತೆ ಮಾಡಲಾಗುವುದು. ಜಿಲ್ಲಾಡಳಿತ ಮತ್ತು ಕೌಶಲ್ಯವರ್ಧನೆ ಇಲಾಖೆಯ ಸಹಯೋಗದಲ್ಲಿ ಬರುವ 21 ರಂದು ಅಂದರೆ ಮುಂದಿನ ಸೋಮವಾರ ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಿಕೆಐಟಿ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದರಲ್ಲಿ 21ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, 1 ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಲು ನೇರ ಸಂದರ್ಶನ ನಡೆಸಲಿವೆ. ಬೀದರ್ ಜಿಲ್ಲೆಯ ಕೈಗಾರಿಕೆಯಲ್ಲಿ ಹಿಂದುಳಿದಿದ್ದು, ಇಲ್ಲಿ ಕೈಗಾರಿಕಾ ವಲಯ ರೂಪಿಸಲು ಚಿಂತನೆ ಮಾಡಲಾಗಿದೆ. ಇದಕ್ಕಾಗಿ 500 ಎಕರೆಯ 2 ಕೈಗಾರಿಕಾ ವಲಯ ಗುರುತಿಸಲಾಗಿದ್ದು, ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಿ, ಹೊಸ ಕೈಗಾರಿಕೆ ಆರಂಭಿಸಲು ಉತ್ತೇಜನ ನೀಡಲಾಗುವುದು.
ಎಲ್ಲ ನಾಗರಿಕತೆಗಳೂ ಹುಟ್ಟಿರುವುದು ನದಿ, ಸರೋವರ, ಕೆರೆಗಳ ತಟದಲ್ಲೇ, ನೀರಿಲ್ಲದೆ ಮನುಷ್ಯ ಬದುಕಲು ಸಾಧ್ಯವೇ ಇಲ್ಲ. ಇದನ್ನು ಮನಗಂಡು ಜಿಲ್ಲೆಯಲ್ಲಿ 50 ಸಣ್ಣ ನೀರಾವರಿ ಯೋಜನೆಗಳನ್ನು ಕಾರ್ಯಕತಗೊಳಿಸಲು 100 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಜಿಲ್ಲೆಯ ಕೆರೆ ತುಂಬಿಸಲು, ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣಕ್ಕೂ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಗೋದಾವರಿ ನದಿ ನೀರು ಹಂಚಿಕೆ ಅಡಿ ನಮ್ಮ ಪಾಲಿನ ಸುಮಾರು 5 ಟಿಎಂಸಿ ಅಡಿ ನೀರನ್ನು ಸಂಪೂರ್ಣವಾಗಿ ಮತ್ತು ಸಮಪರ್ಕಕವಾಗಿ ಬಳಸಿಕೊಳ್ಳಲು ಮುಂದಿನ 3 ವರ್ಷದಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು.
ಕ್ರೀಡೆ ಯುವಜನರ, ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಅಗತ್ಯವಾಗಿದೆ. ಇಂದು ಒಲಂಪಿಕ್ ಮತ್ತು ಅಂತಾರಾಷ್ಟಿçÃಯ ಕ್ರೀಡಾಕೂಟಗಳಲ್ಲಿ ಭಾರತದ ಪ್ರತಿಭಾವಂತರು ತ್ರಿವರ್ಣ ಧ್ವಜ ಹಾರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೀದರ್ ಜಿಲ್ಲೆಯಲ್ಲಿ ಕೂಡ ಕ್ರೀಡೆಗೆ ಪ್ರೋತ್ಸಾಹ ನೀಡಲು ಅಂದಾಜು 25 ಎಕರೆ ಪ್ರದೇಶದಲ್ಲಿ ರಾಷ್ಟç ಮಟ್ಟದ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗುವುದು.
ಪ್ರವಾಸೋದ್ಯಮದಿಂದ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಕಲ್ಪಿಸುತ್ತದೆ. ಜೊತೆಗೆ ಸ್ಥಳೀಯ ಮೂಲ ಸೌಕರ್ಯ ಅಭಿವೃದ್ಧಿಗೂ ಕಾರಣವಾಗುತ್ತದೆ. ಮೈಸೂರು ಬಳಿ, ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ ಸಮೀಪ ನಿರ್ಮಿಸಲಾಗಿರುವ ಬೃಂದಾವನ ಗಾರ್ಡನ್ ಮತ್ತು ಆಲಮಟ್ಟಿ ಜಲಾಶಯದ ಬಳಿ ನಿರ್ಮಿಸಲಾಗಿರುವ ಉದ್ಯಾನದ ಮಾದರಿಯಲ್ಲೇ, ನಮ್ಮ ಕಾರಂಜ ಜಲಾಶಯದ ಮುಂಭಾಗದಲ್ಲಿ ಸುಸಜ್ಜಿತ ಕಾರಂಜಿ ಸಹಿತವಾದ ಉದ್ಯಾನ ಮಾಡಲು ನಿರ್ಧರಿಸಲಾಗಿದೆ. ಈ ಮೂಲಕ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. ಈ ಯೋಜನೆ ಈಗ ಡಿ.ಪಿ.ಆರ್. ಹಂತದಲ್ಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಅದೇ ರೀತಿ ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ನಿರ್ಮಿಸಿ ವಿಶ್ವವಿಖ್ಯಾತ ಪ್ರವಾಸಿ ತಾಣವಾಗಿ ಪರಿವರ್ತಿಸಲಾಗುವುದು. ಬೀದರನಲ್ಲಿ ನೂರಾರು ವರ್ಷಗಳ ಹಿಂದೆಯೇ ಭೂ ಅಂತರ್ಗತ ಕಾಲುವೆ ಮೂಲಕ ಜಲ ಪೂರೈಕೆ ವ್ಯವಸ್ಥೆ ಕರೇಜ ನಿರ್ಮಿಸಿರುವುದು ಪತ್ತೆಯಾಗಿರುವುದು ನಿಮಗೆಲ್ಲಾ ತಿಳಿದ ವಿಷಯ. ಈ ತಾಣವನ್ನು ಸಹ ಪ್ರವಾಸೋದ್ಯಮ ಮಹತ್ವದ ತಾಣವಾಗಿ ಅಭಿವೃದ್ಧಿ ಪಡಿಸಲಾಗುವುದು.
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಬೆಳಗಾವಿಯಲ್ಲಿರುವ ಚೆನ್ನಮ್ಮ ಪಡೆ, ಚಿತ್ರದುರ್ಗದಲ್ಲಿರುವ ಓಬವ್ವ ಪಡೆಯ ಮಾದರಿಯಲ್ಲಿ ಬೀದರ್ ಜಿಲ್ಲೆಯ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ 12ನೇ ಶತಮಾನದಲ್ಲಿಯೇ ಮಹಿಳೆಯರ ಹಕ್ಕು ಮತ್ತು ಸ್ವಾಭಿಮಾನದ ಸಂಕೇತವಾಗಿದ್ದ ಅಕ್ಕಮಹಾದೇವಿಯವರ ಹೆಸರಿನಲ್ಲಿ ಅಕ್ಕ ಪಡೆ ಎಂಬ ವಿಶೇಷ ಪಡೆ ರಚಿಸಲಾಗುವುದು. ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ಈ ಪಡೆ ಜಿಲ್ಲೆಯ ಪ್ರೌಢ ಶಾಲೆಗಳಿಗೆ ಮತ್ತು ಕಾಲೇಜುಗಳಲ್ಲಿ ಶಿಬಿರ ಆಯೋಜಿಸಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣಾ ಕಲೆ ಕಲಿಸುವುದರ ಜೊತೆಗೆ ಪೋಕ್ಸೊ ಕಾಯ್ದೆಯ ಬಗ್ಗೆಯೂ ಅರಿವು ಮೂಡಿಸುತ್ತದೆ.
ಬೀದರ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಲ್ಲಿ ಆಗುವ ಸಾವು, ನೋವು ತಗ್ಗಿಸಲು ಬರುವ ಡಿಸೆಂಬರ್‌ವರೆಗೆ ರಸ್ತೆ ಸುರಕ್ಷತಾ ಅಭಿಯಾನದ ಮೂಲಕ ಕ್ರೀಯಾ ಯೋಜನೆ ಹಮ್ಮಿಕೊಂಡು ಕಾರ್ಯಪ್ರವೃತ್ತರಾಗಲಾಗುವುದು. ಡಿಸ್ವಾö್ಯಟ ಬಲವರ್ಧನೆ- ಬೀದರ್ ಜಿಲ್ಲೆಯಲ್ಲಿ ಆisಣಡಿiಛಿಣ Sಠಿeಛಿiಚಿಟ Weಚಿಠಿoಟಿs & ಖಿಚಿಛಿಣiಛಿs ಖಿeಚಿm ನ್ನು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ತರಬೇತಿ ಹೊಂದಿರುವ 15 ಜನರ ತಂಡಕ್ಕೆ ಆಧುನಿಕ ಶಸ್ತಾçಶ್ತçಗಳು, ಡ್ರೋನ್ ಕ್ಯಾಮರಾ, ಸಿಸಿ ಟಿವಿ, ತಂತ್ರಜ್ಞಾನ, ಮಾದಕ ದ್ರವ್ಯ ಮತ್ತು ಸ್ಪೋಟಕ ವಸ್ತು ಪತ್ತೆ ಮಾಡುವ ಶ್ವಾನಗಳ ರಚಿಸುವ ಮೂಲಕ ಪೊಲೀಸ್ ಪಡೆಯ ಬಲವರ್ಧನೆ ಮಾಡಲಾಗುವುದು.
ಬೀದರ ಜಿಲ್ಲೆಯಲ್ಲಿ 2023ನೇ ಸಾಲಿನ ಮಳೆಗಾಲದಲ್ಲಿ ಒಟ್ಟು 15 ಲಕ್ಷ ಸಸಿಗಳನ್ನು ನೆಟ್ಟು, ಪೋಷಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 11 ಲಕ್ಷ 35 ಸಾವಿರ ಸಸಿಗಳನ್ನು ಜಿಲ್ಲೆಯ ವಿವಿಧ ಅರಣ್ಯ ಮತ್ತು ಅರಣ್ಯೇತರ ಪ್ರದೇಶಗಳಲಿ ನೆಡಲಾಗಿದೆ. ಇನ್ನೂಳಿದ ಸಸಿಗಳನ್ನು ಆಗಸ್ಟ್-2023ರ ಅಂತ್ಯದವರೆಗೆ ನೆಡಲಾಗುವುದು. ಪ್ರಸ್ತುತ ಸಾಲಿನಲ್ಲಿ 20 ಲಕ್ಷ ಸಸಿಗಳನ್ನು ಬೆಳೆಸಲಾಗುವುದು ಹಾಗೂ ಈ ಸಸಿಗಳನ್ನು 2024ನೇ ಸಾಲಿನ ಮಳೆಗಾಲದಲ್ಲಿ ನೆಡುತೋಪು ನಿರ್ಮಾಣ ಮಾಡಲಾಗುವುದು. ಸರ್ಕಾರವು ತಾಲ್ಲೂಕಿಗೊಂದು ಟ್ರಿ ಪಾರ್ಕ ನಿರ್ಮಾಣ ಮಾಡುವ ಗುರಿ ಹೊಂದಿದ್ದು ಬೀದರ್ ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ಟ್ರೀ ಪಾರ್ಕ್ ಇಲ್ಲವೋ ಅಂತಹ ತಾಲ್ಲೂಕಿನಲ್ಲಿ ಹೊಸದಾಗಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ ನಿರ್ಮಾಣ ಮಾಡಲು ಈ ವರ್ಷವೇ ಕ್ರಮ ಕೈಗೊಳ್ಳಲಾಗುವುದು.
ಬೀದರ ಜಿಲ್ಲೆಯಲ್ಲಿ ಕೃಷ್ಣ ಮೃಗಗಳು ಹೆಚ್ಚಾಗಿ ಕಂಡುಬAದಿರುವುದರಿAದ ಅವುಗಳ ಸಂರಕ್ಷಣೆಗಾಗಿ ಕೃಷ್ಣ ಮೃಗ ಸಂರಕ್ಷಣಾ ಮೀಸಲು ಪ್ರದೇಶವನ್ನು ಬಜೇಟ್‌ನಲ್ಲಿಯೇ ಘೋಷಣೆ ಮಾಡಲಾಗಿದೆ. ಇದಕ್ಕಾಗಿ 2 ಕೋಟಿ ರೂ. ಅನುದಾನವನ್ನು ಆಯವ್ಯಯದಲ್ಲಿ ನೀಡಲಾಗಿದೆ. ಬೀದರ ಜಿಲ್ಲೆಯ ಹೊನ್ನಿಕೇರಿ ಅರಣ್ಯ ಪ್ರದೇಶದಲ್ಲಿ ಚಿರತೆ ಕಂಡುಬAದಿದ್ದು, ಇದರ ಕುರಿತಾಗಿ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅರಿವು ಮೂಡಿಸಲಾಗಿರುತ್ತದೆ ಹಾಗೂ ಸದರಿ ಪ್ರದೇಶದ ಸುತ್ತಮುತ್ತ ತಂತಿ ಬೇಲಿ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಅರಣ್ಯ ಪ್ರದೇಶದ ಅಂಚಿನಲ್ಲಿರುವ ರೈತರ ಜಮೀನುಗಳಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಹಾನಿ ತಡೆಗಟ್ಟಲು ಸುಮಾರು 175 ಕಿ.ಮೀ. ಸೌರ ತಂತಿ ಬೇಲಿ ನಿರ್ಮಾಣಕ್ಕಾಗಿ 2 ಕೋಟಿ ರೂ. ಅನುದಾನ ನೀಡಲಾಗುವುದು. ಬೀದರ್ ಜಿಲ್ಲೆಯ ನೌಬಾದನಲ್ಲಿರುವ ಅರಣ್ಯ ತರಬೇತಿ ಕೇಂದ್ರವನ್ನು ಅಭಿವೃದ್ಧಿ ಮತ್ತು ಉನ್ನತೀಕರಣಕ್ಕೆ 5 ಕೋಟಿ ರೂ.ಗಳ ಅನುದಾನವನ್ನು ನೀಡಲಾಗುವುದು.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದಿರುವ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷಿö್ಮÃ, ಅನ್ನಭಾಗ್ಯ, ಯುವನಿಧಿ ಹಾಗೂ ಜನಸಾಮಾನ್ಯರ ಬದುಕಿನಲ್ಲಿ ಮಹತ್ವದ ಬದಲಾವಣೆ ತರುವ ಯೋಜನೆಗಳ ಪ್ರಗತಿಪರ ಅಭಿವೃದ್ಧಿಗಾಗಿ ನುಡಿದಂತೆ ನಡೆದಿದ್ದೇವೆ ಎಂಬ ಕಿರು ಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ತಂಡದಿAದ ಕರಾಟೆ ಪ್ರದರ್ಶನ, ಅಕ್ಕಾ ಪಡೆಯಿಂದ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ, ಶ್ವಾನ ದಳದಿಂದ ಮಾದಕ ವಸ್ತುಗಳ ಪತ್ತೆಯ ಅಣಕು ಪ್ರದರ್ಶನ ಹಾಗೂ ವಿವಿಧ ಶಾಲಾ ಕಾಲೇಜಿನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಕಣಮನ ಸೆಳೆದವು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಮ್ ಖಾನ್, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ವಿಧಾನ ಪರಿಷತ್ ಶಾಸಕರಾದ ರಘುನಾಥರಾವ ಮಲ್ಕಾಪೂರೆ, ಅರವಿಂದಕುಮಾರ ಅರಳಿ, ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ಧಿನ್ ಕಚೇರಿವಾಲೆ ಹಾಗೂ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಮ್., ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ ಲಂಗೋಟಿ, ಸಹಾಯಕ ಆಯುಕ್ತ ಲವೀಶ್ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಶಿವುಕುಮಾರ ಶೀಲವಂತ, ಪೊಲೀಸ್ ಉಪಾಧೀಕ್ಷಕ ಮಹೇಶ ಮೇಘಣ್ಣನವರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಶಾಲಾ-ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!