ಭಾಜಪ ವತಿಯಿಂದ ಬೀದರ ಜಿಲ್ಲೆಯಲ್ಲಿ ಪ್ರತಿ ಮನೆ ಮೇಲೆ ತಿರಂಗಾ-ತಿರAಗಾ ಯಾತ್ರೆ:-ಈಶ್ವರಸಿಂಗ್ ಠಾಕೂರ
ಬೀದರ,ಆ.12:- ಭಾರತದ ಪ್ರಧಾನಮಂತ್ರಿ ಮಾನ್ಯ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಸ್ವಾತಂತ್ರö್ಯದ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಕಳೆದ ವರ್ಷವೂ ಕೂಡ ನಾವೆಲ್ಲರೂ ದೇಶದ ನಾಗರಿಕರ ಜೊತೆ ಸೇರಿ ತಿರಂಗಾ ಯಾತ್ರೆ ಮತ್ತು ಪ್ರತಿ ಮನೆಯಲ್ಲಿ ತಿರಂಗಾ ಅಭಿಯಾನಡಿಯಲ್ಲಿ ವಿಭಿನ್ನ ಕಾರ್ಯಕ್ರಮವನ್ನು ವ್ಯಾಪಕವಾಗಿ ಆಯೋಜಿಸಿದ್ದೇವು. ಈ ವರ್ಷವೂ ಭಾರತೀಯ ಜನತಾ ಪಾರ್ಟಿಯ ರಾಷ್ಟಿçÃಯ ಅಧ್ಯಕ್ಷರಾದ ಶ್ರೀ ಜಗತ್ ಪ್ರಕಾಶ ನಡ್ಡಾ ಅವರ ಸೂಚನೆಯಂತೆ ಪ್ರತಿ ಮನೆ ಮೇಲೆ ರಾಷ್ಟಿçÃಯ ಧ್ವಜವನ್ನು ಹಾರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಹಾಗೂ ಆಗಸ್ಟ್ 12 ರಿಂದ 15ರ ವರೆಗೆ ಜಿಲ್ಲಾದಾದ್ಯಂತ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಯುವ ಮೋರ್ಚಾದ ಪ್ರಮುಖ ಪಾತ್ರ ಇರುತ್ತದೆ ಎಂದು ಭಾರತೀಯ ಜನತಾ ಪಾರ್ಟಿಯ ಕಲಬುರಗಿ ವಿಭಾಗೀಯ ಸಂಘಟನಾ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ಪ್ರಕಟಣೆಯಲ್ಲಿ ಈಶ್ವರಸಿಂಗ್ ಠಾಕೂರ ಅವರು ಆಗಸ್ಟ್ 13ರಿಂದ 15ರ ವರೆಗೆ ಜಿಲ್ಲಾದಾದ್ಯಂತ ಮನೆಗಳ ಮೇಲೆ ರಾಷ್ಟç ಧ್ವಜ ಹಾರಿಸುವ ಕಾರ್ಯಕ್ರಮ ಆಯೋಜಿಸಬೇಕು ಮತ್ತು ಪ್ರತಿಯೊಬ್ಬ ಕಾರ್ಯಕರ್ತನು ಭಾಗವಹಿಸಬೇಕು. ಇದಕ್ಕೆ ಪೂರಕವಾದ ಉತ್ಸವ ಮತ್ತು ದೇಶಭಕ್ತಿಯ ಭಾವನೆಯ ವಾತಾವರಣವನ್ನು ನಿರ್ಮಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ರಾಷ್ಟçಧ್ವಜ ಎಲ್ಲಾ ಅಂಚೆ ಕಚೇರಿ ಮತ್ತು ಇತರ ಮಾರಾಟ ಕೇಂದ್ರಗಳಲ್ಲಿ ಲಭ್ಯವಿದೆ. ರಾಷ್ಟçಧ್ವಜವನ್ನು ಸಾಮಾನ್ಯ ಜನರು ಕೂಡ ಖರೀದಿಸುವಂತೆ ಪಕ್ಷದ ಕಾರ್ಯಕರ್ತರು ಪ್ರೇರಿಸಬೇಕು.