ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ 169ನೇ ಜಯಂತ್ಯ್ತೋತ್ಸವ
ಬೀದರ್ ಜಿಲ್ಲಾ ಆರ್ಯ ಈಡಿಗ ಸಮಾಜ ಸಂಘ ಮತ್ತು ಬೀದರ್ ತಾಲೂಕಾ ಆರ್ಯ ಈಡಿಗ ಸಮಾಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಬ್ರಹ್ಮಶ್ರೀ ನಾರಾಯಣ ಗುರೂಜಿ ಅವರ 169ನೇ ಜಯಂತ್ಯ್ತೋತ್ಸವ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದೆನು.
ಧಾರ್ಮಿಕ ಸುಧಾರಣೆಯ ಮೂಲಕ ಅಸ್ಪೃಶ್ಯತೆ, ಅಜ್ಞಾನ, ಅಂಧಶ್ರದ್ಧೆಯ ವಿರುದ್ಧ ಸಮರ ಸಾರಿ, ಮಾದರಿ ಸಮಾಜ ನಿರ್ಮಾಣಕ್ಕಾಗಿ ಹೋರಾಡಿದವರು, ಮನುಷ್ಯರಲ್ಲಿ ಬೇಧವಿಲ್ಲ, ಎಲ್ಲರೂ ಒಂದೇ. ನಮ್ಮನ್ನೆಲ್ಲ ಕಾಪಾಡುವ ಸರ್ವೇಶ್ವರನೂ ಒಬ್ಬನೇ ಎಂದು ಪ್ರತಿಪಾದಿಸಿದ ಕ್ರಾಂತಿಕಾರಿ ಸಂತ ಬ್ರಹ್ಮಶ್ರೀ ನಾರಾಯಣ ಗುರು ಅವರ ತತ್ವಾದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕೆಂದು ಕರೆ ನೀಡಿದೆನು.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀಗಳಾದ ಡಾ. ಪ್ರಣವಾನಂದ ಸ್ವಾಮೀಜಿಗಳು ವಹಿಸಿದ್ದರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿಕೆ ಹರಿಪ್ರಸಾದ್, ಪೌರಾಡಳಿತ & ಹಜ್ ಸಚಿವರಾದ ಶ್ರೀ ರಹಿಂ ಖಾನ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಅರವಿಂದ್ ಅರಳಿ,ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ ಸೇರಿದಂತೆ ಈಡಿಗ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.