ಬೀದರ್

ಬೌದ್ಧ ಮಹಾಸಭಾದಲ್ಲಿ ಯಾವುದೇ ಬಣಗಳಿಲ್ಲ: ನಾವೆಲ್ಲ ಒಂದಾಗಿದ್ದೇವೆ: ನಿಂಬಾಳಕರ್

ಬೀದರ್: ಬೌದ್ಧ ಮಹಾಸಭೆ ಇದು ರಾಷ್ಟ್ರೀಯ ಸಂಘಟನೆಯಾಗಿದ್ದು, ಸಂವಿಧಾನ‌ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಸ್ಥಾಪಿಸಿರುವ ಸಂಸ್ಥೆ ಇದಾಗಿದೆ ಎಂದು ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಸುರ್ಯಕಾಂತ ನಿಂಬಾಳ್ಕರ್ ತಿಳಿಸಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 1954ರಲ್ಲಿ ಅಂಬೇಡ್ಕರ್ ಅವರು ಈ ಸಂಸ್ಥೆ ಹುಟ್ಡು ಹಾಕಿದ್ದು ಬೌದ್ದ ಧರ್ಮದ ತತ್ವಗಳು ಪಾಲಿಸುವ ಯಾರೆ ಅಗಿದ್ದವರು ಮಹಾಸಭಾದ ಸದಸ್ಯರಾಗಬಹುದಾಗಿದೆ. ಈಗಾಗಲೇ ದೇಶದ ಮೂಲೆ ಮೂಲೆಗಳಲ್ಲಿ ಬೌದ್ಧ ಧರ್ಮದ ಅನುಯಾಯಿಗಳನ್ನು ಪತ್ತೆ ಹಚ್ಚಿ ಸದಸ್ಯತ್ವ ಅಭಿಯಾನ ನಡೆಸಲಾಗಿದೆ ಎಂದರು.
ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಚಂದ್ರಭೋದಿ ಪಾಟೀಲ ಅವರು ರಾಜ್ಯಕ್ಕೆ ಬಂದು ಹೊದ ಬಳಿಕ ಸದಸ್ಯತ್ವ ಅಭಿಯಾನ ಚುರುಕುಗೊಳಿಸಲಾಗಿದೆ. ರಾಜ್ಯದಲ್ಲಿ ಈ ಮೋದಲು ಉತ್ತರ ಪ್ರಾಂತ ಘಟಕ ಹಾಗೂ ದಕ್ಷಿಣ ಪ್ರಾಂತ ಘಟಕಗಳೆಂದು ಪ್ರತ್ಯೇಕ ಬಣಗಳಾಗಿದ್ದವು. ಆದರೆ ಚಂದ್ರಬೋದಿ ಅವರು ಬಂದು ಹೋದ ಬಳಿಕ ಅವನ್ನು ವಿಲಿನಗೊಳಿಸಲಾಗಿದೆ. ಈಗ ಯಾವುದೇ ಬಣಗಳಿಲ್ಲ. ಒಂದೆ ವೇದಿಕೆಯಾಗಿ ಪರಿವರ್ತಿಸಲಾಗಿದೆ ಎಂದರು.
ಬೀದರ್ ನಲ್ಲೂ ಸಹ ಬಾಬುರಾವ ಅಣದೂರ ಹಾಗೂ ಮಾಣಿಕರಾವ ಎಂದು ಎರಡು ಬಣಗಳಾಗಿದ್ದವು.ಆದರೆ ಹಿರಿಯರಾದ ವೈಜಿನಾಥ ಸುರ್ಯವಂಶಿ ಅವರ ಪರಿಶ್ರಮದ ಫಲವಾಗಿ ಇಂದು ಇಲ್ಲಿಯೂ ಸಹ ಸಮಸ್ಯೆ ಬಗೆಹರಿದಿದೆ. ಹೀಗಾಗಿ ಇಡೀ ರಾಜ್ಯದಲ್ಲಿ ಈಗ ಒಂದೆ ಬೌದ್ಧ ಮಹಾಸಭೆ ಕಾರ್ಯರೂಪದಲ್ಲಿದೆ. ಈಗ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹೀಗಾಗಿ ಬೀದರ್ ನಲ್ಲೂ  ಮಹಾಸಭೆಗೆ ಒಳ್ಳೆಯ ದಿನಗಳು ಬರಲು ದೂರವಿಲ್ಲ ಎಂದವರು ತಿಳಿಸಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ ಅಂಬೇಡ್ಕರ್ ಅವರು ಭೌದ್ಧ ಮಹಾಸಭಾದ ಹಾಲಿ ಟ್ರಸ್ಟಿಗಳಾಗಿದ್ದು ಈ ಹಿಂದೆ ಅವರ ತಂದೆ ಯಶವಂತರಾಯ ಅಂಬೇಡ್ಕರ್ ಅವರು ಇದರ ಅಧ್ಯಕ್ಷರಾಗಿದ್ದರು. ಅದಾದ ನಂತರ ಮೀರಾಬಾಯಿ ಅಂಬೇಡ್ಕರ್ ಅವರು ಇದರ ಅಧ್ಯಕ್ಷರಾಗಿದ್ದಾಗ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗಿ ಅದು ಕೋರ್ಟ್ ಮೆಟ್ಟಿಲೇರಿತ್ತು. ನಂತರ 2016ರಲ್ಲಿ ಚಂದ್ರಬೋದಿ ಪಾಟೀಲ್ ಅವರು ಬೌದ್ಧ ಮಹಾಸಭಾ ಅಧ್ಯಕ್ಷರೆಂದು ಕೋರ್ಟ್ ತೀರ್ಮಾನಿಸಿತು ಎಂದು ಸೂರ್ಯಕಾಂತ ನಿಂಬಾಳ್ಕರ್ ಸ್ಪಷ್ಟಪಡಿಸಿದರು.
ಬೌದ್ಧ ಮಹಾಸಭಾ ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಘಟಕಗಳನ್ನು ಹಾಗೂ ಸಮಿತಿಗಳನ್ನು ರಚಿಸಲಾಗುತ್ತಿದ್ದು ಬೀದರ ಜಿಲ್ಲೆಯಲ್ಲೂ ಸಹ ಎಲ್ಲ ತಾಲೂಕುಗಳಲ್ಲಿ ಬೌದ್ಧ ಮಹಾಸಭಾದ ಸಮಿತಿಗಳನ್ನು ರಚಿಸಲಾಗುತ್ತಿದೆ. ಬೌದ್ಧ ಮಹಾಸಭಾದಲ್ಲಿ ಸದಸ್ಯರಾಗಲು ಎಲ್ಲ ಧರ್ಮಿಯರಿಗೂ ಇಲ್ಲಿ ಮುಕ್ತ ಅವಕಾಶವಿದೆ ಎಂದು ಅವರು ತಿಳಿಸಿದರು.
ಮಹಾಸಭಾದ ಹಿರಿಯ ಮುಖಂಡರಾದ ವೈಜನಾಥ ಸೂರ್ಯವಂಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರೇಶ ಕಾನೇಕರ್, ಜಿಲ್ಲಾಧ್ಯಕ್ಷ ಮಾಣಿಕರಾವ್ ಡೋಳೆ, ಮುಖಂಡರಾದ ಭೀಮಣ್ಣ ಬಾವಿಕಟ್ಟಿ ಸೇರಿದಂತೆ ಅನೇಕರು ಪತ್ರಿಕಾಗೋಷ್ಠಿಯಲ್ಲಿದ್ದರು.
Ghantepatrike kannada daily news Paper

Leave a Reply

error: Content is protected !!