ಬೆಳೆ ಸಮೀಕ್ಷೆ ಕಾರ್ಯವು ಅತ್ಯಂತ ಪ್ರಾಮುಖ್ಯತೆ ಹೊಂದಿದೆ : ಜಂಟಿ ಕೃಷಿ ನಿರ್ದೇಶಕ ಜಿಯಾಉಲ್ಲಾ.ಕೆ
ಬೀದರ, ಆಗಸ್ಟ್. 31 :- ರೈತ ಸಂಪರ್ಕ ಕೇಂದ್ರ ಬೀದರ (ದಕ್ಷಿಣ)ದಲ್ಲಿ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಳ್ಳುವ ಸ್ಥಳಿಯ ನಿವಾಸಿಗಳಿಗೆ ಜಂಟಿ ಕೃಷಿ ನಿರ್ದೇಶಕ ಜಿಯಾಉಲ್ಲಾ.ಕೆ ಅವರು ಗಮ್ ಬೂಟ್‌ಗಳನ್ನು ವಿತರಿಸಿದರು ಮತ್ತು ಅವರಿಗೆ ಆಕಸ್ಮಿಕವಾಗಿ ಉಂಟಾಗುವ ಅನಾಹುತಗಳಿಗೆ ಅಂಚೆ ಕಛೇರಿಯಿಂದ ಒದಗಿಸುವ ವಿಮೆ ಸೌಲಭ್ಯವನ್ನು ಎಲ್ಲರಿಗೆ ನೊಂದಣಿ ಮಾಡಿಸಿ ವಿಮಾ ಕಾರ್ಡಗಳನ್ನು ಪಡೆಯಲು ಮಾಹಿತಿ ನೀಡಲಾಯಿತು.
ಬೆಳೆ ಸಮೀಕ್ಷೆ ಕಾರ್ಯವು ಅತ್ಯಂತ ಪ್ರಾಮುಖ್ಯತೆ ಹೊಂದಿದ್ದು ರಾಜ್ಯದಲ್ಲಿ ಬೆಳೆಯುವ ಎಲ್ಲ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ನಿಖರವಾಗಿ ಲೆಕ್ಕಾಚಾರ ಮಾಡಲು ಸಹಕಾರಿಯಾಗುವುದು ಆದ್ದರಿಂದ ಒಂದೂ ತಾಕನ್ನು ಬಿಡದೆ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ಈ ಸಮೀಕ್ಷೆಯ ದತ್ತಾಂಶವು ಅತಿವೃಷ್ಟಿ, ಅನಾವೃಷ್ಟಿಯಾದಾಗ ನೀಡುವ ಪರಿಹಾರ ಧನ, ಬೆಳೆ ವಿಮೆ ಇತ್ಯರ್ಥ, ಕನಿಷ್ಠ ಬೆಂಬಲ ಬೆಲೆ, ಬೆಳೆ ಸಾಲ ಪಡೆಯುವಾಗ ಸಹಕಾರಿಯಾಗುವುದೆಂದು ಹೇಳಿದರು.
ಉಪ ಕೃಷಿ ನಿರ್ದೇಶಕ ರಾಘವೇಂದ್ರ ಎನ್ ಅವರು ಮಾತನಾಡಿ, ಪಿ.ಆರ.ಗಳಿಗೆ ಪ್ರಸ್ತುತ ಕಟಾವು ಹಂತದಲ್ಲಿರುವ ಬೆಳೆಗಳಾದ ಹೆಸರು ಮತ್ತು ಉದ್ದು ಬೆಳೆಗಳನ್ನು ಕೂಡಲೆ ಬೆಳೆ ಸಮೀಕ್ಷೆ ಮಾಡಿ ಮುಗಿಸಲು ತಿಳಿಸಿದರು. ಜಿಲ್ಲೆಯ ರೈತರು ತಾವು ಸಹ ತಮ್ಮ ಹೊಲಗಳಲ್ಲಿ ಬೆಳೆಸಿದ ಬೆಳೆಗಳನ್ನು ಪಿ.ಆರ್.ಗಳ ಸಹಾಯದಿಂದ ತಾವು ಸ್ವತಃ https://play.google.com/store/
ಚಿಟ್ಟಾ ವಾಡಿ ರೈತರಾದ ಪಾಷಾಮಿಯ್ಯ ಅವರ ಹೊಲದಲ್ಲಿ ಬೆಳೆಸಮೀಕ್ಷೆ ಮಾಡಿಸಿದರು. ಅಂಚೆ ಕಛೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ಅವರು ತಮ್ಮ ಇಲಾಖೆಯಲ್ಲಿರುವ ಸಾಮಾನ್ಯ ಜನರಿಗೆ ಲಭ್ಯವಿರುವ ವಿಮೆ ಯೋಜನೆಗಳ ಕುರಿತು ಮಾಹಿತಿ ನೀಡಿ ಎಲ್ಲರೂ ಈ ವಿಮೆಯ ಲಾಭವನ್ನು ಪಡೆಯುವಂತೆ ತಿಳಿಸಿ ಎಲ್ಲ ಪಿ.ಆರ್.ಗಳಿಗೆ ವಿಮೆ ಮಾಡಿಸಿ ಕಾರ್ಡನ್ನು ಅಂಚೆ ಅಧಿಕಾರಿ ಅಕ್ಷಯ ಕಾಮತ ಅವರಿಂದ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕ ಅನ್ಸಾರಿ ಎಂ.ಎ.ಕೆ. ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಆರ್.ಎಲ್.ಜಾಧವ, ಕೃಷಿ ಅಧಿಕಾರಿ ಶತೃಘ್ನ್ ಸಂತೋಷ ಕುಮಾರ ಪಾಟೀಲ್, ವಿಜಯಕುಮಾರ ಸಿರಂಜೆ, ಗಿರೀಶ ಸೂರ್ಯಾನ್, ಮಾಣಿಕ ಶೇರಿಕಾರ್ ಮತ್ತು ಇಲಾಖೆಯ ಇತರ ಸಿಬ್ಬಂದಿಗಳು ಮತ್ತು ರೈತರು ಉಪಸ್ಥಿತರಿದ್ದರು.