ಬೆಲೆ ಏರಿಕೆಯನ್ನು ಖಂಡಿಸಿ ಕರವೇ ಪ್ರತಿಭಟನಾ
ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಬಣ) ಬೀದರ ಜಿಲ್ಲಾ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರ ಪೆಟ್ರೋಲ್, ಡೀಜಲ್ ಮತ್ತು ಇತರೆ ಅವಶ್ಯಕ ಆಹಾರ ಧಾನ್ಯಗಳ ಬೆಲೆಯನ್ನು ಏಕಾಏಕಿಯಾಗಿ / ಧೀಡಿರನೇ ಏರಿಕೆ ಮಾಡಿ ಕರ್ನಾಟಕ ರಾಜ್ಯದ ಜನತೆಗೆ ದಿಗ್ಧಮೆ ಉಂಟು ಮಾಡಿರುತ್ತಾರೆ. ಪ್ರತಿ ಲೀಟರ್ ಪೆಟ್ರೋಲ್ ಕ್ಕೆ ರೂ. 3 ಕ್ಕಿಂತಲೂ ಹೆಚ್ಚಿಗೆ ಹಾಗೂ ಡೀಜಿಲ್ ಪ್ರತಿ ಲೀಟರಿಗೆ ರೂ. 3.50 ರಂತೆ ಹೆಚ್ಚಿಗೆ ಮಾಡಿ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಸದರಿ ಈ ತೈಲ್ ಬೆಲೆ ಹೆಚ್ಚಳದಿಂದ ಟ್ರಾನ್ಸಪೂರ್ಟ ಚಾರ್ಜ ಹೆಚ್ಚಾಗುವುದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುವ ಕೆಲಸ ಸದರಿ ಕರ್ಣಾಟಕ ಸರ್ಕಾರ ಮಾಡಿರುವುದು ಖಂಡನಿಯವಾಗಿದೆ.
ರಾಜ್ಯದ ನಿವಾಸಿಗಳು ಆಹಾರ ಧಾನ್ಯ. ಹಾಲು ತರಕಾರಿ ಇತ್ಯಾದಿ ಅವಶ್ಯಕ ಸಾಮಗ್ರಿಗಳ ಬೆಲೆ ಈಗಾಗಲೇ ಹೆಚ್ಚಾಗಿದ್ದು, ಸದರಿ ತೈಲ್ ಬೆಲೆ ಹೆಚ್ಚಳದಿಂದ ಮತ್ತೆ ಸದರಿ ಈ ಎಲ್ಲಾ ಅವಶ್ಯಕ ಸಾಮಗ್ರಿಗಳ ಬೆಲೆ ಮತ್ತೆ ಗಗನ ಕಡೆ ಮುಖಮಾಡುವುದರಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಆದಕಾರಣ ತೈಲ್ ಬೆಲೆ ಮತ್ತು ಇತ್ರೆ ಅವಶ್ಯಕ ಸಾಮಗ್ರಿಗಳ ಬೆಲೆಯನ್ನು ಕಡಿಮೆ ಮಾಡಿ ಈಗಾಗಲೇ ಬೆಲೆ ಹೆಚ್ಚಳದಿಂದ ತೊಂದರೆ ಅನುಭವಿಸುತ್ತಿರುವ ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚಾಗಿರುವ ತೈಲ್ ಬೆಲೆ ಹಾಗೂ ಜೀವಕ್ಕೆ ಅವಶ್ಯಕ ಇರುವ ಆಹಾರ ಧಾನ್ಯಗಳ ಬೆಲೆಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಪೀಟರ್ ಚೀಟಗುಪ್ಪಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಸುನೀತಾ ಸಿ.ಬಿ. ಮರಕಲ್, ಜಿಲ್ಲಾ ಗೌರವ ಅಧ್ಯಕ್ಷರಾದ ಸೈಯದ್ ನವಾಜ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಜಗನಾಥ್ ಕೌಠ. ಬಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಬಗದಲಕರ್, ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷರಾದ ನಾಗೇಶ್ ರಾಯಣೋರ, ಮೊಸಿನ್ ಪಟೇಲ್, ಪ್ರದೀಪ್ ಕೋಟೆ, ಪಿಂಟೂ ಸಿರ್ಸಿ, ವಿಜಯ್ ಕುಮಾರ್, ಸೈಮನ್ ಮೇತ್ರೆ, ನೀಲೇಶ್ ರಾಥೋಡ್, ಶಿವು ಮಡಿವಾಳ, ಯೋಹಾನ್ ಮೀಸೆ, ಆಗಸ್ಟಿನ್ ಮೇತ್ರೆ, ಚಂದ್ರಕಾAತ್ ಪೋಳ, ಜಾಫರ್ ಮಿಯ್ಯ, ಮೋಜೆಸ ಅಣದುರೆ, ಅಂಬರೀಶ್ ಜುಲ್ಫಿನೋರ್, ಪ್ರಸಾದ್ ಘೋಡಂಪಳ್ಳಿಕರ್, ಶಿವು ಮೇತ್ರೆ ಇದ್ದರು.