‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ- 2023’ಯಲ್ಲಿ ಆಯ್ಕೆಯಾದ ಪಟ್ಟಿ
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಾದಂಬರಿ ಪುರಸ್ಕಾರ 2023′ ರ ಅಂತಿಮ ಸುತ್ತನ್ನು ಪ್ರವೇಶಿಸಿದ 5 ಅತ್ಯುತ್ತಮ ಕಾದಂಬರಿಗಳ ಪಟ್ಟಿ ಹಾಗೂ ಕನ್ನಡ ಕಥಾಲೋಕ ಕುತೂಹಲದಿಂದ ಕಾಯುತ್ತಿದ್ದ ‘ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ- 2023’ಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ 25 ಕಥೆಗಾರರ ಪಟ್ಟಿ ಪ್ರಕಟವಾಗಿದೆ.
ಅಂತಿಮ ಸುತ್ತಿನಲ್ಲಿರುವ ಕಾದಂಬರಿಗಳು:
ಡಾ.ಎಚ್.ಎಸ್. ಅನುಪಮಾ ಅವರ ‘ಬೆಳಗಿನೊಳಗು ಮಹಾದೇವಿಯಕ್ಕ’ (ಲಡಾಯಿ ಪ್ರಕಾಶನ)
ಉಷಾ ನರಸಿಂಹನ್ ಅವರ ‘ಕೆಂಡದ ರೊಟ್ಟಿ’ (ಅಂಕಿತ ಪುಸ್ತಕ)
ಕಾ.ತ. ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ (ರಶ್ಮಿ ಪುಸ್ತಕ)
ಪೂರ್ಣಿಮಾ ಮಾಳಗಿಮನಿ ಅವರ ‘ಅಗಮ್ಯ’ (ಸಪ್ನ ಬುಕ್ ಹೌಸ್)
ಎಂ.ಆರ್. ದತ್ತಾತ್ರಿ ಅವರ ‘ಒಂದೊಂದು ತಲೆಗೂ ಒಂದೊಂದು ಬೆಲೆ’ (ಅಂಕಿತ ಪುಸ್ತಕ)
ಈ ಐದು ಕಾದಂಬರಿಗಳಲ್ಲಿ ಒಂದು ಅತ್ಯುತ್ತಮ ಕಾದಂಬರಿಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುತ್ತಿದೆ. ಈ ಒಂದು ಲಕ್ಷದಲ್ಲಿ 75 ಸಾವಿರ ರೂ. ಲೇಖಕರಿಗೆ ಹಾಗೂ 25 ಸಾವಿರ ರೂ. ಪ್ರಕಾಶಕರಿಗೆ ವಿತರಿಸಲಾಗುತ್ತಿದೆ. ಮೆಚ್ಚುಗೆ ಪಡೆಯುವ ನಾಲ್ಕು ಕಾದಂಬರಿಗಳಿಗೆ ತಲಾ 5 ಸಾವಿರ ರೂ. ಬಹುಮಾನ ನೀಡಲಾಗುತ್ತಿದ್ದು, ಈ ಪೈಕಿ 3 ಸಾವಿರ ರೂ. ಲೇಖಕರಿಗೆ ಹಾಗೂ 2 ಸಾವಿರ ರೂ. ಪ್ರಕಾಶಕರಿಗೆ ನೀಡಲಾಗುತ್ತದೆ.
ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ- 2023’ರ ಅಂತಿಮ ಸುತ್ತಿನಲ್ಲಿರುವ 25 ಕಥೆಗಾರರು:
ದೀಪ್ತಿ ಭದ್ರಾವತಿ
ಜಯರಾಮಚಾರಿ
ಮಾಧವಿ ಭಂಡಾರಿ ಕೆರೆಕೋಣ
ಪ್ರವೀಣ್ ಕುಮಾರ್ ಜಿ.
ಲಕ್ಷ್ಮಣ ಬಾದಾಮಿ
ಸ್ಮಿತಾ ಅಮೃತರಾಜ್. ಸಂಪಾಜೆ
ಗಿರೀಶ್ ಎಂ.ಬಿ
ಇಂದ್ರಕುಮಾರ್ ಎಚ್.ಬಿ
ಕವಿತ ಹೆಗಡೆ ಅಭಯಂ
ಮಂಜುನಾಥ್ ಚಾಂದ್
ಸಂದೀಪ ನಾಯಕ
ಪೂರ್ಣಿಮಾ ಭಟ್ಟ ಸಣ್ಣಕೇರಿ
ಶರತ್ ಭಟ್ ಸೇರಾಜೆ
ಸುರೇಶ ರುದ್ರಪ್ಪ ಮುದ್ದಾರ
ಮಂಜುನಾಥ ನಾಯ್ಕ್
ಶಿವಾಗ್
ಮಹಾದೇವ ಹಡಪದ ಸಾಲಾಪೂರ
ವಿಜಯಶ್ರೀ ಎಂ. ಹಾಲಾಡಿ
ಪೂರ್ಣಿಮಾ ಮಾಳಗಿಮನಿ
ಸದಾಶಿವ್ ಸೊರಟೂರು
ಕರುಣಾಕರ ಹಬ್ಬುಮನೆ
ಎನ್.ಸಿ. ಮಹೇಶ್
ಜೆ.ಆರ್. ರವಿಕುಮಾರ್ ಜನಿವಾರ
ಅಕ್ಷಯ ಪಂಡಿತ್, ಸಾಗರ
ವಿಕಾಸ್ ನೇಗಿಲೋಣಿ
ಈ ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಕಥೆಗೆ 50 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ದ್ವೀತಿಯ ಸ್ಥಾನ ಪಡೆಯುವ ಕಥೆಗೆ 25 ಸಾವಿರ ರೂಪಾಯಿ, ತೃತೀಯ ಸ್ಥಾನಕ್ಕೆ 15 ಸಾವಿರ ರೂಪಾಯಿ ನಗದು ಬಹುಮಾನ ಇರಲಿದೆ. ಉಳಿದಂತೆ ಐದು ಕಥೆಗಳಿಗೆ ತಲಾ 5 ಸಾವಿರ ನಗದನ್ನು ಒಳಗೊಂಡ ಸಮಾಧಾನಕರ ಬಹುಮಾನ ಹಾಗೂ ಅಂತಿಮ ಸುತ್ತಿಗೆ ಆಯ್ಕೆಯಾಗುವ ಉಳಿದ17 ಕಥೆಗಳಿಗೆ ತಲಾ ಎರಡು ಸಾವಿರ ರೂಪಾಯಿ ನೀಡಲಾಗುತ್ತದೆ. ಆಯ್ಕೆಯಾದ ಈ 25 ಕಥೆಗಳನ್ನು ಒಳಗೊಂಡ ಪುಸ್ತಕ ಪ್ರಕಟಿಸಲಾಗುತ್ತದೆ.
ಆಗಸ್ಟ್ 15, 2023 ರಂದು ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆಯಲಿರುವ ಪ್ರಶಸ್ತಿ ವಿತರಣಾ ಸಮಾರಂಭದ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರನ್ನು ಪ್ರಕಟಿಸಲಾಗುತ್ತದೆ.