ಬೀದರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಉಳಿಸಬೇಕೆಂದು ಆಗ್ರಹ
ರಾಜ್ಯದಲ್ಲಿ ಸಹಕಾರ ಸಕ್ಕರೆ ಕಾರ್ಖಾನೆಗೆ ಉತ್ತಮ ಹೆಸರಾದ ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಸ್ಥಿತಿ ಇಂದು ರಾಜಕೀಯ ಕಲ್ಮಷದಿಂದಾಗಿ ಜಿಲ್ಲೆಯ ಜನರಿಗೆ ನೆನಪು ಕೂಡ ಬಾರದೇ ಇರುವಂತಹದು ಆಗಿರುವುದು ಇತ್ತೀಚಿನ ಕಾರ್ಖಾನೆಯ ಅಧ್ಯಕ್ಷರುಗಳ ದುರಾಡಳಿತದಿಂದ ಎಂದು ಕಾಣಬಹುದಾಗಿದೆ. ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಬಹುಮತ ಸರ್ಕಾರ ಬಂದಿರುವುದು ಬೀದರ ಜನತೆಗೆ ಒಂದು ವರವಾಗಿದೆ. ಬೀದರ ಜಿಲ್ಲೆಗೆ ರಾಜ್ಯ ಸರ್ಕಾರ ಅನುಭವಿ ಮತ್ತು ಅಭಿವೃದ್ಧಿ ವಿಚಾರವುಳ್ಳವರನ್ನು ಜಿಲ್ಲಾ ಉಸ್ತುವಾರಿಯನ್ನಾಗಿ ಈಶ್ವರ ಬಿ. ಖಂಡ್ರೆಯವರಿಗೆ ನೀಡಿದ್ದು ಒಂದು ಅಭಿವೃದ್ಧಿ-ವಿಶ್ವಾಸದ ಸಂಕೇತವಾಗಿದೆ. ಮಾನ್ಯರು ಬೀದರ ಸಹಕಾರ ಸಕ್ಕರೆ ಕಾರ್ಖಾನೆಯ ಪರಿಸ್ಥಿತಿಯನ್ನು ಅರಿತವರು ಮತ್ತು ತಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಆಡಳಿತ ನಿರ್ವಹಿಸಿದವರಾಗಿರುತ್ತಾರೆ. ಕಾರ್ಖಾನೆಯ ಮತ್ತು ಅಲ್ಲಿನ ಕಾರ್ಮಿಕರ ಪರಿಸ್ಥತಿ ಸದರಿ ಕಾರ್ಖಾನೆಯನ್ನೇ ನಂಬಿಕೊAಡು ಬದುಕುವವರ ಪರಿಸ್ಥಿತಿ ಇಂದು ಕಣ್ಣು ಮುಂದೆ ಮಣ್ಣು ಪಾಲಾಗುವುದು ಚಿಂತಾಜನಕವಾಗಿದೆ.
ಈಶ್ವರ ಬಿ. ಖಂಡ್ರೆ ರವರು ಉತ್ತಮ ಕ್ರಿಯಾಶೀಲರಾಗಿರುವುದು ಕಾರ್ಖಾನೆಯ ನೊಂದ 10 ಸಾವಿರ ರೈತ ಮತ್ತು ಕಾರ್ಮಿಕರಿಗೆ ರಾಮಬಾಣವಾಗಿ ಕಾರ್ಖಾನೆಗೆ ಮರುಜೀವ ನೀಡಿ, ಕಾರ್ಖಾನೆಯನ್ನು ಮುಂದುವರೆಸಬೇಕೆAದು ನಮ್ಮ ಒತ್ತಾಯ ಮತ್ತು ಆಗ್ರಹವಾಗಿದೆ. ಅಲ್ಲದೇ ಕಾರ್ಖಾನೆಗೆ ಮರುಜೀವ ನೀಡಬೇಕು ಮತ್ತು ಸದರಿ ಕಾರ್ಖಾನೆ ಕಾರ್ಮಿಕ ಸಿಬ್ಬಂದಿಗಳ 03 ವರ್ಷಗಳ ವೇತನ, ಪಿ.ಎಫ್. ಗ್ರಾö್ಯಚೂಟಿ, ಇನ್ಸುರೇನ್ಸ್ ಹಾಗೂ ಇನ್ನಿತರ ಕಾರ್ಖಾನೆಯ ಮೂಲಭೂತ ಸೌಕರ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಡಳಿತ ಆಗಸ್ಟ್ 10 ರೊಳಗಾಗಿ ಗಂಭೀರವಾಗಿ ಪರಿಗಣಿಸಿ, ಕಾರ್ಖಾನೆಗೆ ಮರುಜೀವ ನೀಡಿ ಮುಂದುವರೆಸಬೇಕು. ಇಲ್ಲವಾದ ಪಕ್ಷದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು ಬೀದರ ರವರ ಕಾರ್ಯಾಲಯದ ಎದುರುಗಡೆ ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆ ವತಿಯಿಂದ ಅಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಈ ಸತ್ಯಾಗ್ರಹದಲ್ಲಿ ಜಿಲ್ಲೆಯ ಪ್ರಗತಿ ಪರ ಚಿಂತಕರು, ರೈತ ಹೋರಾಟಗಾರರು, ಕನ್ನಡ ಪರ, ದಲಿತ ಪರ ಹಾಗೂ ಕಾರ್ಖಾನೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಬುದ್ಧಿಜೀವಿಗಳು ಹಾಗೂ ಜಿಲ್ಲೆಯ ಹಲವು ಮುಖಂಡರನ್ನು ಮನವಲಿಸಿ ಕಾರ್ಖಾನೆ ಉಳುವಿಗಾಗಿ ಹೋರಾಟ ಮಾಡಲಾಗುವುದೆಂದು ಇಂದು ನಗರದ ಮಯೂರಾ ಬರಿದ ಶಾಹಿ ಸಭಾಂಗಣದಲ್ಲಿ ಕಲ್ಯಾಣ-ಕರ್ನಾಟಕ ನಿರ್ಮಾನ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಸ್ವಾಮಿದಾಸ ಕಂಪೆನೋರ್ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಗಮೇಶ ಏಣಕೂರ್, ತುಕಾರಾಮ ರಾಗಾಪೂರೆ, ಸುರೇಶ ದೊಡ್ಡಿ, ಶಿವರಾಜ ಹಮೀಲಾಪೂರ್, ನವೀನ ಅಲ್ಲಾಪುರೆ, ಸುಶೀಲ್ ಕೆಂಪೆನೋರ್, ಸುಧಾಕರ್ ಬೆನಕನಳ್ಳಿ ಇದ್ದರು.