ಬೀದರ್

ಬೀದರ ನಿಂದ ತಿರುಪತಿಗೆ ವಿಮಾನಯಾನ ಸೇವೆ 24ನೇ ಅಗಸ್ಟ್, ಪ್ರಾರಂಭ : ಕೇಂದ್ರ ಸಚಿವ ಭಗವಂತ ಖೂಬಾ

ನನ್ನ ಸತತ ಪ್ರಯತ್ನದಿಂದ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಬೀದರ ನಿಂದ ತಿರುಪತಿಗೆ ವಿಮಾನಯಾನ ಸೇವೆ ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದೇನೆ, ಇದರಿಂದ ಬೀದರ ಲೋಸಕಭಾ ಕ್ಷೇತ್ರದ ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಹೆಚ್ಚಿನ ಸವಲತ್ತು ಆಗಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಈ ವಿಮಾನವು ಬೀದರ ನಿಂದ ಬೆಂಗಳುರು ಪ್ರಯಾಣಿಸುವ ವಿಮಾನವನ್ನು ತಿರುಪತಿವರೆಗೆ ವಿಸ್ತರಿಸಿ, ನಮ್ಮಲ್ಲಿಯ ಜನರಿಗೆ ಅನುಕೂಲ ಮಾಡಿಕೊಡುವಂತೆ ನಾಗರಿಕ ವಿಮಾನಯಾನ ಸಚಿವಾಲಕ್ಕೆ ಮನವಿ ಮಾಡಿಕೊಂಡಿದ್ದೆ, ಅದರಂತೆ ನನ್ನ ಮನವಿಯನ್ವಯ ತಿರುಪತಿವರೆಗೆ ವಾರದ ಐದು ದಿನಗಳು ತಿರುಪತಿಗೆ ಚಲಿಸಲಿದೆ. ಈ ವಿಮಾನಯಾನ ಸೇವೆ ಸೊಮುವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ರವಿವಾರಗಳಂದು ಇರಲಿದೆ.

ಸೊಮುವಾರ ಮತ್ತು ಶುಕ್ರವಾರದಂದು 2 ದಿನಗಳು, ಬೀದರನಿಂದ ಸಾಯಂಕಾಲ 05.30ಕ್ಕೆ ಹೊರಟು ಬೆಂಗಳೂರಿಗೆ ಸಾ. 6.45ಕ್ಕೆ ತಲುಪಿ, ಅಲ್ಲಿಂದ ರಾ. 7.10ಕ್ಕೆ ಬಿಟ್ಟು ರಾತ್ರಿ. 8.00 ಗಂಟೆಗೆ ತಿರುಪತಿ ತಲುಪುತ್ತದೆ. ನಂತರ ಅದೇ ದಿನ ರಾತ್ರಿ 8.25ಕ್ಕೆ ತಿರುಪತಿಯಿಂದ ಹೊರಟು ರಾತ್ರಿ 09.15ಕ್ಕೆ ಬೆಂಗಳೂರಿಗೆ ತಲುಪಲಿದೆ, ರಾತ್ರಿ ಬೆಂಗಳೂರಿನಲ್ಲಿಯೆ ವಿಮಾನ ಇರಲಿದೆ, ಮರುದಿನ ಮತ್ತೆ ಮಧ್ಯಾಹ್ನ ಎಂದಿನಂತೆ ಬೆಂಗಳೂರಿನಿಂದ ಬೀದರಗೆ ವಿಮಾನ ಬರಲಿದೆ.

ಉಳಿದ ಮೂರು ದಿನಗಳಾದ ಗುರುವಾರ, ಶನಿವಾರ ಮತ್ತು ರವಿವಾರ ಬೀದರನಿಂದ ಸಾ. 4.50ಕ್ಕೆ ಬೀದರನಿಂದ ಹೊರಟು, ಬೆಂಗಳೂರಿಗೆ ಸಾ. 6.05ಕ್ಕೆ ತಲುಪಿ, ಸಾ. 6.30ಕ್ಕೆ ಬೆಂಗಳೂರಿನಿಂದ ಹೊರಟು ತಿರುಪತಿಗೆ ರಾ. 7.20ಕ್ಕೆ ತಲುಪಲಿದೆ, ತಿರುಪತಿಯಿಂದ ಮತ್ತೆ ರಾ. 7.45ಕ್ಕೆ ಹೊರಟು ಬೆಂಗಳೂರಿಗೆ ರಾ. 8.35ಕ್ಕೆ ತಲುಪಲಿದೆ. ಮರುದಿನ ಮಧ್ಯಾಹ್ನ ಎಂದಿನಂತೆ ಬೆಂಗಳೂರಿನಿಂದ ಬೀದರಗೆ ವಿಮಾನ ಬರಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಮಾಹಿತಿ ನೀಡಿದ್ದಾರೆ.

ಕ್ಷೇತ್ರದ ಬಹುದಿನಗಳ ಕನಸಾಗಿದ್ದ ಬೀದರ ವಿಮಾನಯಾನದ ಸೇವೆಗೆ ನಾನು ಸಂಸದನಾದ ಮೇಲೆ ನಿರಂತರವಾಗಿ 6 ವರ್ಷಗಳ ಕಾಲ ಪರಿಶ್ರಮ ಪಟ್ಟು, ಬೀದರನಿಂದ ವಿಮಾನಯಾನ ಸೇವೆ ಪ್ರಾರಂಭಿಸುವಲ್ಲಿ ಇದ್ದ ಹಲವಾರು ಅಡೆತಡೆಗಳು ನಿವಾರಿಸಿಕೊಂಡು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಎಲ್ಲಾ ರೀತಿಯ ಸಮನ್ವಯ ಸಾಧಿಸಿ ವಿಮಾನಯಾನ ಸೇವೆ ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದೇನೆ, ಇದಕ್ಕೆಲ್ಲಾ ಜನತೆಯ ಆಶೀರ್ವಾದ ಹಾಗೂ ನಮ್ಮ ಪ್ರಧಾನಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಮಾರ್ಗದರ್ಶನ ಕಾರಣವೆಂದು ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ರೂ. 25 ಕೋಟಿ ಅನುದಾನದಲ್ಲಿ ಬೀದರ ರೈಲ್ವೆ ನಿಲ್ದಾಣದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು ಮತ್ತು ವಿಕಾರಾಬಾದ ಪರಳಿ ವಾಯಾ ಬೀದರ ಮಾರ್ಗಕ್ಕೆ 267 ಕಿಮೀ ಪೈನಲ್ ಲೋಕೇಷನ್ ಸರ್ವೆ ಮಾಡಲು ಆದೇಶಿಲಾಗಿದೆ, ಇದು ಸಹ ಮಂಜೂರಾತಿಯಾಗಲಿದೆ. ಬೀದರ ಲೋಕಸಭಾ ಕ್ಷೇತ್ರಕ್ಕೆ ನಾನು ಸಂಸದನಾದ ಐತಿಹಾಸಿಕ ಅಭಿವೃದ್ದಿ ಕೆಲಸಗಳು ಕೈಗೊಂಡಿರುವೆ, ಜನತೆ ಈ ಎಲ್ಲಾ ಅಭಿವೃದ್ದಿ ಕಾರ್ಯಗಳ ಅನುಕೂಲತೆ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬೀದರ ನಿಂದ ತಿರುಪತಿಗೆ ವಿಮಾನಯಾನದ ಸೇವೆ ಬರುವ 24ನೇ ಅಗಸ್ಟ್, ಗುರುವಾರದಿಂದ ಪ್ರಾರಂಭವಾಗಲಿದೆ, ಬೀದರ ಲೋಕಸಭಾ ಕ್ಷೇತ್ರದ ಜನತೆಯೂ ಈ ವಿಮಾನಯಾನದ ಸೇವೆಯನ್ನು ಪಡೆದುಕೊಳ್ಳಬೇಕೆಂದು ಜನತೆಯಲ್ಲಿ ವಿನಂತಿಸಿಕೊಂಡು, ಸಮಸ್ತ ಜನತೆಯ ವತಿಯಿಂದ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರಿಗೆ, ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾಧಿತ್ಯಾ ಸಿಂಧಿಯಾ ಹಾಗೂ ಎಲ್ಲಾ ಅಧಿಕಾರಿಗಳಿಗೆ ಕೇಂದ್ರ ಸಚಿವ ಭಗವಂತ ಖೂಬಾ ಧನ್ಯವಾದಗಳು ತಿಳಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!