ಬೀದರ್

ಬೀದರ-ನಾಂದೇಡ ರೈಲ್ವೆ ಲೈನ್ ಪ್ರಾರಂಭಕ್ಕೆ ಮನವಿ: ಭಗವಂತ ಖೂಬಾ

ನವದೇಹಲಿಯಲ್ಲಿ ರೈಲ್ವೆ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವರವರಿಗೆ, ಮಾಜಿ ಕೇಂದ್ರ ಮಂತ್ರಿ ಭಗವಂತ ಖೂಬಾ ಭೇಟಿಯಾಗಿ, ಶುಭಕೋರಿ, ನನ್ನ ಪ್ರಯತ್ನದಿಂದ ಬೀದರ- ನಾಂದೇಡ ವಾಯಾ ಔರಾದ, ದೇಗಲೂರ ಹೊಸ ರೈಲ್ವೆ ಲೈನ್ ಮಂಜೂರಾಗಿ, ಪಿಂಕ್ ಬುಕ್ ನಲ್ಲಿ ಸೇರ್ಪಡೆಗೊಂಡು, ರೈಲ್ವೆ ಇಲಾಖೆಯಿಂದ ಈ ಯೋಜನೆಗೆ 150 ಕೋಟಿ ರೂಪಾಯಿ ಮಿಸಲಿಟ್ಟು, ಸರ್ವೇ ಕೆಲಸ ಮುಗಿಸಿದೆ.

ಜೊತೆಗೆ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ 2023ರ ಫೆಬ್ರುವರಿಯಲ್ಲಿ ಮಂಡಿಸಿದ್ದ ಬಜೇಟನಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಈ ಯೋಜನೆಗೆ ಅನುದಾನ ಮಿಸಲಿಟ್ಟಿದ್ದರು, ಆದರೆ ನಂತರ ಬಂದ ಸಿದ್ದರಾಮಯ್ಯನವರ ಸರ್ಕಾರ ಈ ಅನುದಾನವನ್ನು ರದ್ದುಗೊಳಿಸಿತ್ತು, ನಾನೊಬ್ಬ ಕೇಂದ್ರ ಸಚಿವನಾಗಿ, ಕ್ಷೇತ್ರದ ಸಂಸದನಾಗಿ ಕಳೆದ 14 ತಿಂಗಳಲ್ಲಿ ಅನೇಕ ಬಾರಿ ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ಭೇಟಿಯಾಗಿ ಸದರಿ ಯೋಜನೆಗೆ ಅನುದಾನ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೂ ಮನವಿ ಮಾಡಿಕೊಂಡಿರುವೆ ಆದರೆ ಯಾರೋಬ್ಬರು ಸ್ಪಂದಿಸಿರುವುದಿಲ್ಲಾ. ಕಾಂಗ್ರೇಸ್ ಸರ್ಕಾರಕ್ಕೆ ಈ ಯೋಜನೆ ಬಗ್ಗೆ ಕಾಳಜಿ ಇಲ್ಲದೆ ಇರುವುದು ಏತ್ತಿ ತೊರಿಸುತ್ತಿದೆ.

ಆದ್ದರಿಂದ ತಾವುಗಳು ವಿಶೇಷ ಮುತುವರ್ಜಿವಹಿಸಿ, ಕರ್ನಾಟಕ ಸರ್ಕಾರದಿಂದ ಅಗತ್ಯ ಸಹಕಾರ ಪಡೆದು ನಮ್ಮ ಭಾಗದ ಅಭಿವೃದ್ದಿಗೆ ಒತ್ತು ನೀಡುವ ಈ ಹೊಸ ರೈಲ್ವೆ ಲೈನ್ ಕಾಮಗಾರಿ ಪ್ರಾರಂಭಿಸಬೇಕೆಂದು ರೈಲ್ವೆ ಸಚಿವರಲ್ಲಿ ಭಗವಂತ ಖೂಬಾ ಮನವಿ ಮಾಡಿಕೊಂಡಿದ್ದಾರೆ.

ಕಾಂಗ್ರೇಸ್‍ನವರಿಂದ ಒಂದು ರೈಲಿನ ಸಮಯ ಬದಲಾಯಿಸಲು ಆಗಿರಲಿಲ್ಲಾ:

ಒಂದು ಕಾಲದಲ್ಲ್ಲಿ ಕಾಂಗ್ರೇಸ್‍ನವರಿಗೆ ಬೀದರನಿಂದ ಹೊರಡುವ ಒಂದು ರೈಲಿನ ಸಮಯ ಬದಲಾಯಿಸಲು ಆಗಿರಲಿಲ್ಲಾ, ಇಂತಹ ದಿನಗಳು ಸಹ ನಮ್ಮ ಜನರು ನೋಡಿದ್ದಾರೆ, ಆದರೆ ಕಳೆದ 10 ವರ್ಷಗಳಲ್ಲಿ ನನ್ನ ಮನವಿಗೆ ಸ್ಪಂದಿಸಿದ್ದಿರಿ, ತಮ್ಮ ಸಹಕಾರದಿಂದ ಬೀದರ ಕ್ಷೇತ್ರದ ರೈಲ್ವೆ ಉತ್ತಮ ಅಭಿವೃದ್ದಿ ಕಂಡಿದೆ, ಬೀದರ-ಕಲಬುರಗಿ ರೈಲ್ವೆ ಲೈನ್ ಪೂರ್ಣಗೊಂಡಿದೆ, ಹೊಸ ರೈಲುಗಳು ಬಂದಿವೆ, ಬೀದರ ರೈಲ್ವೆ ನಿಲ್ದಾಣದ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ, ಹತ್ತಾರು ಹೊಸ ರೈಲುಗಳು, 24 ಗಂಟೆಯೊಳಗೆ ವಿಶೇಷ ರೈಲುಗಳು ನೀಡಿದ್ದಿರಿ, ತಮ್ಮ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ ತಮಗೆ ಧನ್ಯವಾದಗಳು ತಿಳಿಸಿದ್ದಾರೆ.

ಅಧಿಕಾರ ಯಾರದೆ ಕೈಯಲ್ಲಿ ಇರಲಿ, ನಮ್ಮ ಬೀದರ ಕ್ಷೇತ್ರದ ಅಭಿವೃದ್ದಿಗೆ ತಮ್ಮ ಸಹಕಾರ ಅಗತ್ಯವಾಗಿದೆ, ಬೀದರ ನಿಂದ ಹುಬ್ಬಳ್ಳಿ, ಬೆಳಗಾವಿ ಹಾಗೂ ಬೆಂಗಳೂರಿಗೆ ಹೊಸ ರೈಲುಗಳು ನೀಡಬೇಕೆಂದು ಈ ಹಿಂದೆ ಮನವಿ ಮಾಡಿದ್ದೆ, ಆದ್ದರಿಂದ ಮುಂದಿನ ದಿನಗಳಲ್ಲಿ ನನ್ನ ಈ ಮನವಿಗಳು ತಾವು ಪೂರೈಸಬೇಕು ಹಾಗೂ ನಮ್ಮ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಮಾಜಿ ಸಚಿವ ಖೂಬಾ ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.

ತಮ್ಮ ಮನವಿಗೆ ಸ್ಪಂದಿಸಿ, ಜನರ ಅನುಕೂಲಕ್ಕಾಗಿ, ದೇಶದ ಸರ್ವತೊಮುಖ ಅಭಿವೃದ್ದಿಯನ್ನು ಗಮನದಲ್ಲಿಟ್ಟುಕೊಂಡು ಬೀದರ ರೈಲ್ವೆಗೆ ಕಳೆದ 10 ವರ್ಷಗಳಲ್ಲಿ ಹೊಸ ಸ್ಪರ್ಷ ನೀಡಿದ್ದೇನೆ ಮುಂದೆಯೂ ತಮ್ಮ ಎಲ್ಲಾ ಬೇಡಿಕೆಗಳಿಗೆ ನಮ್ಮ ರೈಲ್ವೆ ಇಲಾಖೆಯಿಂದ ವಿಶೇಷ ಒತ್ತು ನೀಡಿ ಮಾಡಿಕೊಡುವುದಾಗಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವರವರು ಭಗವಂತ ಖೂಬಾರವರಿಗೆ ಅಭಯ ನೀಡಿದ್ದಾರೆ.

ಗ್ಯಾರಂಟಿ ಲೂಟಿ, ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳಕ್ಕೆ ಖಂಡನೆ

ಕಾಂಗ್ರೇಸ್ ಸರ್ಕಾರದ ಇನ್ನೊಂದು ಮುಖ ಕಳಚಿ ಬಿದ್ದಿದೆ, ಗ್ಯಾರಂಟಿ ಹೆಸರಲ್ಲಿ ಒಂದು ಕಡೆಯಿಂದ ಕೊಟ್ಟು ಇನ್ನೊಂದು ಕಡೆಯಿಂದ ಕಿತ್ತುಕೊಳ್ಳುವ ಕೆಲಸ ಮಾಡುತ್ತಿರುವ ಸರ್ಕಾರದ ಕ್ರಮ ಖಂಡನೀಯ, ಈ ತೆರಿಗೆ ಹೆಚ್ಚಳದಿಂದ ಕಾಂಗ್ರೇಸ್ ಸರ್ಕಾರ ಲೂಟಿ ಸರ್ಕಾರ ಎಂಬುದು ಸಾಬಿತು ಪಡಿಸುತ್ತಿದೆ, ಗ್ಯಾರಂಟಿ ಹೆಸರಲ್ಲಿ ಒಂದು ರೀತಿ ಲೂಟಿ, ತೆರಿಗೆ ಹೆಚ್ಚಳದಿಂದ ಮತ್ತೊಂದು ರೀತಿ ಲೂಟಿ, ಒಟ್ಟಿನಲ್ಲಿ ಸರ್ಕಾರದಿಂದ ಜನರ ದುಡ್ಡು ಗ್ಯಾರಂಟಿ ಲೂಟಿಯಾಗುತ್ತಿದೆ, ಕೂಡಲೆ ತೆರಿಗೆ ಹೆಚ್ಚಳ ಆದೇಶ ವಾಪಸ್ಸು ಪಡೆದುಕೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಮೇಲಿನ ಈ ಎಲ್ಲಾ ವಿಷಯಗಳು ತಮ್ಮೇಲ್ಲರ ಗಮನಕ್ಕೆ ತರಲು ಮಾನ್ಯ ಮಾಜಿ ಕೇಂದ್ರ ಸಚಿವರಿಂದ ನಿರ್ದೇಶಿಸಲ್ಪಟ್ಟಿರುತ್ತೇನೆ.

Ghantepatrike kannada daily news Paper

Leave a Reply

error: Content is protected !!