ಬೀದರ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂಧಿಸಲು ಕೃಷಿ ಸಚಿವರಿಗೆ ಮನವಿ
ಬೀದರ ಜಿಲ್ಲೆಯ ಬಹುಸಂಖ್ಯಾತ ರೈತರು ಮಳೆಯಾಶ್ರಿತ ಜಮೀನಿನ ಮೇಲೆ ಅವಲಂಬಿತರಿದ್ದು, ಸತತವಾಗಿ 3-4 ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಸರಿಯಾಗಿ ಬೆಳೆ ಇಲ್ಲದೇ ಪರದಾಡುತ್ತಿದ್ದಾರೆ. ಆದಕಾರಣ ಸರಕಾರದ ವತಿಯಿಂದ ಈ ಕೆಳಕಂಡ ಸಮಸ್ಯೆಗಳು ಶೀಘ್ರದಲ್ಲಿ ಬಗೆಹರಿಸಿ, ಇಲ್ಲಿನ ರೈತರಿಗೆ ಆರ್ಥಿಕ ಮಟ್ಟದಲ್ಲಿ ಸದೃಢವಾಗಲು ಸಹಾಯ ಮಾಡಬೇಕು.
2023-24ನೇ ಸಾಲಿನಲ್ಲಿ ಬೆಳೆ ವಿಮೆ ಕಟ್ಟಿರುವ ರೈತರಿಗೆ ಬೆಳೆ ಹಾನಿಯಾದರೂ ಕೂಡ ಬಹುಸಂಖ್ಯಾತ ರೈತರಿಗೆ ಇನ್ನು ಬೆಳೆ ವಿಮೆ ಪರಿಹಾರ ಸಿಕ್ಕಿಲ್ಲ. ಆದಕಾರಣ ಬೆಳೆ ವಿಮೆ ಪರಿಹಾರ ಸಿಗದಿರುವ ರೈತರಿಗೆ ಶೀಘ್ರದಲ್ಲಿ ಕೊಡಿಸಬೇಕು. ಹನಿ ನೀರಾವರಿ ಯೋಜನೆಯಲ್ಲಿ ಪ್ರತಿಯೊಬ್ಬ ರೈತರಿಗೆ ಬರೀ 2 ಹೇ. ವರೆಗೆ ಸೌಲಭ್ಯ ಕೊಡುವುದನ್ನು ಕೈಬಿಟ್ಟು, ಕನಿಷ್ಠ ಒಬ್ಬ ರೈತನಿಗೆ 4 ಹೇ. ವರೆಗೆ ವಿಸ್ತರಣೆ ಮಾಡಬೇಕು ಮತ್ತು ಈ ಯೋಜನೆಯಲ್ಲಿ ಎಸ್.ಸಿ., ಎಸ್.ಟಿ. ರೈತರಿಗೆ 90% ರಿಯಾಯ್ತಿ ಕೊಡುತ್ತಿದ್ದು, ಸಾಮಾನ್ಯ ರೈತನಿಗೆ 45% ರಿಯಾಯ್ತಿ ಕೊಡುತ್ತಿದ್ದೀರಿ. ಇದು ರೈತರಲ್ಲಿ ಮಾಡುತ್ತಿರುವ ತಾರತಮ್ಯ. ಆದಕಾರಣ ಸಾಮಾನ್ಯ ರೈತರನಿಗೂ ಕೂಡ 90% ರಿಯಾಯ್ತಿ ಕೊಟ್ಟು, ಪ್ರತಿಯೊಬ್ಬ ರೈತನಿಗೆ ಈ ಸೌಲಭ್ಯ ಕನಿಷ್ಠ 5-6 ವರ್ಷಕ್ಕೊಮ್ಮೆ ಕೊಡಬೇಕು. ಇತ್ತೀಚೆಗೆ ಕೃಷಿ ಇಲಾಖೆಯಿಂದ ಕೊಡತಕ್ಕಂತಹ ಸ್ಪಿçಂಕ್ಲರ್ ಪೈಪುಗಳು ಒಳ್ಳೆಯ ಗುಣಮಟ್ಟದಿಂದ ಬರುತ್ತಿಲ್ಲ ಮತ್ತು ಅವುಗಳು ಹೆಚ್ಚಿನ ರೈತರಿಗೂ ಸಿಗುತ್ತಿಲ್ಲ. ಆದಕಾರಣ ಗುಣಮಟ್ಟದಲ್ಲಿ ಸುಧಾರಣೆ ಮಾಡಿ, ಹೆಚ್ಚಿನ ರೈತರಿಗೆ ಪೂರೈಕೆ ಮಾಡಬೇಕು. ನಮ್ಮ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಯಾದಂತಹ ಸೋಯಾಬಿನ್ ಸುಮಾರು 80% ಇರುತ್ತಿದ್ದು, ಕಟಾವಿನ ಸಮಯದಲ್ಲಿ ಹೊಲದಲ್ಲಿ ಭಣಮೆ ಒಟ್ಟಬೇಕಾಗುತ್ತದೆ. ಮಳೆಯಿಂದ ಭಣಮೆ ರಕ್ಷಣೆಗಾಗಿ ತಾಡಪತ್ರಿಗಳ ಅವಶ್ಯಕತೆ ಎಲ್ಲಾ ರೈತರಿಗೆ ಇರುತ್ತದೆ. ಆದಕಾರಣ ಒಳ್ಳೆಯ ಗುಣಮಟ್ಟದ ತಾಡಪತ್ರಿಗಳು ಪ್ರತಿಯೊಬ್ಬ ರೈತರಿಗೆ ಪೂರೈಕೆ ಮಾಡಬೇಕು. ಹೈಟೆಕ್ ಕೃಷಿ ಯೋಜನೆಯಲ್ಲಿ ಯಂತ್ರೋಪಕರಣಗಳಾದ ರಾಶಿ ಮಾಡುವ ಯಂತ್ರ, ಬಿತ್ತುವ ಯಂತ್ರ, ನೇಗಿಲು, ಕುಂಟೆ, ರೊಟಾವೇಟರ್, ಕಲ್ಟಿವೇಟರ್ ಇಂತಹ ಯಂತ್ರೋಪಕರಣಗಳಿಗೆ ಎಸ್.ಸಿ., ಎಸ್.ಟಿ. ರೈತರಿಗೆ 90% ರಿಯಾಯ್ತಿ ದರದಲ್ಲಿ ಕೊಡುತ್ತಿದ್ದು, ಸಾಮಾನ್ಯ ರೈತರಿಗೆ 50% ದರದಲ್ಲಿ ಕೊಡುತ್ತಿದ್ದೀರಿ. ಅದಕ್ಕೆ ತಾವುಗಳು ರೈತರಲ್ಲಿ ಮಾಡುತ್ತಿರುವ ತಾರತಮ್ಯ. ಆದಕಾರಣ ಸಾಮಾನ್ಯ ರೈತರಿಗೂ ಕೂಡ 90% ರಿಯಾಯ್ತಿ ದರದಲ್ಲಿ ಒದಗಿಸಬೇಕು. ತೋಟಗಾರಿಕೆ ಇಲಾಖೆಯಲ್ಲಿ ಸರಕಾರದ ವತಿಯಿಂದ ಪ್ಯಾಕ್‌ಹೌಸ್ ಮಾಡಿಕೊಳ್ಳಲು ಒಂದುವರೆ ಲಕ್ಷದಿಂದ ಎರಡುವರೆ ಲಕ್ಷದ ವರೆಗೆ ರಿಯಾಯ್ತಿ ಕೊಡುತ್ತಿದ್ದಾರೆ. ಅದೇ ಮಾದರಿಯಲ್ಲಿ ಕೃಷಿ ಇಲಾಖೆಯಿಂದ ಕೂಡ ಗೋದಾಮ ರೂಪದಲ್ಲಿ ರೈತರಿಗೆ ಒಂದುವರೆ ಲಕ್ಷದಿಂದ ಎರಡು ಲಕ್ಷದ ವರೆಗೆ ರಿಯಾಯ್ತಿ ಕೊಡಬೇಕು. ಏಕೆಂದರೆ, ಹೊಲದಲ್ಲಿ ಬೆಳೆದಿರುವ ದವಸ ಧಾನ್ಯಗಳಿಗೆ ಮಳೆಯಿಂದ ರಕ್ಷಣೆ ಮಾಡಲು ಹಾಗೂ ಬೆಲೆ ಕುಸಿದಾಗ ದವಸಧಾನ್ಯಗಳು ಸ್ಟೋರ್ ಮಾಡಲು ಉಯೋಗವಗುತ್ತದೆ. ಕೃಷಿ ಇಲಾಖೆಯಿಂದ ಹೊಲ ಉಳುಮೆ ಮಾಡಲು ರೈತರಿಗೆ ಟ್ರಾಕ್ಟರ್ ಸಲುವಾಗಿ ಎಸ್.ಸಿ., ಎಸ್.ಟಿ. ರೈತರಿಗೆ 3.00 ಲಕ್ಷ ರಿಯಾಯ್ತಿ ಮತ್ತು ಸಾಮಾನ್ಯ ರೈತರಿಗೆ ಕೇವಲ 75000/- ರಿಯಾಯ್ತಿ ಕೊಡುತ್ತಿದ್ದೀರಿ. ಅದಕ್ಕೆ ರೈತರಲ್ಲಿ ತಾರತಮ್ಯ ಮಾಡಲಾರದೇ, ಸಾಮಾನ್ಯ ರೈತರಿಗೂ ಕೂಡ 3.00 ಲಕ್ಷ ರೂ. ರಿಯಾಯ್ತಿ ಕೊಡಿ. ಜಿಲ್ಲೆಯಲ್ಲಿ ಬೆಳೆಹಾನಿ ಪರಿಹಾರ ಇನ್ನೂ 11000 ಕ್ಕಿಂತ ಜಾಸ್ತಿ ರೈತರಿಗೆ ಸಿಕ್ಕಿರುವುದಿಲ್ಲ. ಆದಕಾರಣ ಅತೀ ಶೀಘ್ರದಲ್ಲಿ ಉಳಿದಿರುವ ಎಲ್ಲಾ ರೈತರಿಗೆ ಕೊಡಿಸಬೇಕು.ಹನಿ ನೀರಾವರಿ ಮಾಡಿಕೊಂಡAತಹ ರೈತನಿಗೆ ಸ್ಪಿçಂಕ್ಲರ್ ಪೈಪುಗಳು ಕೊಡುತ್ತಿಲ್ಲ. ಸ್ಪಿçಂಕ್ಲರ್ ಪೈಪುಗಳು ಪಡೆದಂತಹ ರೈತನಿಗೆ ಹನಿ ನೀರಾವರಿ ಸೌಲಭ್ಯ ಕೊಡುತ್ತಿಲ್ಲ. ಅದಕ್ಕೆ ಹನಿ ನೀರಾವರಿಗೆ, ಸ್ಪಿçಂಕ್ಲರ್‌ಗೆ ಹೋಲಿಕೆ ಮಾಡಲಾರದೇ, ಪ್ರತ್ಯೇಕವಾಗಿ ಎರಡು ಯೋಜನೆಯ ಸೌಲಭ್ಯ ರೈತರಿಗೆ ಕೊಡಬೇಕು.
ಎಲ್ಲಾ ರೈತರ ಸಮಸ್ಯೆಗಳು ಅತೀ ಶೀಘ್ರದಲ್ಲಿ ಬಗೆಹರಿಸಿ, ರೈತರ ಹಿತ ಕಾಪಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ ಘಟಕದ ವತಿಯಿಂದ ಕೃಷಿ ಸಚಿವರಿಗೆ ಜಿ.ಪಂ ಸಭೆಯಲ್ಲಿ ಮನವಿ ಸಲ್ಲಿಸಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಿದ್ರಾಮಪ್ಪಾ ಅಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಚಂದ್ರಶೇಖರ ಜಮಖಂಡಿ, ಶಂಕರೆಪ್ಪ ಪಾರಾ, ಶೇಷರಾವ ಕಣಜಿ, ಪ್ರಕಾಶ ಬಾವಗೆ, ಬಾಬುರಾವ ಜೋಳದಾಬಕೆ, ಸಿದ್ದಣ್ಣ ಭೂಶೆಟ್ಟಿ, ಪ್ರವೀಣ ಕುಲಕರ್ಣಿ, ಸತೀಶ ನನ್ನೂರೆ, ನಾಗಯ್ಯ ಸ್ವಾಮಿ, ಸುಭಾಷ ರಗಟೆ, ಸುಮಂತ ಗ್ರಾಮಲೆ, ಮಲ್ಲಿಕಾರ್ಜುನ ಬಿರಾದಾರ, ರಾಜಕುಮಾರ ಪಾಟೀಲ,ವಿಠಲ ಪಾಟೀಲ,ದಿಲಿಪ ಕುಲಕರ್ಣಿ ಉಪಸ್ಥಿತರಿದ್ದರು.