ಬೀದರ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಿಗೆ ಅಧಿಕೃತ ಆಮಂತ್ರಣ
ಬೀದರ, ಸೆ.೩ : ಸೆಪ್ಟೆಂಬರ್ ೬ ರಂದು ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ನಡೆಯಲಿರುವ ಬೀದರ ಜಿಲ್ಲಾ ಪ್ರಥಮ ಶೈಕ್ಷಣಿಕ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಪೂರ್ಣಿಮಾ ಜಾರ್ಜ ಅವರಿಗೆ ಅವರ ನಿವಾಸದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಮ್ಮೇಳನದ ಆಹ್ವಾನವನ್ನು ನೀಡಿ ಅಧಿಕೃತವಾಗಿ ಆಹ್ವಾನಿಸಿದರು.
ಆಹ್ವಾನವನ್ನು ಸ್ವೀಕರಿಸಿದ ಸಮ್ಮೇಳನಾಧ್ಯಕ್ಷೆ ಡಾ.ಪೂರ್ಣಿಮಾ ಮಾತನಾಡಿ, ಬೀದರನ ಸೊಸೆಯಾಗಿ ಬಂದ ನನಗೆ ಬೀದರ ಜನ ಮಗಳಾಗಿ ಸ್ವೀಕರಿಸಿದ್ದೀರಿ, ನಾನು ಶೈಕ್ಷಣಿಕ ರಂಗದಲ್ಲಿ ಮಾಡಿರುವ ಸೇವೆಯನ್ನು ಪರಿಗಣಿಸಿ ನನಗೆ ಸಮ್ಮೇಳನಾಧ್ಯಕ್ಷ ಸ್ಥಾನ ನೀಡಿರುವುದು ಸಂತಸವನ್ನು ತರುವುದರ ಜೊತೆಗೆ ನನ್ನ ಜವಾಬ್ದಾರಿಯನ್ನೂ ಸಹ ಹೆಚ್ಚಿಸಿದೆ, ಇಂತಹ ಹೊಣೆಗಾರಿಕೆಯನ್ನು ವಹಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.
ಆಹ್ವಾನವನ್ನು ನೀಡಿದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿಯವರು ಮಾತನಾಡಿ, ಜಿಲ್ಲೆಯ ಪ್ರತಿಭಾವಂತ ಮತ್ತು ಬಹುಮುಖ ಪ್ರತಿಭೆಯಾದ ಡಾ.ಪೂರ್ಣಿಮಾ ಜಾರ್ಜ ಅವರು ತಮ್ಮ ಅವಿರತ ಶೈಕ್ಷಣಿಕ ಸೇವೆಯ ಮೂಲಕ ಸಾಹಿತ್ಯ ಸೇವೆಯನ್ನೂ ಸಹ ಮುಂದುವರೆಸಿರುವುದು ಶ್ಲಾಘನೀಯವಾಗಿದೆ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಶಿವಕುಮಾರ ಕಟ್ಟೆ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಡಾ.ಬಸವರಾಜ ಬಲ್ಲೂರ, ರೇವಣಸಿದ್ದಪ್ಪ ಜಲಾದೆ, ಭಾರತಿ ವಸ್ತçದ, ರವಿ ಮೂಲಗೆ, ದಾನಿ ಬಾಬುರಾವ, ರಾಜೇಂದ್ರ ಮಣಗೀರೆ, ಪಾರ್ವತಿ ಸೋನಾರೆ ಮುಂತಾದವರು ಮಾತನಾಡಿ ಡಾ.ಪೂರ್ಣಿಮಾ ಜಾರ್ಜ ಅವರ ಆಯ್ಕೆಗೆ ಸಂತಸ ವ್ಯಕ್ತಪಡಿಸಿದರು. ಕೋಶಾಧ್ಯಕ್ಷ ಶಿವಶಂಕರ ಟೋಕರೆ ನಿರೂಪಿಸಿದರೆ ರೂಪಾ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಶಂಕರ ಕೊಟ್ಟರಕಿ, ಹಾವಶೆಟ್ಟಿ ಪಾಟೀಲ, ಡಾ.ಮುನೇಶ್ವರ ಲಾಖಾ, ಪರಮೇಶ್ವರ ಬಿರಾದಾರ, ಸಂತೋಷ ಮಂಗಳೂರೆ, ವಿಜಯಕುಮಾರ ಸೋನಾರೆ, ಡಾ.ಶ್ರೇಯಾ ಮಹೀಂದ್ರಕರ್, ಸಿದ್ಧಾರೂಢ ಭಾಲ್ಕೆ, ಅಶೋಕ ದಿಡಗೆ, ಬಾಲಾಜಿ ಬಿರಾದಾರ, ಸಿದ್ಧಾರೆಡ್ಡಿ ನಾಗೂರಾ, ವಿದ್ಯಾವತಿ ಬಲ್ಲೂರ, ಶಿಲ್ಪಾ ಮಜಗೆ, ಸ್ವರೂಪಾರಾಣಿ ನಾಗೂರೆ, ಸಕಲೇಶ್ವರಿ ಚನ್ನಶೆಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.