ಬೀದರ್

“ಬೀದರ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಆರೋಗ್ಯ ತಪಾಸಣಾ ಶಿಬಿರ”

ಬೀದರ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಹಾಗೂ FPA India (Family Planning Association of India) ಬೀದರ ಘಟಕ ವತಿಯಿಂದ ಬೀದರ ಜಿಲ್ಲಾ ಮಹಿಳಾ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ” ಆರೋಗ್ಯ ತಪಾಸಣಾ ಶಿಬಿರ” ವನ್ನು ಡಾ: ನಾಗೇಶ ಪಾಟೀಲ್, ಡಾ: ಆರತಿ ರಘು, ಡಾ: ಎ.ಸಿ ಲಲಿತಮ್ಮಾ, ಡಾ: ರಘು ಕ್ರಿಷ್ಣಮೂರ್ತಿ ರವರೊಂದಿಗೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪೊಲೀಸ್ರು ಮತ್ತು ವೈದ್ಯರು ಸಾಮಾನ್ಯ ಜನರ ಮನಸ್ಸಿನಲ್ಲಿ ದೇವರಿಗೆ ಸಮಾನರು. ಅವರಿಗೆ ತೊಂದರೆ, ಭಯ ಉಂಟಾದಲ್ಲಿ ಮೊದಲು ಮನಸ್ಸಿನಲ್ಲಿ ನೆನೆಸುವುದೇ ಪೊಲೀಸರಿಗೆ ಮತ್ತು ವೈದ್ಯರಿಗೆ. ಅದರಂತೆ ನಮ್ಮ ಕರ್ನಾಟಕ ರಾಜ್ಯ ಪೊಲೀಸ್ ಮಹಿಳಾ ಅಧಿಕಾರಿಗಳು ಮುಖ್ಯವಾಗಿ ನಮ್ಮ ಬೀದರ ಜಿಲ್ಲಾ ಪೊಲೀಸ್ ಮಹಿಳಾ ಅಧಿಕಾರಿಗಳು ಕಠಿಣ ಪರಿಸ್ಥಿತಿಯಲ್ಲಿ, ರಾತ್ರಿ ಹಗಲೆನ್ನದೇ ನಮ್ಮೊಂದಿಗೆ ತಮ್ಮ ಹುದ್ದೆಯ ಭೇದ ಭಾವ ಇಲ್ಲದೇ ನಮ್ಮ ಹಿಂದೆಯು ಅಲ್ಲಾ ನಮ್ಮ ಕೆಳಗೆಯು ಅಲ್ಲ ನಮ್ಮ ಜೊತೆ, ಜೊತೆಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದಾರೆ.
ಅವರ ಆರೋಗ್ಯದ ಕಾಳಜಿಯನ್ನು ಜಿಲ್ಲೆಯ ಇಲಾಖಾ ಮುಖ್ಯಸ್ಥನಾಗಿ ಗಮನ ಹರಿಸುವುದು ನನ್ನ ಪ್ರಿತಿಯ ಜವಾಬ್ದಾರಿಯೂ ಆಗಿರುತ್ತದೆ. ಅದರಂತೆ ಡಾ: ನಾಗೇಶ ಪಾಟೀಲ್ ರವರು ಬೀದರ ಜಿಲ್ಲಾ ಪೊಲೀಸ್ ಜನ ಸ್ನೇಹಿ ಪೊಲೀಸ್ ಆಗಿ ಕೆಲಸ ಮಾಡುತ್ತಿರುವದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುತ್ತಾರೆ.ಶಿಬಿರದಲ್ಲಿ ಜಿಲ್ಲೆಯ ಪೊಲೀಸ್ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಪಾಲ್ಗೊಂಡರು.
Ghantepatrike kannada daily news Paper

Leave a Reply

error: Content is protected !!