ಬೀದರ್ ವಿಭಾಗದ ನೂತನ ಪದಾಧಿಕಾರಿಗಳನ್ನು ಆಯ್ಕೆ
ಬೀದರ್ 11:-ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಡಾ. ಬಿಆರ್ ಅಂಬೇಡ್ಕರ್ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೀದರ್ ವಿಭಾಗದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ವಲಯ ಸಮಿತಿಯವರು ಅನಿಮೋದನೆ ನೀಡಿದರು.
ಜುಲೈ 9ರಂದು ಬೀದರ್ ಬಸ್ ನಿಲ್ದಾಣದ ಲಾಡ್ಜನಲ್ಲಿ ಬೀದರ್ ವಿಭಾಗದ ಎಲ್ಲ ಕಾರ್ಮಿಕ ಸಿಬ್ಬಂದಿಗಳು ವಲಯ ಅಧ್ಯಕ್ಷರಾದ ಶಿವಶಾಂತ ಎಂ. ಮುನ್ನಹಳ್ಳಿ ಸಮ್ಮುಖದಲ್ಲಿ ಸಭೆ ಸೇರಿ ಒಮ್ಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಾಣಿಕರಾವ ಗೋಡಬೊಲೆ ಕಾನೂನು ಸಲಹೆಗಾರರು ಹಾಗೂ ಗೌರವಾಧ್ಯಕ್ಷರು, ಶಿವಶಂಕರ ಬೌದ್ಧೆ- ಅಧ್ಯಕ್ಷರು, ಸತೀಶಕುಮಾರ ಅಪ್ಪೆ- ಪ್ರಧಾನ ಕಾರ್ಯದರ್ಶಿ, ವಿಜಯಪ್ರಕಾಶ ಸಿಂಧೆ- ಕಾರ್ಯಾಧ್ಯಕ್ಷರು, ಶಾಂತಕುಮಾರ ದೇಸೂಳೆ- ಮುಖ್ಯ ಉಪಾಧ್ಯಕ್ಷರು, ಜೈಭೀಮ ನೌಬಾದೆ- ಖಜಾಂಚಿ, ನೌನಾಥ ಕುಂದನ್, ಗಣಪತಿ ಕಿಣ್ಣಿಕರ್, ಸಂತೋಷ ಖಾದೆಪೂರ, ಪಂಢರಿ ಶಿಂಧೆ, ಸತೀಶ ಒಡೆಯರ, ಕುಶಾಲರಾವ ಚವ್ಹಾಣ ಎಲ್ಲರು ಉಪಾಧ್ಯಕ್ಷರು, ಶೇಖರ ಶರ್ಮಾ-ಪ್ರಚಾರ ಕಾರ್ಯದರ್ಶಿ, ಸುನೀಲ ಕಾಡಗೆ- ಜಂಟಿ ಕಾರ್ಯದರ್ಶಿ, ನಾಗರಾಜ ಬಿಕಿಕರ್- ಸಂಘಟನಾ ಕಾರ್ಯದರ್ಶಿಯಾಗಿರುತ್ತಾರೆ ಎಂದು ವಲಯ ಸಮಿತಿ ಅಧ್ಯಕ್ಷರಾದ ಶಿವಶಾಂತ ಎಂ. ಮುನ್ನಹಳ್ಳಿ, ಕಾರ್ಯಾಧ್ಯಕ್ಷರಾದ ಭೀಮಣ್ಣ ದಂಡಗೂಲಕರ್ ಹಾಗೂ ವಲಯ ಸಮಿತಿ ಮುಖ್ಯ ಉಪಾಧ್ಯಕ್ಷರಾದ ರಾಹುಲ್ ಬಿ. ಕಂಠಿ ಜಂಟಿಯಾಗಿ ತಿಳಿಸಿದ್ದಾರೆ.