ಬೀದರ್, ಮಾಣಿಕನಗರದಲ್ಲಿ 16 ವರ್ಷದೊಳಗಿನ ಕ್ರಿಕೆಟ್ ಪಂದ್ಯ ಬಿನ್ನಿ-ವಿಶ್ವನಾಥ ತಂಡಕ್ಕೆ ಗೆಲುವು
ಬೀದರ್: ಕೆಎಸ್‌ಸಿಎ ರಾಯಚೂರು ವಲಯ ಹಮ್ಮಿಕೊಂಡಿರುವ 16 ವರ್ಷದೊಳಗಿನ ಕ್ರಿಕೆಟ್ ಪಂದ್ಯದಲ್ಲಿ ಗುರುವಾರ ಬಿಜ್ರೇಶ್ ಪಟೇಲ್ ಹಾಗೂ ರೋಜರ್ ಬಿನ್ನಿ ತಂಡ ಗೆಲುವು ಸಾಽಸಿವೆ.
ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಬಿಜ್ರೇಶ್ ಪಟೇಲ್ ಮತ್ತು ಎರಪಲ್ಲಿ ಪ್ರಸನ್ನ ತಂಡಗಳ ಮಧ್ಯೆ ಪಂದ್ಯ ನಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪ್ರಸನ್ನ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿತು. ಸೂರಜ್ 54, ಓಂಕಾರ 42, ಎಂ.ಡಿ. ಉಜೇರ್ 33 ರನ್‌ಗಳಿಸಿದರು. ಪಟೇಲ್ ತಂಡವು 39.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 269 ರನ್‌ಗಳಿಸಿ ಜಯಗಳಿಸಿದರು. ತಂಡದ ಪರ ಆದರ್ಶ ಆರ್. 81 ರನ್ ಹಾಗೂ ಆದಿತ್ಯ ಆರ್. 64 ರನ್ ಗಳಿಸಿದ್ದಾರೆ.
ಬಿನ್ನಿ ತಂಡಕ್ಕೆ ಗೆಲುವು: ಗುರುವಾರ ಹುಮನಾಬಾದ್ ಬಳಿಯ ಮಾಣಿಕನಗರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ರೋಜರ್ ಬಿನ್ನಿ ತಂಡ 46 ಓವರ್‌ಗಳಲ್ಲಿ 280 ರನ್‌ಗಳಿಸಿತು. ಅದರಲ್ಲಿ ಅಂಕಿತ್ ರಡ್ಡಿ 127 ಬಾಲ್‌ನಲ್ಲಿ 25 ಬೌಂಡರಿ, 1 ಸಿಕ್ಸ್ ಮೂಲಕ 155 ರನ್ ಗಳಿಸಿ ಗಮನ ಸೆಳೆದರು. ರೋಹಿತ್ ಎಲ್. 45 ಎಸೆತಗಳಲ್ಲಿ 61 ರನ್ ಬಾರಿಸಿದರು. ನಂತರ ಬ್ಯಾಂಡಿAಗ್ ಮಾಡಿದ ಜಿ.ಆರ್. ವಿಶ್ವನಾಥ ತಂಡ 50 ಓವರ್‌ಗಳಲ್ಲಿ 145 ರನ್ ಗಳಿಸಿ ಪರಾಭವಗೊಂಡಿತು.
ಇAದಿನ ಪಂದ್ಯ
ಶುಕ್ರವಾರ ಬೀದರ್‌ನ ನೆಹರು ಕ್ರೀಡಾಂಗಣದಲ್ಲಿ ಬೆಳಗ್ಗೆ 9.20ಕ್ಕೆ ಬಿಜ್ರೇಶ್ ಪಟೇಲ್ ಮತ್ತು ರೋಜರ್ ಬಿನ್ನ ತಂಡಗಳ ಮಧ್ಯೆ ಹಾಗೂ ಮಾಣಿಕನಗರ ಕ್ರೀಡಾಂಗಣದಲ್ಲಿ ಇರಪಲ್ಲಿ ಪ್ರಸನ್ನ ಮತ್ತು ಬಿ.ಎಸ್. ಚಂದ್ರಶೇಖರಗಳ ತಂಡಗಳ ನಡುವೆ ಪಂದ್ಯ ನಡೆಯಲಿದೆ ಎಂದು ಅನೀಲಕುಮಾರ ದೇಶಮುಖ ತಿಳಿಸಿದ್ದಾರೆ.