ಬೀದರ್: ದೇಶ ಕಟ್ಟುವ ಕಾಯಕದಲ್ಲಿ ವಿದ್ಯಾರ್ಥಿ ಪರಿಷತ್ ಪಾತ್ರ ದೊಡ್ಡದು: ಅನಿಲ್ ಜಾದವ್
ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ 76ನೇ ಸಂಸ್ಥಾಪನಾ ದಿನವಾದ ಈ ದಿನವನ್ನು ದೇಶದಲ್ಲಿ ರಾಷ್ಟ್ರೀಯ ಪರ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ.
ಎಬಿವಿಪಿ ಬೀದರ್ ಜಿಲ್ಲಾ ಘಟಕದ ವತಿಯಿಂದ ಸ್ಥಾಪನ ದಿನದ ಅಂಗವಾಗಿ ಧ್ವಜಾರೋಹಣ ಹಾಗೂ ಸಸಿ ನೆಡುವುದರ ಮೂಲಕ ಆಚರಿಸಲಾಯಿತು
ಜುಲೈ 9, 1949ರಲ್ಲಿ ಸ್ಥಾಪನೆಯಾದ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತನ್ನ 76 ವರ್ಷದ ಸುದೀರ್ಘ ದಾರಿಯಲ್ಲಿ ‘ವಿದ್ಯಾರ್ಥಿಶಕ್ತಿ – ರಾಷ್ಟ್ರಶಕ್ತಿ’ ಎಂಬ ಸಂದೇ ಶದೊಂದಿಗೆ ಕಾಲೇಜಿನ ಕ್ಯಾಂಪಸ್ನಲ್ಲಿರುವ ಸಾಮಾನ್ಯ ವಿದ್ಯಾರ್ಥಿಯನ್ನು ಈ ದೇಶದ ಶಕ್ತಿಯನ್ನಾಗಿ ಬದಲಾವಣೆ ಮಾಡುವ ಕಾರ್ಯವನ್ನು ಮಾಡಿ ಕೊಂಡು ಬರುತ್ತಿದೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರವನ್ನು ನಿರ್ಮಾಣಮಾಡುವ ಕಾರ್ಯವನ್ನು ತನ್ನ ಕಾರ್ಯಕರ್ತರ ಮೂಲಕ ಮಾಡುತ್ತಿದೆ. ಯಾವ ಸಂಘಟನೆಗಳು ಆ ದೇಶದ ಮಣ್ಣಿಗೆ ಪೂರಕವಾಗಿ ಕೆಲಸಮಾಡುತ್ತವೆಯೋ ಆ ಸಂಘಟನೆಗಳು ಬಾನೆತ್ತರಕ್ಕೆ ಬೆಳೆಯುತ್ತವೆ ಎಂಬ ಮಾತನ್ನು ಸ್ವಾಮಿ ವಿವೇಕಾನಂದರು ಹೇಳಿದಂತೆ ಭಾರತ ದೇಶದ ಈ ಮಣ್ಣಿಗೆ ಪೂರಕವಾಗಿ ಎಬಿವಿಪಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಇಂದು ವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನು ಒಳಗೊಂಡ ಸಂಘಟನೆ ಎಬಿವಿಪಿ ಆಗಿದೆ ಎಂದು ನಗರ ಅಧ್ಯಕ್ಷರ ಅನಿಲ್ ಜಾದವ್ ಮಾತನಾಡಿದರು
ಭಾರತ ದೇಶದ ಕಿರೀಟ ಜಮ್ಮು – ಕಾಶ್ಮೀರದ ಲಾಲ್ ಚೌಕದಲ್ಲಿ ತಿರಂಗಾ ಧ್ವಜವನ್ನು ಹಾರಿಸಿ ಎಂಬ ಸವಾಲನ್ನು ಭಯೋತ್ಪಾದಕರು ಹಾಕುತ್ತಾರೆ. ಆಗಿನ ಪ್ರಧಾನ ಮಂತ್ರಿ ವಿ.ಪಿ.ಸಿಂಗ್ ಅವರು ಜಮ್ಮು ಯಾರೂ ಹೋಗಬಾರದು ಎಂಬ ಹೇಳಿಕೆ ನೀಡುತ್ತಾರೆ. ಆದರೆ ದೇಶದ ಚಿಂತನೆ ಮಾಡುವ ಸಂಘಟನೆಯಾದ ಎಬಿವಿಪಿ ಹತ್ತು ಸಾವಿರ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾಶ್ಮೀರ ಚಲೋ ಮೂಲಕ ಜಮ್ಮು ಕಾಶ್ಮೀರದ ಲಾಲ್ ಚೌಕದಲ್ಲಿ ತಿರಂಗಾ ಧ್ವಜವನ್ನು ಹಾರಿಸಿ ಕಾಶ್ಮೀರ ಭಾರತ ದೇಶದ ಅವಿಭಾಜ್ಯ ಅಂಗ ಎಂಬ ಸಂದೇಶವನ್ನು ಈ ಇಡೀ ಜಗತ್ತಿಗೆ ನೀಡಿದ್ದು ಎಬಿವಿಪಿ ಹಿರಿಯರಾದ ವೀರೇಶ್ ಸ್ವಾಮಿ ಮಾತನಾಡಿದರು
ದೇಶವು ಕೋವಿಡ್ ಬಾಧಿತವಾಗಿ ಜನಜೀವನ ಸ್ಥಗಿತಗೊಂಡು ಸಂಕಷ್ಟದಲ್ಲಿದ್ದಾಗ, ಬೇರೆ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಕೂಲಿ ಕೆಲಸವನ್ನುಮಾಡಲು ಬಂದ ಕಾರ್ಮಿಕರಿಗೆ ಫುಡ್ ಪ್ಯಾಕೆಟ್ ವಿತರಣೆ, ತಾಲೂಕು ಆಡಳಿತ, ಜಿಲ್ಲಾ ಆಡಳಿತದ ಜೊತೆಗೆ ಹೆಲ್ಡ್ಲೈನ್ಗಳಲ್ಲಿ ಎಬಿವಿಪಿಯ ಕಾರ್ಯಕರ್ತರು ಕಾರ್ಯನಿರ್ವಹಿಸಿದ್ದರು. ಆಸ್ಪತ್ರೆಗ ಳಲ್ಲಿ ಸ್ವಯಂಸೇವಕರಾಗಿ ಕೆಲಸಮಾಡಿದ್ದಲ್ಲದೆ, ಅಗತ್ಯ ಬಿದ್ದಾಗ ಮೃತರಾದವರ ಅಂತ್ಯ ಸಂಸ್ಕಾರವನ್ನೂ ಮಾಡಿ, ಯಾವ ಫಲಾಪೇಕ್ಷೆಯೂ ಇಲ್ಲದೆ ಎಬಿವಿಪಿ ಕಾರ್ಯಕರ್ತರು ದುಡಿದಿದ್ದರು. ವಿದ್ಯಾರ್ಥಿಗಳಿಗೆ ಸಮಸ್ಯೆ ಆದಾಗ ಯಾವುದೇ ಸರ್ಕಾರವಿರಲಿ, ಆ ಸರ್ಕಾರದ ವಿರುದ್ಧ ಧ್ವನಿ ಎತ್ತಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸುವ ಕಾರ್ಯವನ್ನು ಎಬಿವಿಪಿ ಮಾಡುತ್ತಿದೆ. ಸರ್ಕಾರಿ ಕಾಲೇಜುಗಳಿಗೆ ಮೂಲಭೂತ ಸೌಲಭ್ಯ, ಹಾಸ್ಟೆಲ್ಗಳ ಸಂಖ್ಯೆ ಹೆಚ್ಚಳ, ಗುಣಮಟ್ಟದ ವಿದ್ಯಾರ್ಥಿಸ್ನೇಹಿ ಕಾಲೇಜು ಕ್ಯಾಂಪಸ್ಗಳ ನಿರ್ಮಾಣಕ್ಕೆ ಒತ್ತು, ವಿದ್ಯಾರ್ಥಿವೇತನ, ಸಿಇಟಿ ಹೋರಾಟ, ಇಂತಹ ಹಲವಾರು ಹೋರಾಟಗಳನ್ನು ಎಬಿವಿಪಿ ಕಟ್ಟಿಕೊಂಡು ಬಂದಿದೆ ನಗರದ ಉಪಾಧ್ಯಕ್ಷರಾದ ಅಮಿತ್ ರೆಡ್ಡಿ ಮಾತನಾಡಿದರು ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಆನಂದ್ ಅಮನವಾದೆ ನಗರ ಸಹ ಕಾರ್ಯದರ್ಶಿ ಪವನ್ ಕುಂಬಾರ್, ನಾಗರಾಜ್ ಸುಲ್ತಾನಪುರ,ಜಿಲ್ಲಾ ಸಂಚಾಲಕ ಶಶಿಕಾಂತ್ ರಾಕ್ಲೆ, ಪವನ್ ಪಾಂಚಾಳ್ ಕಾರ್ಯಾಲಯ ಕಾರ್ಯದರ್ಶಿ, ಸಾಯಿ ಬೋಸ್ಲೆ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಾರ್ಥನಾ ಕಾಲೇಜ್ ಕಾರ್ಯದರ್ಶಿ ಮಮತಾ ಅತೀಶ್ ಕಾಲೇಜ್ ಅಧ್ಯಕ್ಷ ಯಲ್ಲಾಲಿಂಗ ವಿಶ್ವಾಸ್ ಅಂಬರೀಶ್ ಬಿರಾದರ್ ಲಕ್ಷ್ಮಿಕಾಂತ್ ಕಾರ್ಯಕರ್ತರು ಉಪಸ್ಥಿತಿ ಇದ್ದರು