ಬಿ.ಎನ್ಎಲ್ ಕರ್ಕರೆ ಕರೆ * ವಿದ್ಯಾನಗರ ಮೆಥೋಡಿಸ್ಟ್ ಚರ್ಚ್ನ ಬೆಳ್ಳಿ ಮಹೋತ್ಸವಕ್ಕೆ ತೆರೆ ವಿವಿಧತೆಯಲ್ಲಿ ಏಕತೆ ತತ್ವ ಅಳವಡಿಸಿಕೊಳ್ಳಿ
ಬೀದರ್: ಬೀದರ್: ಇಲ್ಲಿನ ವಿದ್ಯಾನಗರ ಬಡಾವಣೆಯ ಸೇಂಟ್ ಪಾಲ್ ಮೆಥೋಡಿಸ್ಟ್ ಚರ್ಚ್ ನ ಬೆಳ್ಳಿ ಮಹೋತ್ಸವಕ್ಕೆ ಭಾನುವಾರ ರಾತ್ರಿ ಅದ್ದೂರಿ ತೆರೆ ಬಿತ್ತು.
ಎರಡು ದಿನ ದೈವ ಸಂದೇಶ, ಮೆರವಣಿಗೆ, ಸಾಂಸ್ಕøತಿಕ ಕಾರ್ಯಕ್ರಮ ಸೇರಿ ನಾನಾ ಸಮಾರಂಭಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಸಂಜೆ ಭವ್ಯ ಮೆರವಣಿಗೆ ನಡೆಯಿತು. ಇಲ್ಲಿನ ಮೈಲೂರು ಕ್ರಾಸ್ನಿಂದ ವಿದ್ಯಾನಗರ ಚರ್ಚ್ ವರೆಗೆ ನಡೆಯಿತು. ಸಾರೋಟಿಯಲ್ಲಿ ಬೆಂಗಳೂರಿನ ಬಿಷಪ್ ಎನ್.ಎಲ್. ಕರ್ಕರೆ ಅವರನ್ನು ಆಸೀನರಾಗಿದ್ದರು. ಮೆರವಣಿಗೆಗೆ ವಿವಿಧ ಸಾಂಸ್ಕøತಿಕ ಕಲಾ ತಂಡಗಳು ಮೆರಗು ಹೆಚ್ಚಿಸಿದ್ದವು.
ರಾತ್ರಿ ನಡೆದ ಕಾರ್ಯಕ್ರಮದಲ್ಲಿ ದೈವ ಸಂದೇಶ ನೀಡಿದ ಬಿಷಪ್ ಎನ್.ಎಲ್. ಕರ್ಕರೆ, ನಾವೆಲ್ಲರೂ ವಿವಿಧತೆಯಲ್ಲಿ ಏಕತೆಯಿಂದ ಇರಬೇಕು. ಎಲ್ಲ ಧರ್ಮಗಳ ಮಧ್ಯೆ ಶಾಂತಿ, ಸೌಹಾರ್ದತೆಯಿಂದ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.
ಕಳೆದ 25 ವರ್ಷಗಳ ಹಿಂದೆ ವಿದ್ಯಾನಗರದಲ್ಲಿ ಚರ್ಚ್ ಸ್ಥಾಪಿಸಲಾಗಿತ್ತು. ಇದೀಗ ದೊಡ್ಡಮಟ್ಟದಲ್ಲಿ ಬೆಳೆದಿದ್ದು ಖುಷಿ ತಂದಿದೆ. ಇಲ್ಲಿನ ಎಲ್ಲ ಜನರು ಒಗ್ಗಟ್ಟಿನಿಂದ ಇದ್ದು ಚರ್ಚ್ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮೆಥೋಡಿಸ್ಟ್ ಮೇಲ್ವಿಚಾರಕ ನೆಲ್ಸನ್ ಸುಮಿತ್ರಾ, ರೆ.ಸೈಮನ್ ಮಾರ್ಕ್, ಎಸ್.ಎಲ್. ತುಕರಾಮ, ಅಲ್ಬರ್ಟ್ ಕೋಟೆ,
ಡಾ.ಸತೀಶಕುಮಾರ ಎಂ. ಡೇವಿಡ್, ಬಿ.ಜೆ. ಸ್ಯಾಮೂವೆಲ್, ಸ್ವಾಮಿದಾಸ ಬೇಂದ್ರೆ, ಎಂ.ಎಚ್. ಡೇವಿಡ್, ಸುಧಾಕರ ಕಟ್ಟಿ, ಸಲೋಮನ್, ಅರುಣ, ಸುಭದ್ರಾ ಡೇವಿಡ್, ಸರೋಜನಿ ಶಿರೋಮಣಿ ಇತರರಿದ್ದರು.
ಚರ್ಚ್ ಸಭಾ ಪಾಲಕರಾದ ನಿರ್ಮಲಾ ಸೈಮನ್ ಮಾರ್ಕ್ ಪ್ರಾಸ್ತಾವಿಕ ಮಾತನಾಡಿ, ನಿರೂಪಣೆ ಮಾಡಿದರು. ಸಂಪತಕುಮಾರ ಸ್ವಾಗತಿಸಿದರು.