ಬಿಡಾಡಿ ದನಗಳನ್ನು ರಸ್ತೆಗಳ ಮೇಲೆ ಬಿಡದಂತೆ ಸೂಚನೆ
ಬೀದರ. ಆಗಸ್ಟ್.17 – ಬೀದರ ನಗರದ ಪ್ರಮುಖ ರಸ್ತೆಗಳ ಮೇಲೆ ಹಾಗೂ ಸಾರ್ವಜನಿಕ ಸ್ಥಳಗಳ ಮೇಲೆ ಬಿಡಾಡಿ ದನಗಳು ಕಂಡುಬAದಿರುತ್ತವೆ. ಕಾರಣ ಸದರಿ ಮಾಲೀಕರು ಕೂಡಲೆ 07 ದಿನದೊಳಗಡೆ ಬಿಡಾಡಿ ದನಗಳನ್ನು ತಮ್ಮ ತಮ್ಮ ಮನೆಗಳಲ್ಲಿ ಕಟ್ಟಿಕೊಳ್ಳಲು ಸೂಚಿಸಿದೆ ಮತ್ತು ರಸ್ತೆಗಳ ಮೇಲೆ ಬಿಡಲಾರದೆ ನೋಡಿಕೊಳ್ಳಲು ಕಟ್ಟುನಿಟ್ಟಾಗಿ ಸೂಚಿಸಿದೆ. ಒಂದು ವೇಳೆ ಬಿಡಾಡಿ ದನಗಳು ರಸ್ತೆಗಳ ಮೇಲೆ ಕಂಡು ಬಂದಲ್ಲಿ ತಮ್ಮ ಬಿಡಾಡಿ ದನಗಳನ್ನು ನಗರಸಭೆ ವತಿಯಿಂದ ಹಿಡಿದು ಹಾಕಲಾಗುವುದು ಮತ್ತು ಕರ್ನಾಟಕ ಮುನ್ಸಿಪಾಲ್ 1964 ಕಾಯ್ದೆ ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುತ್ತದೆಂದು ಬೀದರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.