ಬಿಂದಾಸ್ ಡ್ಯಾನ್ಸ್ ಮಾಡಿದ ಮೋಹಕ ತಾರೆ ರಮ್ಯಾ!
ಬೆಂಗಳೂರು: ಮೋಹಕ ತಾರೆ ರಮ್ಯಾ, ಕೆಲ ಸಮಯದ ಹಿಂದೆ ದಪ್ಪ ಆಗಿದ್ದಕ್ಕೆ ಟ್ರೋಲ್ ಆಗಿದ್ದರು. ಆದರೆ ಇದೀಗ “ಪದ್ಮಾವತಿ” ಮತ್ತೊಮ್ಮೆ ಸ್ಲಿಮ್ ಆ್ಯಂಡ್ ಫಿಟ್ ಆಗಿ ಕಾಣಿಸಿಕೊಂಡಿದ್ದು, ಕನ್ನಡಿ ಮುಂದೆ ಡ್ಯಾನ್ಸ್ ಮಾಡಿ ಲೈಕ್‍ಗಳ ಸುರಿಮಳೆಯನ್ನೇ ಪಡೆದಿದ್ದಾರೆ.
ಈ ಹಿಂದೆ ರಮ್ಯಾ, ದಶಕಗಳ ಕಾಲ ಸ್ಯಾಂಡಲ್ವುಡ್‍ನಲ್ಲಿ ಮಿಂಚಿದ್ದರು. ಇದೀಗ ಅವರು ಕಂಬ್ಯಾಕ್ ಮಾಡಿದ್ದಾರೆ ಎಂದೇ ಹೇಳಬಹುದು. ಸದ್ಯ ಹಾಸ್ಟೆಲ್ ಹುಡುಗರು, ಉತ್ತರಾಕಂಡ ಚಿತ್ರದಲ್ಲಿ ಆ್ಯಕ್ಟ್ ಮಾಡುತ್ತಿದ್ದು ಚಂದನವನದಲ್ಲಿ ಮಿಂಚಲು ಮತ್ತೊಮ್ಮೆ ರೆಡಿ ಆಗಿ ಬಂದಿದ್ದಾರೆ ಎಂದೇ ಹೇಳಬಹುದು.