ಬೀದರ್

ಬಾಲ್ಯವಿವಾಹದ ವಿರುದ್ಧ ಮಕ್ಕಳು ಗಟ್ಟಿತನ ಪ್ರದರ್ಶಿಸಬೇಕು-ಕೆ.ನಾಗಣ್ಣಗೌಡ

ಬೀದರ, ಆಗಸ್ಟ್ 10 – ಬೀದರ ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಮಕ್ಕಳು ಗಟ್ಟಿತನ ಪ್ರದರ್ಶಿಸುವ ಮೂಲಕ ಬಾಲ್ಯವಿವಾಹದಿಂದ ತಮಗೆ ತಾವೇ ರಕ್ಷಣೆ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ.ನಾಗಣ್ಣಗೌಡ ಹೇಳಿದರು. ಅವರು ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಷ್ಟಿçÃಯ ಶಿಕ್ಷಣ ಸೊಸೈಟಿ, ವಿದ್ಯಾನಿಕೇತನ ಸಂಸ್ಥೆ, ಜೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರು ಹಾಗೂ ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆ ಇವರ ಸಹಯೋಗದಲ್ಲಿ ಆಯೋಜಿಸಿದ ಬಾಲ್ಯವಿವಾಹ ನಿಷೇಧ ಕುರಿತು ವಾಕಥಾನ ಮತ್ತು ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಕ್ಕಳು ತಮ್ಮ ಓದಿನ ಕಡೆ ಗಮನಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು 18 ವಯಸ್ಸಿನವರೆಗೆ ಮದುವೆ ಇಲ್ಲಾ ಎಂಬವುದರ ಬಗ್ಗೆ ದೃಡ ನಿರ್ಧಾರ ತೆಗೆದುಕೊಳ್ಳಬೇಕು. ತಮ್ಮ ಸುತ್ತಮುತ್ತಲು ಯಾರಾದರೂ ತಮ್ಮ ಮಕ್ಕಳಿಗೆ 18 ವರ್ಷದೊಳಗೆ ಮದುವೆ ಮಾಡಿಸುತ್ತಿರುವುದು ಕಂಡುಬAದರೆ ಗ್ರಾಮೀಣ ಪ್ರದೇಶದಲ್ಲಿ ಶಾಲೆಯ ಮುಖ್ಯ ಗುರುಗಳಿಗೆ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ, ಅಂಗನವಾಡಿ ಮೇಲ್ವಿಚಾರಕರಿಗೆ ಹಾಗೂ ನಗರ ಪ್ರದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆಗೆ ಅಥವಾ 1098, 112 ಕರೆ ಮಾಡಿ ಮಾಹಿತಿ ನೀಡಬೇಕು. ಪುರುಷರು ಸಹ ತಾವು ಮದುವೆಯನ್ನು 18 ವರ್ಷ ಪುರೈಸಿದ ಹುಡುಗಿಗೆ ಆಗುವುದಾಗಿ ನಿರ್ಧರಿಸಬೇಕು ಇಲ್ಲದಿದ್ದರೆ ತಾವು ಜೈಲು ಉಟ ಸವಿಯಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ರಾಘವೇಂದ್ರ ಎಚ್.ಸಿ ಮಾತನಾಡಿ, ಮಕ್ಕಳಿಗೆ ಬಾಲ್ಯವಿವಾಹದ ಬಗ್ಗೆ ತಪ್ಪು ಕಲ್ಪನೆಗಳಿವೆ ನಮ್ಮ ವ್ಯವಸ್ಥೆ ಅವರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಎಡವಿದೆ. ಭಾರತ ದೇಶ ಸ್ವಾತಂತ್ರö್ಯವಾಗುವ ಮುಂಚೆಯೇ (1929 ರ ಬಾಲ್ಯ ವಿವಾಹ ನಿಷೇದ ಕಾಯ್ದೆ) ದೇಶದಲ್ಲಿ ಬಾಲ್ಯವಿವಾಹ ನಿಷೇದ ಕಾಯ್ದೆ ಜಾರಿಗೆ ಬಂದಿದೆ ಇನ್ನೇನು ಕೆಲವೇ ವರ್ಷಗಳಲ್ಲಿ ಈ ಕಾಯ್ದೆ ಜಾರಿಯಾಗಿ ನೂರು ವರ್ಷ ಪುರೈಸಲಿವೆ ಆದರು ನಮ್ಮ ದೇಶದಲ್ಲಿ ಈ ಅನಿಷ್ಠ ಪದ್ಧತಿ ದೂರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
18 ವರ್ಷದೊಳಗಿನ ಮಕ್ಕಳಿಗೆ ವಿವಾಹವಾಗಿ ಅವರ ಜೊತೆ ಲೈಂಗಿಕ ಕ್ರೀಯೆ ನಡೆಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಬೇಕು ಎಂದು 2018 ರಲ್ಲಿ ಸುಪ್ರೀಂ ಕೊರ್ಟ ಹೇಳಿದೆ. ದೇಶದ ಜನಸಂಖ್ಯೆಲ್ಲಿ ಶೇ.40 ಪ್ರತಿಶತ ಮಕ್ಕಳ ಸಂಖ್ಯೆ ಇದೆ ಆದರು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಮಕ್ಕಳಿಗೆ ಇಂದಿನ ಮಕ್ಕಳೆ ನಾಳೆಯ ಪ್ರಜೆಗಳು ಎಂಬ ತಪ್ಪನ್ನು ನಮ್ಮ ವ್ಯವಸ್ಥೆ ಮಕ್ಕಳ ತಲೆಯಲ್ಲಿ ತುಂಬಿದೆ ಆದರೆ ನಿಜವಾಗಿ 1955 ರ ಭಾರತ ಪೌರತ್ವ ಕಾಯ್ದೆ ಅಡಿಯಲ್ಲಿ ಇಂದಿನ ಮಕ್ಕಳು ಇಂದೆ ಪ್ರಜೇಯಾಗಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಬಾಲ್ಯವಿವಾಹ ತಡೆಗಟ್ಟುವಲ್ಲಿ ಎಲ್ಲಾ ಪ್ರಮಾಣಿಕವಾಗಿ ಕೆಲಸ ಮಾಡಬೇಕಾಗಿದೆ ಎಂದರು.
ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬಿ ಮಾತನಾಡಿ, ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 45,557 ಮಕ್ಕಳು ಬಾಲ್ಯವಿವಾಹಕ್ಕೆ ಗುರಿಯಾಗಿ ತಮ್ಮ ತಾಯಿತನ ವಯಸ್ಸಿಗೂ ಮುಂಚೆಯೇ ತಾಯಿಯಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ ಆದ್ದರಿಂದ ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ನಾವೇಲ್ಲರೂ ಕಾರ್ಯಪ್ರವೃತ್ತರಾಗಬೇಕು. ಬಾಲ್ಯವಿವಾಹ ತಡೆಯುವಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಮಹತ್ವದಾಗಿದ್ದು ಶಿಕ್ಷಣ ಇಲಾಖೆಯು ಮಕ್ಕಳಿಗೆ ಬಾಲ್ಯವಿವಾಹದ ಕುರಿತು ತಿಳುವಳಿಕೆ ಮೂಡಿಸುವ ಜೊತೆಗೆ ಶಾಲೆಯಲ್ಲಿರುವ ದಾಖಲಾತಿಯ ಅನುಗುಣವಾಗಿ ಮಕ್ಕಳ ಹಾಜರಾತಿಯಾಗುತ್ತಿದೆಯೇ ಅಥವಾ ಇಲ್ಲವೋ ಎಂಬುದರ ಮೇಲೆ ಗಮನ ಹರಿಸಿ, ಶಾಲೆ ಬಿಟ್ಟ ಮಕ್ಕಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದರೆ ಬಾಲ್ಯವಿವಾಹ ತಡೆಯಬಹುದು ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಭಾಕರ ಮಾತನಾಡಿ, ಜಿಲ್ಲೆಯಲ್ಲಿ ಏಪ್ರೀಲ್‌ನಿಂದ ಇಲ್ಲಿಯವರೆಗೆ ಸುಮಾರು 20 ಬಾಲ್ಯವಿವಾಹವನ್ನು ತಡೆಯಲಾಗಿದೆ ಹಾಗೂ 100 ಬಾಲ್ಯವಿವಾಹ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದ ಅವರು ಜನರಲ್ಲಿ ಬಾಲ್ಯವಿವಾಹವಾದ್ದಲ್ಲಿ ಅಥವಾ ಮಾಡಿಸಿದಲ್ಲಿ ಶಿಕ್ಷೆ ಇದೆ ಎಂಬ ಭಾವನೆ ಎಲ್ಲರಲ್ಲಿ ಬರಬೇಕು ಅಂದಾಗಲೇ ಬಾಲ್ಯವಿವಾಹ ತಡೆಯಲು ಸಾಧ್ಯ ಎಂದು ಹೇಳಿದರು.
ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆ ಚೈಲ್ಡ್ ರೈಟ್ಸ್ ಟ್ರಸ್ಟ್ ಬೆಂಗಳೂರಿನ ವೆಂಕಟೇಶ್.ಬಿ ಪ್ರಸ್ತಾವಿಕವಾಗಿ ಮಾತನಾಡಿದರು.
ವೇದಿಕೆ ಕಾರ್ಯಕ್ರಮಕ್ಕು ಮುಂಚೆ ಬಾಲ್ಯವಿವಾಹ ನಿಷೇದ ಕುರಿತು ವಾಕಥಾನ್ ಜಾಗೃತಿ ಜಾಥವು ಕರ್ನಾಟಕ ಪದವಿ ಮಹಾವಿದ್ಯಾಲದಿಂದ ಆರಂಭವಾಗಿ ಬಸವೇಶ್ವರ ವೃತ್ತ, ಭಗತಸಿಂಗ್ ವೃತ್ತ, ಹರಳಯ್ಯ ವೃತ್ತÀ, ಅಂಬೇಡ್ಕರ ವೃತ್ತದ ಮಾರ್ಗವಾಗಿ ಸಾಗಿ ಪುನ: ಕರ್ನಾಟಕ ಪದವಿ ಮಹಾವಿದ್ಯಾಲಯದ ಆವರಣಕ್ಕೆ ಬಂದು ಸೇರಿತು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿದ್ರಾಮಪ್ಪ ಕಲ್ಯಾಣರಾವ ಕನಕಟ್ಟೆ, ವಿದ್ಯಾನಿಕೇತನ ಬೆಂಗಳೂರಿನ ನಿರ್ದೇಶಕ ಡಾ. ನಾಗರಾಜ ಎಂ, ಮಕ್ಕಳ ಹಕ್ಕುಗಳ ಸಮಿತಿಯ ಅಧ್ಯಕ್ಷೆ ರಜಿಯಾ ಬಳಬಟ್ಟಿ, ಕರ್ನಾಟಕ ರಾಷ್ಟಿçÃಯ ಶಿಕ್ಷಣ ಸಂಸ್ಥೆಯ ಜಂಟಿ ನಿರ್ದೇಶಕ ಸತೀಶ ಪಾಟೀಲ್, ಕರ್ನಾಟಕ ರಾಷ್ಟಿçÃಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಹಗ್ಗರಗಿ, ಕರ್ನಾಟಕ ಬಾಲ್ಯವಿವಾಹ ವಿರೋಧಿ ವೇದಿಕೆಯ ಆಂದೋಲನದ ನಾಯಕಿ ಪ್ರೀಯಾಂಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ, ಪ್ರಶಾಂತ ಬಿರಾದಾರ, ಲತಾ ಸೇರಿದಂತೆ ವಿವಿಧ ಸಂಘ-ಸAಸ್ಥೆಯ ಸದಸ್ಯರು, ಮಕ್ಕಳ ಹಕ್ಕು ಘಟಕದ ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ವಿವಿಧ ಶಾಲಾ-ಕಾಲೇಜಿನ ಮಕ್ಕಳು ಹಾಗೂ ಇತರರು ಉಪಸ್ಥಿತರಿದ್ದರು.
Ghantepatrike kannada daily news Paper

Leave a Reply

error: Content is protected !!